ಕೆರೆಗಳಂತಾದ ಸಿಲಿಕಾನ್ ಸಿಟಿ ರಸ್ತೆಗಳು
ರಾತ್ರಿ ಇಡೀ ನಗರಾದ್ಯಂತ ಧಾರಾಕಾರ ಮಳೆ, ಭಾರಿ ಮಳೆಯಿಂದಾಗಿ ರಸ್ತೆಗಳಲ್ಲಿ ತುಂಬಿ ಹರಿದ ನೀರು.
ಬೆಂಗಳೂರು: ಬೆಂಗಳೂರಿನಲ್ಲಿ ವರುಣ ಮತ್ತೆ ಅಬ್ಬರಿಸಿದ್ದಾನೆ. ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಇಡೀ ಸುರಿದ ಮಳೆಗೆ ತಗ್ಗು ರಸ್ತೆಗಳು ಮತ್ತು ಅಂಡರ್ ಪಾಸ್ ರಸ್ತೆಗಳು ಜಲಾವೃತಗೊಂಡಿದ್ದು ಕೆರೆಗಳಂತಾಗಿದೆ. ಕೆ.ಆರ್. ಪುರದ ಭೀಮಯ್ಯ ಬಡಾವಣೆ ಸಂಪೂರ್ಣ ಜಲಾವೃತವಾಗಿದೆ.
ನಗರದ ಚಂದ್ರ ಲೇಔಟ್, ಕೋರಮಂಗಲ, ನಾಯಂಡಹಳ್ಳಿಯ ಮನೆಗಳಿಗೆ ನೀರು ನುಗ್ಗಿದೆ. ಮಳೆಯಿಂದಾಗಿ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿದೆ. ಭಾರಿ ಮಳೆಯಿಂದಾಗಿ IHMCT ಬಾಯ್ಸ್ ಹಾಸ್ಟೆಲ್ ಗೋಡೆ ಕುಸಿದಿದೆ.