ಬೆಂಗಳೂರು: ದಲಿತ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರ ಮೇಲುಗೈ ಆಗುತ್ತದೆ ಎಂಬ ಭಯದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಹೊಂದಾಣಿಕೆಯ ನಾಟಕ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. #ದಲಿತವಿರೋಧಿಕಾಂಗ್ರೆಸ್ ಹ್ಯಾಶ್ ಟ್ಯಾಗ್ ಬಳಸಿ ಬಿಜೆಪಿ ಶನಿವಾರ ಸರಣಿ ಟ್ವೀಟ್ ಮಾಡಿದೆ.
‘ಮುಂದೆ ನೀವು ಸಿಎಂ ಆಗಲು ನಾವು ಸಹಕರಿಸುತ್ತೇವೆ’ ಎಂದು ಖರ್ಗೆ ಅವರಿಗೆ ಜೆಡಿಎಸ್ ಹೇಳಿದ್ದು ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರಿಗೆ ಬರಸಿಡಿಲು ಬಡಿದಂತಾಗಿದೆ. 2013ರಲ್ಲಿ ದಲಿತ ನಾಯಕ ಸಿಎಂ ಆಗುವುದನ್ನು ತಪ್ಪಿಸಿದ ಕಾಂಗ್ರೆಸ್ 2023ಕ್ಕೂ ಅದೇ ತಂತ್ರ ಅನುಸರಿಸುತ್ತಿದೆ. ದಲಿತ ನಾಯಕರೆಂದರೆ ಏಕೆ ಇಷ್ಟು ಅಸಹನೆ?’ ಎಂದು ಪ್ರಶ್ನಿಸಿದೆ.
"ಮುಂದೆ ನೀವು ಸಿಎಂ ಆಗಲು ನಾವು ಸಹಕರಿಸುತ್ತೇವೆ" ಎಂದು ಖರ್ಗೆ ಅವರಿಗೆ ಜೆಡಿಎಸ್ ಹೇಳಿದ್ದು ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರಿಗೆ ಬರಸಿಡಿಲು ಬಡಿದಂತಾಗಿದೆ.
2013 ರಲ್ಲಿ ದಲಿತ ನಾಯಕ ಸಿಎಂ ಆಗುವುದನ್ನು ತಪ್ಪಿಸಿದ ಕಾಂಗ್ರೆಸ್ 2023 ಕ್ಕೂ ಅದೇ ತಂತ್ರ ಅನುಸರಿಸುತ್ತಿದೆ.
ದಲಿತ ನಾಯಕರೆಂದರೆ ಏಕೆ ಇಷ್ಟು ಅಸಹನೆ?#ದಲಿತವಿರೋಧಿಕಾಂಗ್ರೆಸ್
— BJP Karnataka (@BJP4Karnataka) June 4, 2022
ದಲಿತ ನಾಯಕ ಖರ್ಗೆ ಅವರ ಮೇಲುಗೈ ಆಗುತ್ತದೆ ಎಂಬ ಭಯದಿಂದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರು ಹೊಂದಾಣಿಕೆಯ ನಾಟಕ ಮಾಡುತ್ತಿದ್ದಾರೆ.
ದಲಿತ ನಾಯಕನೋರ್ವ ಸಿಎಂ ಆಗುತ್ತಾರೆ ಎನ್ನುವ ಭಯ ನಿಮ್ಮಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುವಂತೆ ಮಾಡಿತೆ?#ದಲಿತವಿರೋಧಿಕಾಂಗ್ರೆಸ್
— BJP Karnataka (@BJP4Karnataka) June 4, 2022
ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ವಿಸರ್ಜಿಸಿದ ಸರ್ಕಾರ
‘ದಲಿತ ನಾಯಕ ಖರ್ಗೆ ಅವರ ಮೇಲುಗೈ ಆಗುತ್ತದೆ ಎಂಬ ಭಯದಿಂದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರು ಹೊಂದಾಣಿಕೆಯ ನಾಟಕ ಮಾಡುತ್ತಿದ್ದಾರೆ. ದಲಿತ ನಾಯಕನೋರ್ವ ಸಿಎಂ ಆಗುತ್ತಾರೆ ಎನ್ನುವ ಭಯ ನಿಮ್ಮಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುವಂತೆ ಮಾಡಿತೆ?’ ಎಂದು ಬಿಜೆಪಿ ಕುಟುಕಿದೆ.
‘ನಮ್ಮದು ದಲಿತಪರ ಪಕ್ಷ ಎನ್ನುವ ಕಾಂಗ್ರೆಸ್, ವಾಸ್ತವದಲ್ಲಿ ದಲಿತ ಸಮುದಾಯವನ್ನು ಮೇಲೇರಲು ಬಿಡುವುದೇ ಇಲ್ಲ. ಸಿಎಂ ಆಗಲಿದ್ದ ಡಾ.ಜಿ.ಪರಮೇಶ್ವರ್ ಅವರನ್ನು ಸೋಲಿಸಿದರು, ನಂತರ ಡಿಸಿಎಂ ಸ್ಥಾನದಿಂದಲೂ ಕಿತ್ತೆಸೆದರು, ಈಗ ಇವರ ದೃಷ್ಟಿ ಖರ್ಗೆ ಮೇಲೆ! ದಲಿತರನ್ನು ಸಿಎಂ ಮಾಡುವುದಿಲ್ಲ ಎಂದು #ದಲಿತವಿರೋಧಿಕಾಂಗ್ರೆಸ್ ಪಣ ತೊಟ್ಟಿದೆಯೇ?’ ಎಂದು ಬಿಜೆಪಿ ಟೀಕಿಸಿದೆ.
ನಮ್ಮದು ದಲಿತಪರ ಪಕ್ಷ ಎನ್ನುವ ಕಾಂಗ್ರೆಸ್, ವಾಸ್ತವದಲ್ಲಿ ದಲಿತ ಸಮುದಾಯವನ್ನು ಮೇಲೇರಲು ಬಿಡುವುದೇ ಇಲ್ಲ.
ಸಿಎಂ ಆಗಲಿದ್ದ ಪರಮೇಶ್ವರ್ ಅವರನ್ನು ಸೋಲಿಸಿದರು, ನಂತರ ಡಿಸಿಎಂ ಸ್ಥಾನದಿಂದಲೂ ಕಿತ್ತೆಸೆದರು, ಈಗ ಇವರ ದೃಷ್ಟಿ ಖರ್ಗೆ ಮೇಲೆ!
ದಲಿತರನ್ನು ಸಿಎಂ ಮಾಡುವುದಿಲ್ಲ ಎಂದು #ದಲಿತವಿರೋಧಿಕಾಂಗ್ರೆಸ್ ಪಣ ತೊಟ್ಟಿದೆಯೇ?
— BJP Karnataka (@BJP4Karnataka) June 4, 2022
ಸಿದ್ದರಾಮಯ್ಯ :
2013 - ಪರಮೇಶ್ವರ್ ಸೋಲಿಗೆ ಪಣಸಿದ್ದರಾಮಯ್ಯ & ಡಿಕೆಶಿ :
2023 - ಖರ್ಗೆ ಕಟ್ಟಿಹಾಕಲು ಪಣಒಬ್ಬ ದಲಿತ ನಾಯಕನನ್ನು ಹಿಮ್ಮೆಟ್ಟಿಸಲು ಎಷ್ಟೊಂದು ಉತ್ಸಾಹ!!!#ದಲಿತವಿರೋಧಿಕಾಂಗ್ರೆಸ್
— BJP Karnataka (@BJP4Karnataka) June 4, 2022
ಇದನ್ನೂ ಓದಿ: ಜಾಮಿಯಾ ಮಸೀದಿಯಲ್ಲಿ ದೇಗುಲ! ಇಂದು ಹಿಂದೂ ಸಂಘಟನೆಗಳಿಂದ ಶ್ರೀರಂಗಪಟ್ಟಣ ಚಲೋ
‘ಅಖಂಡ ಶ್ರೀನಿವಾಸ್ ಮೂರ್ತಿ ಮನೆಯ ಮೇಲೆ ಮತಾಂಧರು ದಾಳಿ ನಡೆಸಿದಾಗ ‘ಕೈ’ ನಾಯಕರು ಕೈಕಟ್ಟಿ ಕುಳಿತಿದ್ದರು. ಮತಾಂಧರನ್ನು ಓಲೈಸಲು ದಲಿತರ ಮೇಲಿನ ದಾಳಿಯನ್ನೂ ಕಾಂಗ್ರೆಸ್ ಸಮರ್ಥಿಸಿಕೊಳ್ಳುತ್ತದೆ! 2013ರ ಚುನಾವಣೆಯಲ್ಲಿ ಪರಮೇಶ್ವರ್ ಸೋಲಿಗೆ ಸಿದ್ದರಾಮಯ್ಯ ಪಣ. 2023ರ ಚುನಾವಣೆಗೆ ಖರ್ಗೆ ಕಟ್ಟಿಹಾಕಲು ಸಿದ್ದರಾಮಯ್ಯ & ಡಿಕೆಶಿ ಪಣ. ಒಬ್ಬ ದಲಿತ ನಾಯಕನನ್ನು ಹಿಮ್ಮೆಟ್ಟಿಸಲು ಎಷ್ಟೊಂದು ಉತ್ಸಾಹ!!!’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.