ಧಾರವಾಡ : ಧಾರವಾಡ ಜಿಲ್ಲೆಯ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯೊಳಗಿರುವ  ಪ್ರದೇಶಗಳನ್ನು 28 ಏಕ ಸದಸ್ಯ ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ,  ಅವುಗಳ ಸೀಮಾ ಗಡಿಯನ್ನು ನಿರ್ಣಯಿಸಿದೆ. ಪ್ರತಿಯೊಂದು ಜಿಲ್ಲಾ ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಗ್ರಾಮಗಳನ್ನೊಳಗೊಂಡ ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಪ್ರಕಟಣೆ ಹೊರಡಿಸಿರುವ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಸದಸ್ಯ ಕಾರ್ಯದರ್ಶಿಗಳು, ಧಾರವಾಡ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 ದಿವಸಗಳ ಒಳಗಾಗಿ ಅಂದರೆ ಸೆಪ್ಟೆಂಬರ್ 19, 2023 ಮಂಗಳವಾರ ಸಂಜೆ 5 ಗಂಟೆಯ ಒಳಗೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.


ಆಕ್ಷೇಪಣೆಗಳನ್ನು ಆನ್‍ಲೈನ್ https://rdpr.karnataka.gov.in/rdc/public/ಮೂಲಕ ಹಾಗೂ ಖುದ್ದಾಗಿ, ಅಥವಾ ಅಂಚೆಯ ಮೂಲಕ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ, 3ನೇ ಗೇಟ್, 2ನೇ ಮಹಡಿ, ಕೊಠಡಿ ಸಂಖ್ಯೆ:222/ಎ, ಬಹುಮಹಡಿ ಕಟ್ಟಡ, ಅಂಬೇಡ್ಕರ್ ವೀಧಿ, ಬೆಂಗಳೂರು-560001 ಗೆ ಸಲ್ಲಿಸಬಹುದು.


ಇದನ್ನೂ ಓದಿ- ಹೆಸರಿಡದ ಸಿನಿಮಾ ರಿಲೀಸ್‌ಗೆ ಡೇಟ್‌ ಫಿಕ್ಸ್‌ : ವಿಕಾಸ್ ಬಹ್ಲ್‌ ನಿರ್ದೇಶನದ ಚಿತ್ರ


ಧಾರವಾಡ ಜಿಲ್ಲೆಯ ಜಿಲ್ಲಾ ಪಂಚಾಯತ್ ವ್ಯಾಪ್ತಿಯೊಳಗೆ ಧಾರವಾಡ ತಾಲೂಕು 7, ಅಳ್ನಾವರ 1, ನವಲಗುಂದ 3, ಅಣ್ಣಿಗೇರಿ 2, ಹುಬ್ಬಳ್ಳಿ 5, ಕಲಘಟಗಿ 5, ಕುಂದಗೋಳ 5 ಒಟ್ಟು 28 ಏಕಸದಸ್ಯ ಜಿಲ್ಲಾಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನು ನಿಗದಿಪಡಿಸಲಾಗಿದೆ. 


ಧಾರವಾಡ ತಾಲೂಕಿನ ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು


1-ಗರಗ: ಗರಗ+ಅಗಸನಹಳ್ಳಿ, ಮಾದನಭಾವಿ, ಹೊಸಟ್ಟಿ, ಮುಗಳಿ, ಹಂಗರಕಿ, ತಡಕೋಡ, ತಿ.ಮ. ತಡಕೋಡ, ತಿ.ಮ. ತಡಕೋಡ, ಖಾ.ಮ.ತಡಕೋಡ+ಶೇಡಬಾಳ, ದುಬ್ಬನಮರಡಿ ಕೊಟಬಾಗಿ, ಕಲ್ಲೂರ, ಜೀರಿಗವಾಡ,
2-ಉಪ್ಪಿನಬೆಟಗೇರಿ : ಹನುಮನಕೊಪ್ಪ, ಹನುಮನಾಳ, ಕರಡಿಗುಡ್ಡ, ಪುಡಕಲಕಟ್ಟಿ, ಕಲ್ಲೆ, ಕುರುಬಗಟ್ಟಿ, ಮುಳಮುತ್ತಳ, ಮಂಗಳಗಟ್ಟಿ, ಲೋಕೂರ, ಶಿಬಾರಗಟ್ಟಿ.
3-ನರೇಂದ್ರ: ನರೇಂದ್ರ, ಕು.ಮ. ನರೇಂದ್ರ, ಖಾ.ಮ. ನರೇಂದ್ರ, ದೇ.ಮ. ನರೇಂದ್ರ, ದಾಸನಕೊಪ್ಪ, ಕೋಟೂರ, ಶಿಂಗನಹಳ್ಳಿ+ಕುಮ್ಮನಾಯಕನಕೊಪ್ಪ, ಬೇಲೂರ+ಹೆಗ್ಗೇರಿ, ನೀರಲಕಟ್ಟಿ, ತೇಗೂರ, ಹಳೆ ತೇಗೂರ, ಬೋಗೂರ, ವೆಂಕಟಾಪೂರ, ಗುಳೇದಕೊಪ್ಪ+ಮದಿಕೊಪ್ಪ, ದುರ್ಗದಕೇರಿ,


ಇದನ್ನೂ ಓದಿ- ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿಗಳ ಪಟ್ಟಿ ವೈರಲ್


4-ಅಮ್ಮಿನಭಾವಿ : ಅಮ್ಮಿನಭಾವಿ, ಯಾದವಾಡ, ಲಕಮಾಪೂರ, ಮರೇವಾಡ, ತಿಮ್ಮಾಪೂರ, ಮ. ಅಮ್ಮಿನಬಾವಿ, ಹಾರೋಬೆಳವಡಿ, ಕಬ್ಬೇನೂರ. 
5-ಹೆಬ್ಬಳ್ಳಿ: ಹೆಬ್ಬಳ್ಳಿ, ಕನಕೂರ, ತಲವಾಯಿ, ವನಹಳ್ಳಿ, ಕವಲಗೇರಿ+ಬೆನಕನಮಟ್ಟಿ, ಚಂದನಮಟ್ಟಿ, ಮಾರಡಗಿ, ಸೋಮಾಪೂರ (ಅಲ್ಲಾಪೂರ)+ಘೋಂಗಡಿಕೊಪ್ಪ, ಗೋವನಕೊಪ್ಪ, ದಂಡಿಕೊಪ್ಪ, ಶಿವಳ್ಳಿ. 
6-ಮುಗದ : ಮುಗದ, ಕ್ಯಾರಕೊಪ್ಪ, ಕೆಲಗೇರಿ ಗ್ರಾಮಿಣ ಪ್ರದೇಶ, ರಾಮಾಪೂರ, ವೀರಾಪೂರ, ಕಲ್ಲಾಪೂರ, ಹೊಸವಾಳ, ಮಂಡಿಹಾಳ, ವರವನಾಗಲಾವಿ, ದಡ್ಡಿಕಮಲಾಪೂರ, ಮುಮ್ಮಿಗಟ್ಟಿ, ಚಿಕ್ಕಮಲ್ಲಿಗವಾಡ, ಹಿರೆಮಲ್ಲಿಗವಾಡ,
7-ನಿಗದಿ: ನಿಗದಿ+ಬೊಮ್ಮರಸಿಕೊಪ್ಪ, ಬೆನಕನಕಟ್ಟಿ, ಬಾಡ, ಮನಸೂರ, ಸಲಕಿನಕೊಪ್ಪ, ದೇವರಹುಬ್ಬಳ್ಳಿ (ನಾರಾಯಣದೇವರಕೊಪ್ಪ), ಮುರಕಟ್ಟಿ+ಮಲ್ಲೂರ, ಕಲಕೇರಿ+ಹುಣಸಿಕುಮರಿ, ದೇವಗಿರಿ, ಲಾಳಗಟ್ಟಿ, ಹಳ್ಳಿಗೇರಿ, ಅಂಬ್ಲಿಕೊಪ್ಪ, ಹೊಲ್ತಿಕೋಟಿ+ರಾಗಿಕಲ್ಲಾಪೂರ, ಮಾವಿನಕೊಪ್ಪ, ಮನಗುಂಡಿ+ಬೆಳ್ಳಿಗಟ್ಟಿ, ಯರಿಕೊಪ್ಪ, ಕಣವಿಹೊನ್ನಾಪೂರ, ನಾಯಕನಹುಲಿಕಟ್ಟಿ, 
ಅಳ್ನಾವರ ತಾಲೂಕಿನ ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು 
8-ಹೊನ್ನಾಪೂರ : ಹುಲಿಕೇರಿ, ಕಡಬಗಟ್ಟಿ, ಹಿಂಡಸಗೇರಿ, ಬೆಣಚಿ, ಬಾಲಗೇರಿ, ಡೋರಿ, ಕುಂಬಾರಕೊಪ್ಪ, ಕೋಗಿಲಗೇರಿ, ಅರವಟಗಿ, ಅಂಬೊಳ್ಳಿ, ಕಂಬಾರಗಣವಿ, ಹೊನ್ನಾಪೂರ.
ನವಲಗುಂದ ತಾಲೂಕಿನ ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು 
9-ಮೊರಬ : ಶಿರೂರ, ಆಹೆಟ್ಟಿ, ಗುಮ್ಮಗೋಳ, ಬ್ಯಾಲ್ಯಾಳ, ಮೊರಬ, ತಲೆಮೊರಬ, ಶಿರಕೋಳ, ಹನಸಿ, ಬಳ್ಳೂರ,  
10-ಅಳಗವಾಡಿ : ಅಳಗವಾಡಿ, ಜಾವೂರ, ಹೆಬ್ಬಾಳ, ಅಮರಗೋಳ, ಗೊಬ್ಬರಗುಂಪಿ, ಬೆಳವಟಗಿ, ಕಡದಳ್ಳಿ, ಸೊಟಕನಾಳ, ನಾಗನೂರ, ಗುಡಿಸಾಗರ, ದಾಟನಾಳ, ನಾಯಕನೂರ, ಭೋಗಾನೂರ, ಖನ್ನೂರ, ತಡಹಾಳ, ಅರಹಟ್ಟಿ, ಕೊಂಗವಾಡ.
11-ಕುಸುಗಲ್ಲ : ತಿರ್ಲಾಪೂರ, ಹಾಳಕುಸುಗಲ್, ಶಾನವಾಡ ಕಾಲವಾಡ, ಕರ್ಲವಾಡ, ಚಿಲಕವಾಡ, ಬೆಳಹಾರ, ಅರೇಕುರಹಟ್ಟಿ, ಪಡೇಸೂರ, ಯಮನೂರ, ಕುಮಾರಕೊಪ್ಪ, 
ಅಣ್ಣಿಗೇರಿ ತಾಲೂಕಿನ ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು 
12-ಶಲವಡಿ: ತುಪ್ಪದಕುರಹಟ್ಟಿ, ನಾವಳ್ಳಿ, ಅಡ್ನೂರ, ಕಿತ್ತೂರ, ಶಲವಡಿ, ಹಳ್ಳಿಕೇರಿ, ಇಬ್ರಾಹಿಂಪೂರ,
13-ನಲವಡಿ:  ಶಿಶ್ವಿನಹಳ್ಳಿ, ಬೆನ್ನೂರ, ದುಂದೂರ, ಬಲ್ಲರವಾಡ, ನಾಗರಹಳ್ಳಿ, ನಲವಡಿ, ಮಣಕವಾಡ, ಭದ್ರಾಪೂರ, ಮಜ್ಜಿಗುಡ್ಡ, ಬಸಾಪೂರ, ಸಾಸ್ವಿಹಳ್ಳಿ, ಕೊಂಡಿಕೊಪ್ಪ, ಸೈದಾಪೂರ.
ಹುಬ್ಬಳ್ಳಿ ತಾಲೂಕಿನ ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು
14 -ಬ್ಯಾಹಟ್ಟಿ:  ಬ್ಯಾಹಟ್ಟಿ, ಸುಳ್ಳ, ಹೆಬಸೂರ, ಕೀರೆಸೂರ 
15-ಕುಸುಗಲ್ಲ: ಕುಸುಗಲ್ಲ, ಮಂಟೂರ, ನಾಗರಹಳ್ಳಿ, ಹಳ್ಯಾಳ, ಅದರಗುಂಚಿ, ಮುರಾರಹಳ್ಳಿ, ಕೊಟಗೊಂಡಹುಣಸಿ.
16-ಕೋಳಿವಾಡ :ಕೋಳಿವಾಡ, ಮಲ್ಲಿಗವಾಡ, ಉಮಚಗಿ, ಇಂಗಳಹಳ್ಳಿ, ಶಿರಗುಪ್ಪಿ, ಬಂಡಿವಾಡ.
17-ನೂಲ್ವಿ: ನೂಲ್ವಿ, ಶೆರೇವಾಡ, ಛಬ್ಬಿ, ವರೂರ, ಕಂಪ್ಲಿಕೊಪ್ಪ, ಬು.ಅರಳಿಕಟ್ಟಿ, ಅಗಡಿ, ಪಾಲಿಕೊಪ್ಪ, ತಿರುಮಲಕೊಪ್ಪ,
18-ಅಂಚಟಗೇರಿ : ಅಂಚಟಗೇರಿ, ಅ. ತಿಮ್ಮಸಾಗರ, ಬೆಳಗಲಿ, ಬಮ್ಮಸಮುದ್ರ, ಇನಾಂವೀರಾಪೂರ, ಪಾಳೆ, ಕರಡಿಕೊಪ್ಪ, ಕುರಡಿಕೇರಿ, ಕಟ್ನೂರ, ಮಾವನೂರ, ಗಿರಿಯಾಲ, ಬುಡರಸಿಂಗಿ, ಚನ್ನಾಪೂರ, ಚವರಗುಡ್ಡ, ರಾಮಾಪೂರ, ರಾಯನಾಳ, ಗಂಗಿವಾಳ, ದೇವರಗುಡಿಹಾಳ, ರೇವಡಿಹಾಳ, ಪರಸಾಪೂರ.
ಕಲಘಟಗಿ ತಾಲೂಕಿನ ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು 
19-ಗಳಗಿ : ಗಳಗಿ, ಹುಲಕೊಪ್ಪ, ಕರ್ಲಕೊಪ್ಪ, ಹಸರಂಬಿ, ದೇವಲಿಂಗಿಕೊಪ್ಪ, ದಾಸನೂರ, ಜಮ್ಮಿಹಾಳ, ಜಿ. ಬಸನಕೊಪ್ಪ, ಬಸವರಶಿಕೊಪ್ಪ, ಕನ್ನೆನಾಯಕನಕೊಪ್ಪ, ನೀರಸಾಗರ, ಧುಮ್ಮವಾಡ, ಗಂಭ್ಯಾಪೂರ, ಎಮ್ಮೆಟ್ಟಿ, ಲಿಂಗನಕೊಪ್ಪ. 
20-ಹಿರೇಹೊನ್ನಿಹಳ್ಳಿ : ಹಿರೇಹೊನ್ನಿಹಳ್ಳಿ, ಧೂಳಿಕೊಪ್ಪ, ಬೇಗೂರ, ಬಿಸರಳ್ಳಿ, ಹುಲ್ಲಂಬಿ, ತುಮರಿಕೊಪ್ಪ, ರಂಗಾಪೂರ, ಮುತ್ತಗಿ, ಬಿ. ಶಿಗಿಗಟ್ಟಿ, ಶಿವನಗರ, ಅರೇಬಸನಕೊಪ್ಪ, ಕುರವಿನಕೊಪ್ಪ, ಬಿ.ಗುಡಿಹಾಳ.
21-ಮಿಶ್ರಿಕೋಟಿ: ಮಿಶ್ರಿಕೋಟಿ, ಗಂಜಿಗಟ್ಟಿ+ಸುತಗಟ್ಟಿ, ಭೋಗೇನಾಗರಕೊಪ್ಪ, ಬಗಡಗೇರಿ,ಸೂರಶೆಟ್ಟಿಕೊಪ್ಪ, ನಾಗನೂರ, ದ್ಯಾಮಾಪೂರ, ದಾಸ್ತಿಕೊಪ್ಪ, ರಾಮನಾಳ, ಉಗ್ನಿಕೇರಿ, ಕಾಡನಕೊಪ್ಪ, ಕಾಮಧೇನು, ಹಾರೋಗೇರಿ, ಚಳಮಟ್ಟಿ.
22-ದೇವಿಕೊಪ್ಪ : ಸಂಗಮೇಶ್ವರ, ಕೂಡಲಗಿ, ಸೂಳಿಕಟ್ಟೆ, ಮಸಳಿಕಟ್ಟೆ, ಕಂದ್ಲಿ, ಡಿಂಬವಳ್ಳಿ, ಹಟಕಿನಾಳ, ಕಲಕುಂಡಿ, ದೇವಿಕೊಪ್ಪ, ನೆಹರುನಗರ, ಗಲಗಿನಕಟ್ಟಿ, ತಂಬೂರ, ಸಿದ್ಧನಬಾವಿ, ಶಿಂಗನಹಳ್ಳಿ, ಸಂಗಟಿಕೊಪ್ಪ, ಹುಲಗಿನಕೊಪ್ಪ, ಜುಂಜುನಬೈಲ, ಬೆಲವಂತರ, ಸೋಮನಕೊಪ್ಪ, ಶಿವನಾಪೂರ, ಹನಮಾಪೂರ, ಮುಕ್ಕಲ, ಕೆ. ಹುಣಸಿಕಟ್ಟಿ.
23-ತಬಕದಹೊನ್ನಿಹಳ್ಳಿ: ಮಡಕಿಹೊನ್ನಿಹಳ್ಳಿ, ಸಂಗೇದೇವರಕೊಪ್ಪ, ಹಿಂಡಸಗೇರಿ, ಜಿನ್ನೂರ, ಮಲಕನಕೊಪ್ಪ, ದ್ಯಾವನಕೊಂಡ, ಬಮ್ಮಿಗಟ್ಟಿ, ನೆಲ್ಲಿಹರವಿ, ರಾಜಾಜೀನಗರ, ತಾವರಗೇರಿ, ಯಲವದಾಳ, ಅರಳಿಹೊಂಡ,  ಆಲದಕಟ್ಟಿ, ತಬಕದಹೊನ್ನಿಹಳ್ಳಿ, ಗುಡ್ಡದಹುಲಿಕಟ್ಟಿ,  ಬು.ಹುಲಿಕಟ್ಟಿ,  ಪರಸಾಪೂರ, ಸೋಲಾರಗೊಪ್ಪ, ಬೀರವಳ್ಳಿ, ಬೆಂಡಲಗಟ್ಟಿ, ಆಸ್ತಿಕಟ್ಟಿ, ರಾಜೀವನಗರ.
ಕುಂದಗೋಳ ತಾಲೂಕಿನ ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು 
24-ಯರಗುಪ್ಪಿ : ಯರಗುಪ್ಪಿ, ಮುಳ್ಳೊಳ್ಳಿ, ಚಿಕ್ಕನರ್ತಿ, ರೊಟ್ಟಿಗವಾಡ, ಕೊಂಕಣಕುರಟ್ಟಿ, ಗುಡೇನಕಟ್ಟಿ, ಪುರ  (ಕಡಪಟ್ಟಿ +ಅಲ್ಲಾಪೂರ),  ಯರಿನಾರಾಯಣಪೂರ, ಹಿರೇನರ್ತಿ, ಬಸಾಪೂರ, ಬೆನಕನಹಳ್ಳಿ, ಚಾಕಲಬ್ಬಿ, ಹೊಸಳ್ಳಿ.
25-ಕಮಡೊಳ್ಳಿ : ಕಮಡೊಳ್ಳಿ, ಶಿರೂರ, ಹಿರೇಹರಕುಣಿ, ಚಿಕ್ಕಹರಕುಣಿ, ಬು ತರ್ಲಘಟ್ಟ, ಬು.ಕೊಪ್ಪ, ನೆಲಗುಡ್ಡ, ಇಂಗಳಗಿ, ಹಿರೇಬೂದಿಹಾಳ, ಮತ್ತಿಗಟ್ಟಿ, ಹನುಮನಹಳ್ಳಿ, ರಾಮಾಪೂರ.
26-ಯಲಿವಾಳ : ಯಲಿವಾಳ, ಬೆಟದೂರ, ಇನಾಂಕೊಪ್ಪ, ಗುರುವಿನಹಳ್ಳಿ, ವಿಠಲಾಪೂರ, ರಾಮನಕೊಪ್ಪ ಹೊಸಕಟ್ಟಿ, ಜಿಗಳೂರ, ಬೆಳ್ಳಿಗಟ್ಟಿ, ಮಳಲಿ, ಕುಂಕೂರ, ತೀರ್ಥ, ಕೂಬಿಹಾಳ, ಹಂಚಿನಾಳ, ದೇವನೂರ, ಬಿಳೇಬಾಳ.
27-ಸಂಶಿ : ಸಂಶಿ, ಬರದ್ವಾಡ, ಕೊಡ್ಲಿವಾಡ, ಹಿರೇಗುಂಜಳ, ಚಿಕ್ಕಗುಂಜಳ, ಬಾಗವಾಡ, ಯರೇಬೂದಿಹಾಳ, ಪಶುಪತಿಹಾಳ.
28-ಗುಡಗೇರಿ : ಗುಡಗೇರಿ, ಮಂಡಿಗನಾಳ, ಹರ್ಲಾಪೂರ, ಸುಲ್ತಾನಪೂರ, ಗೌಡಗೇರಿ, ರಟ್ಟಿಗೇರಿ, ಸಂಕ್ಲಿಪೂರ, ಕಳಸ.


 ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದಿಂದ ಪ್ರಕಟಿಸಿರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಪ್ರಕಟಣೆಯನ್ನು ಜಿಲ್ಲೆಯ ಎಲ್ಲ ತಾಲೂಕು ತಹಶೀಲ್ದಾರ ಕಾರ್ಯಾಲಯ ಹಾಗೂ ತಾಲೂಕು ಪಂಚಾಯತ್ ಕಾರ್ಯಾಲಯಗಳ ಸೂಚನಾ ಫಲಕಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.