Between  two stations in Bangalore : ಇದು ನಮ್ಮ ಮೆಟ್ರೋದಲ್ಲಿ ವ್ಯಾಪ್ತಿಯಲ್ಲಿ ಇಂತದ್ದೊಂದು ಟ್ರಾವೆಲೇಟರ್ ಸ್ಕೈವಾಕ್ ಸ್ಥಾಪನೆಯ ಮೊದಲ ಯೋಜನೆ ಇದಾಗಿದೆ. ಇದು ನಮ್ಮ ಮೆಟ್ರೋದಲ್ಲಿ ವ್ಯಾಪ್ತಿಯಲ್ಲಿ ಇಂತದ್ದೊಂದು ಟ್ರಾವೆಲೇಟರ್ ಸ್ಕೈವಾಕ್ ಸ್ಥಾಪನೆಯ ಮೊದಲ ಯೋಜನೆ ಇದಾಗಿದೆ. ಬೆಂಗಳೂರು ಮೆಟ್ರೋ ಜಾಲದ ಎರಡು ಪ್ರಮುಖ ಮಾರ್ಗಗಳ ಮಧ್ಯೆ ಸಂಪರ್ಕವನ್ನು ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ. 


COMMERCIAL BREAK
SCROLL TO CONTINUE READING

ಟ್ರಾವೆಲೇಟರ್‌ನ ಸ್ಕೈವಾಕ್ ಪರಿಚಯವು ನಮ್ಮ ಮೆಟ್ರೋಗೆ ಮಹತ್ವದ ಮೈಲಿಗಲ್ಲು ಯೋಜನೆಗಳಲ್ಲಿ ಒಂದಾಗಿದೆ. ಬೆಂಗಳೂರಿನ ನಗರದ ಮೆಟ್ರೋ ಚೌಕಟ್ಟಿನೊಳಗೆ ಅಂತಹ ವ್ಯವಸ್ಥೆ ಮೊದಲ ಬಾರಿಗೆ ಅನುಷ್ಠಾನಗೊಳಿಸಲಾಗುತ್ತಿದೆ.


ಇದನ್ನು ಓದಿ :Madhuri Dixit : ನವಿಲಿನಂತೆ ಕಂಗೊಳಿಸುತ್ತಿರುವ ನಾಟ್ಯ ಮಯೂರಿ ಇವಳು !


BMRCL ಕೈಗೊಂಡ ಈ ಮೂಲಸೌಕರ್ಯ ಯೋಜನೆಯಿಂದ ಹಳದಿ ಮಾರ್ಗದ ಮೆಟ್ರೋ ನಿಲ್ದಾಣ (ಆರ್‌ವಿ ರಸ್ತೆ - ಬೊಮ್ಮಸಂದ್ರ) ಮತ್ತು ನೀಲಿ ಮಾರ್ಗದ ನಿಲ್ದಾಣ (ಕೆಆರ್ ಪುರಂನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಮಧ್ಯೆ ಸಂಪರ್ಕ ಸೇವೆ ಕಲ್ಪಿಸಲಿದೆ.


ಈ ಯೋಜನೆಯಿಂದ ಎರಡು ಮೆಟ್ರೋ ಮಾರ್ಗಗಳ ಇಂಟರ್‌ಚೇಂಜ್ ಮೆಟ್ರೊ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಿದೆ. ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಮೆಟ್ರೋ ಜಾಲದಲ್ಲಿ ಎರಡು ಪ್ರಮುಖ ನಿಲ್ದಾಣಗಳ ಮಧ್ಯೆ ಈ ಸ್ಕೈವಾಕ್ ತ್ವರಿತ ಮತ್ತು ಪರಿಣಾಮಕಾರಿ ಚಲನೆ ಸುಗಮಗೊಳಿಸುತ್ತದೆ ಎಂದು ಬಿಎಂಆರ್‌ಸಿಎಲ್ ವಿಶ್ವಾಸ ವ್ಯಕ್ತಪಡಿಸಿದೆ.


ಟ್ರಾಫಿಕ್ ಹೆಚ್ಚಿರುವ ಪ್ರಮುಖ ಜಂಕ್ಷನ್‌ನಲ್ಲಿ ನಿರ್ಮಿಸಲಾಗುತ್ತಿರುವ ಐದು ರ‍್ಯಾಂಪ್‌ಗಳ ಪೈಕಿ ಮೂರು ಮುಕ್ತಾಯದ ಹಂತದಲ್ಲಿವೆ.ಇದೇ ವರ್ಷ ಮೇ ಅಂತ್ಯದ ವೇಳೆಗೆ ಪ್ರದೇಶದ ಜನದಟ್ಟಣೆಯನ್ನು ಕಡಿಮೆ ಮಾಡಲು ಈ ಫ್ಲೈಓವರ್ ಕಾರ್ಯ ಮುಗಿಯಲಿದೆ. ಲ್ಲವು ಅಂದುಕೊಂಡಂತೆ ಆದರೆ ಮುಂದಿನ ದಿನಗಳಲ್ಲಿ ಜಯನಗರ-ಬಿಟಿಎಂ ಲೇಔಟ್‌ನಿಂದ ಎಚ್‌ಎಸ್‌ಆರ್ ಲೇಔಟ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಕಡೆಗೆ ಪ್ರಯಾಣಿಸುವ ವಾಹನಗಳಿಗೆ ಸಂಚಾರ ಅಡತಡೆ, ದಟ್ಟಣೆ ಇಲ್ಲದೇ ಮುಕ್ತ ಸಂಚಾರಕ್ಕೆ ಅನುಕೂಲ ಕಲ್ಪಿಸಲಿದೆ.  


ಇದನ್ನು ಓದಿ : ಪಹಣಿ (ಆರ್‌ಟಿಸಿ)ಗೆ ಆಧಾರ್ ಲಿಂಕ್ ಕಡ್ಡಾಯ : ಸರ್ಕಾರದಿಂದ ಹೊಸ ಆದೇಶ


ಈ ಯೋಜನಾ ವರದಿಗಳಿಗೆ ಸಂಬಂಧಿಸಿದಂತೆ (ಡಿಪಿಆರ್) ಸಿದ್ಧಪಡಿಸಿ ಟೆಂಡರ್ ಕರೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿದ್ಧತೆ ನಡೆದಿದೆ.