ಬೆಂಗಳೂರು :Karnataka New CM Siddaramaiah : ಹಲವು ದಿನಗಳ ಹಗ್ಗ ಜಗ್ಗಾಟದ ನಂತರ ಕೊನೆಗೂ ರಾಜ್ಯದ ಮುಖ್ಯಮಂತ್ರಿ ಯಾರು ಎನ್ನುವ ಅಧಿಕೃತ ಘೋಷಣೆ ಹೊರ ಬಿದ್ದಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಡಿಕೆ ಶಿವಕುಮಾರ್ ಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಕಾಂಗ್ರೆಸ್ ಮುಖಂಡ ಕೆಸಿ ವೇಣುಗೋಪಾಲ್ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಮೇ 20 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಡಿಕೆ ಶಿವಕುಮಾರ್ ಒಬ್ಬರಿಗೆ ಮಾತ್ರ ಡಿಸಿಎಂ ಪಟ್ಟವನ್ನು ನೀಡುವುದಾಗಿ ಕೆಸಿ ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ.
ಅಂತೂ ಇಂತೂ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಗೊಂದಲಕ್ಕೆ ಅಧಿಕೃತ ತೆರೆ ಬಿದ್ದಿದೆ. ಸಿದ್ದರಾಮಯ್ಯ ರಾಜ್ಯದ ನೂತನ ಮುಖ್ಯಮಂತ್ರಿ ಎನ್ನುವುದನ್ನು ಎಐಸಿಸಿ ಅಧಿಕೃತವಾಗಿ ಘೋಷಿಸಿದೆ. ಈ ಮೂಲಕ ಕಳೆದ ನಾಲ್ಕೈದು ದಿಂಗಳಿಂದ ನಡೆಯುತ್ತಿದ್ದ ಹಗ್ಗ ಜಗ್ಗಾಟಕ್ಕೂ ತೆರೆ ಬಿದ್ದಿದೆ. ಸಿದ್ದರಾಮಯ್ಯ ಅವರ ಹಿರಿತನ, ಮುಂಬರುವ ಲೋಕಸಭೆ, ಜಿ.ಪಂ ಚುನಾವಣೆ ಎಲ್ಲಾವನ್ನೂ ಗಮನದಲ್ಲಿಟ್ಟುಕೊಂಡು ಎಐಸಿಸಿ ಈ ನಿರ್ಧಾರ ತೆಗೆದುಕೊಂಡಿದೆ.
ಇದನ್ನೂ ಓದಿ : Karnataka CM Race: ಎಐಸಿಸಿ ಅಧ್ಯಕ್ಷ ಖರ್ಗೆ ನಿವಾಸದಲ್ಲಿ ಒಗ್ಗಟ್ಟು ಪ್ರದರ್ಶಿಸಿದ 'ಸಿದ್ದು-ಡಿಕೆಶಿ'
ನಿನ್ನೆ ತಡ ರಾತ್ರಿವರೆಗೂ ಇಬ್ಬರೂ ನಾಯಕರು ಸಿಎಂ ಸ್ಥಾನಕಾಗಿ ಪಟ್ಟು ಹಿಡಿದು ಕುಳಿತಿದ್ದರು. ಕೊನೆಗೂ ತಮ್ಮ ಹಠ ಸಡಿಲಿಸುವಂತೆ ಡಿ.ಕೆ ಶಿವಕುಮಾರ್ ಮನವೊಲಿಸುವಲ್ಲಿ ಕಾಂಗ್ರೆಸ್ ಕೇಂದ್ರ ನಾಯಕರು ಸಫಲರಾಗಿದ್ದಾರೆ. ಡಿಕೆಶಿ ಬೇಡಿಕೆಯಂತೆ ಒಬ್ಬರಿಗೆ ಮಾತ್ರ ಡಿಸಿಎಂ ಪಟ್ಟ ನೀಡಲು ಹೈ ಕಮಾಂಡ್ ಅಸ್ತು ಎಂದಿದೆ. ಅಲ್ಲದೆ, ಲೋಕಸಭೆ ಚುನಾವಣೆವರೆಗೆ ಕೆಪಿಸಿಸಿ ಸಾರಥ್ಯವನ್ನು ಕೂಡಾ ಡಿಕೆ ಶಿವಕುಮಾರ್ ಅವರೇ ವಹಿಸಲಿದ್ದಾರೆ.
Karnataka's secure future and our peoples welfare is our top priority, and we are united in guaranteeing that. pic.twitter.com/sNROprdn5H
— DK Shivakumar (@DKShivakumar) May 18, 2023
ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ.
ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಜೊತೆಗೆ ನಮ್ಮ ಎಲ್ಲಾ ಗ್ಯಾರೆಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ. pic.twitter.com/V0OoO7JUKQ
— Siddaramaiah (@siddaramaiah) May 18, 2023
ಇದನ್ನೂ ಓದಿ : ಮಾಧ್ಯಮ ಮಿತ್ರರು ಬಿಜೆಪಿಯ ‘ನಕಲಿ ಸುದ್ದಿ ಕಾರ್ಖಾನೆ’ಗೆ ಬಲಿಯಾಗಿದ್ದಾರೆ
ಇನ್ನು ಅಧಿಕಾರ ಹಂಚಿಕೆ ಸೂತ್ರಗಳ ಬಗ್ಗೆ ವೇಣುಗೋಪಾಲ್ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಅಧಿಕಾರ ಹಂಚಿಕೆ ಜನರ ಜೊತೆ ಆಗಲಿದೆ ಎಂದಷ್ಟೇ ಹೇಳಿದ್ದಾರೆ.
ಈ ಮೂಲಕ 13 ಬಾರಿ ಬಜೆಟ್ ಮಂಡಿಸಿ ಅನುಭವ ಇರುವ ಸಿದ್ದರಾಮಯ್ಯ ಮತ್ತೆ ರಾಜ್ಯದ ಸಾರಥ್ಯ ವಹಿಸಲಿದ್ದಾರೆ. ಐದು ದಶಕಗಳ ರಾಜಕೀಯ ಅನುಭವ ಹೊಂದಿರುವ ಸಿದ್ದರಾಮಯ್ಯ ಹಿಂದುಳಿದ ವರ್ಗದ ನಾಯಕ.
ಇದನ್ನೂ ಓದಿ : ʼಸುಧಾಕರ್ ಸೋತು ಭ್ರಮನಿರಸನರಾಗಿʼ ಏನೇನೋ ಹೇಳ್ತಾರೆ : ಸಿದ್ದು ಪರ ಎಂಟಿಬಿ ಬ್ಯಾಟ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.