Textbook Revision Row: ರೋಹಿತ್ ಚಕ್ರತೀರ್ಥ ವಿರುದ್ಧ ಕಾನೂನು ಕ್ರಮಕ್ಕೆ ಸಿದ್ದರಾಮಯ್ಯ ಆಗ್ರಹ
`ಬಸವಣ್ಣನವರ ವಿಚಾರವೂ ಸೇರಿ ಆಕ್ಷೇಪ ವ್ಯಕ್ತವಾಗಿರುವ ಅಂಶಗಳನ್ನು ಪರಿಷ್ಕರಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಹಾಗಿದ್ದರೆ ಈಗಿನ ಪರಿಷ್ಕೃತ ಪಠ್ಯವನ್ನು ಕೈಬಿಡಲಾಗುವುದೇ? ಇದನ್ನು ಸಿಎಂ ಸ್ಪಷ್ಟಪಡಿಸಬೇಕು`
ಬೆಂಗಳೂರು: ನೂತನ ಪರಿಷ್ಕೃತ ಪಠ್ಯ ರಚನೆಯಾಗುವವರೆಗೆ ಹಳೆಯ ಪಠ್ಯವನ್ನೇ ಮುಂದುವರಿಸಿ ಎಂದು ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
‘ವಿಸರ್ಜನೆ ಮಾಡಬೇಕಾಗಿರುವು ಪರಿಷ್ಕೃತ ಪಠ್ಯವನ್ನು, ಈಗಾಗಲೇ ಅವಧಿ ಮುಗಿದಿರುವ ಪಠ್ಯಪುಸ್ತಕ ಪರಿಶೀಲನಾ ಸಮಿತಿಯನ್ನಲ್ಲ. ಪೂರ್ವಗ್ರಹ ಪೀಡಿತ ಅಧ್ಯಕ್ಷನನ್ನು ಕಿತ್ತುಹಾಕಿದ ಮೇಲೆ ಆ ಸಮಿತಿ ಶಿಫಾರಸು ಮಾಡಿರುವ ಪಠ್ಯವನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ? ಜನತೆಯಲ್ಲಿ ಮೂಡಿರುವ ಗೊಂದಲವನ್ನು ಪರಿಹರಿಸುವಂತಹ ಸ್ಪಷ್ಟತೆ ರಾಜ್ಯದ ಮುಖ್ಯಮಂತ್ರಿಯವರ ಮಾತಿನಲ್ಲಿರಬೇಕು. ಇವರ ಮಾತು ಇನ್ನಷ್ಟು ಗೊಂದಲಗಳನ್ನು ಸೃಷ್ಟಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರು ಬೋಧಿಸಲಿರುವುದು ಹಳೆಯ ಪಠ್ಯವೇ? ಪರಿಷ್ಕೃತ ಪಠ್ಯವೇ?’ ಎಂದು ಪ್ರಶ್ನಿಸಿದ್ದಾರೆ.
ಖರ್ಗೆ ಮೇಲುಗೈ ಆಗುತ್ತದೆಂಬ ಭಯದಿಂದ ಡಿಕೆಶಿ-ಸಿದ್ದರಾಮಯ್ಯರಿಂದ ಹೊಂದಾಣಿಕೆ ನಾಟಕ: ಬಿಜೆಪಿ
RSS ತಂಟೆಗೆ ಬರಬೇಡಿ…ಹುಷಾರ್! ಸಿದ್ದರಾಮಯ್ಯಗೆ ಈಶ್ವರಪ್ಪ ಖಡಕ್ ವಾರ್ನಿಂಗ್
‘ನಾಡಗೀತೆ ಮತ್ತು ರಾಷ್ಟ್ರಕವಿ ಕುವೆಂಪುರನ್ನು ಗೇಲಿಮಾಡಿರುವ, ಸಮಾಜ ಸುಧಾರಕರಾದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಸವಣ್ಣನವರನ್ನು ಅವಮಾನಿಸಿರುವ ರೋಹಿತ್ ಚಕ್ರತೀರ್ಥರನ್ನು ಪಠ್ಯಪರಿಷ್ಕರಣಾ ಸಮಿತಿ ಅಧ್ಯಕ್ಷ ಸ್ಥಾನದಿಂದ ಮಾತ್ರವಲ್ಲ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದಲೂ ಕಿತ್ತುಹಾಕಬೇಕು. ಕಳೆದ 10 ವರ್ಷಗಳಿಂದ ಕನ್ನಡ ನುಡಿ, ಸಾಹಿತ್ಯ ಮತ್ತು ಸಾಹಿತಿಗಳನ್ನು ಗೇಲಿ ಮಾಡುತ್ತಾ ಬಂದಿರುವ, ಸಾಮಾಜಿಕ ಜಾಲತಾಣಗಳಲ್ಲಿ ವಿಕೃತಿಯ ಅಭಿಪ್ರಾಯಗಳನ್ನು ಹಂಚಿಕೊಂಡು ಸಾಮಾಜಿಕ ಆರೋಗ್ಯ ಹಾಳುಗೆಡಹುತ್ತಾ ಬಂದಿರುವ ರೋಹಿತ್ ಚಕ್ರತೀರ್ಥ ಎಂಬ ಕಿಡಿಗೇಡಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.