ಪಹಣಿ (ಆರ್‌ಟಿಸಿ)ಗೆ ಆಧಾರ್ ಲಿಂಕ್ ಕಡ್ಡಾಯ : ಸರ್ಕಾರದಿಂದ ಹೊಸ ಆದೇಶ

ಪಹಣಿ (ಆರ್‌ಟಿಸಿ)ಗೆ ಆಧಾರ್ ಜೋಡಣೆ ಮಾಡಬೇಕು ಎಂದು ಕರ್ನಾಟಕ ಸರ್ಕಾರದ ಹೊಸ ಆದೇಶವೊಂದು ಹೊರಡಿಸಿದ್ದು, ಈ ಕುರಿತ ಜವಾಬ್ದಾರಿಯನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ನೀಡಿದೆ.

Written by - Zee Kannada News Desk | Last Updated : Mar 18, 2024, 09:20 PM IST
  • 7 ವರ್ಷದ ಹಿಂದೆಯೇ ಕರ್ನಾಟಕ ಸರ್ಕಾರ ಆರ್‌ಟಿಸಿಗೆ ಆಧಾರ್‌ ಕಾರ್ಡ್ ಜೋಡಣೆ ಮಾಡುವ ಕಾರ್ಯವನ್ನು ಆರಂಭಿಸಿತ್ತು
  • ಜಮೀನಿನ ಉತಾರ ಮತ್ತು ಆಧಾರ್ ಕಾರ್ಡ್ ತೆಗೆದುಕೊಂಡು ಗ್ರಾಮದ ಗ್ರಾಮ ಒನ್ ಕೇಂದ್ರ, ಆನ್‌ಲೈನ್ ಕೇಂದ್ರ ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಗೆ ಭೇಟಿ ನೀಡಬೇಕೆಂದು ತಿಳಿಸಲಾಗಿದೆ.
  • ಈ ಕಡ್ಡಾಯವಾದ ಕಾರ್ಯವನ್ನು ಮಾಡಲು ಸರ್ಕಾರ ಗ್ರಾಮ ಆಡಳಿತ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿದೆ.
ಪಹಣಿ (ಆರ್‌ಟಿಸಿ)ಗೆ ಆಧಾರ್ ಲಿಂಕ್ ಕಡ್ಡಾಯ : ಸರ್ಕಾರದಿಂದ ಹೊಸ ಆದೇಶ title=

Aadhaar Link Mandatory for Pahani : ಕರ್ನಾಟಕ ಸರ್ಕಾರದ ಹೊಸ ಆದೇಶವೊಂದು ರೈತರ ಆತಂಕಕ್ಕೆ ಕಾರಣವಾಗಿದೆ. ಪಹಣಿ (ಆರ್‌ಟಿಸಿ)ಗೆ ಆಧಾರ್ ಜೋಡಣೆ ಕಡ್ಡಾಯ ಎಂದು ಸರ್ಕಾರ ಆದೇಶ ಹೊರಡಿಸಿದೆ. 

ಇನ್ನು ಮುಂದೆ ಸರ್ಕಾರದ ಸೌಲಭ್ಯವನ್ನು ಪಡೆಯಲು ಆರ್‌ಟಿಸಿ, ಆಧಾರ್ ಲಿಂಕ್ ಜೋಡಣೆ ಮಾಡುವುದು ಕಡ್ಡಾಯವಾಗಿದೆ ಎಂದು ಸರ್ಕಾರ ಹೇಳಿದೆ. ಆರ್‌ಟಿಸಿಗೆ ಆಧಾರ್ ಜೋಡಣೆ ಮಾಡಲು ಅನುಕೂಲವಾಗುವಂತೆ ಸರ್ಕಾರ ಹೊಸದಾದ ತಂತ್ರಾಂಶವನ್ನು ಸಿದ್ಧಗೊಳಿಸಿದೆ. ಈ ಕುರಿತು ಗ್ರಾಮ ಆಡಳಿತ ಅಧಿಕಾರಿಗಳು ಪ್ರಕಟಣೆ ಮೂಲಕ ಮಾಹಿತಿಯನ್ನು ನೀಡಿದ್ದಾರೆ. ಈ ಕಡ್ಡಾಯವಾದ ಕಾರ್ಯವನ್ನು ಮಾಡಲು ಸರ್ಕಾರ ಗ್ರಾಮ ಆಡಳಿತ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿದೆ. 

ಇದನ್ನು ಓದಿ : CET ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ : ಮಾರ್ಚ್ 20ರವೆರೆಗೂ ಅವಕಾಶ

ಅಗತ್ಯ ದಾಖಲೆಗಳು : 
ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಪಡೆಯಲು,  ಬ್ಯಾಂಕ್ ಸೌಲಭ್ಯಗಳನ್ನು ಪಡೆಯಲು ಮತ್ತು ಕೃಷಿ ಇಲಾಖೆ ಸೌಲಭ್ಯಗಳನ್ನು ಪಡೆಯಲು ಮತ್ತು ಬೆಳೆ ಪರಿಹಾರ ಪಡೆಯಲು ಜಮೀನಿನ ಉತಾರಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿರುತ್ತದೆ.

ಜಮೀನಿನ ಉತಾರ ಮತ್ತು ಆಧಾರ್ ಕಾರ್ಡ್ ತೆಗೆದುಕೊಂಡು ಗ್ರಾಮದ ಗ್ರಾಮ ಒನ್ ಕೇಂದ್ರ, ಆನ್‌ಲೈನ್ ಕೇಂದ್ರ ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಗೆ ಭೇಟಿ ನೀಡಬೇಕೆಂದು ತಿಳಿಸಲಾಗಿದೆ. 

 7 ವರ್ಷದ ಹಿಂದೆಯೇ ಕರ್ನಾಟಕ ಸರ್ಕಾರ ಆರ್‌ಟಿಸಿಗೆ ಆಧಾರ್‌ ಕಾರ್ಡ್ ಜೋಡಣೆ ಮಾಡುವ ಕಾರ್ಯವನ್ನು ಆರಂಭಿಸಿತ್ತು. ಕೆಲವು ರೈತರು ಆಧಾರ ಲಿಂಕ್ ಮಾಡಿದ್ದರು.  ಆದರೆ ಈಗ ಸರ್ಕಾರದ ಸೌಲಭ್ಯಗಳು ಬೇಕು ಎಂದರೆ ಕಡ್ಡಾಯವಾಗಿ ಜೋಡಣೆ ಮಾಡಬೇಕು ಎಂದು ಸರ್ಕಾರ ಹೇಳಿದ್ದು, ರೈತರು ಸರ್ಕಾರಿ ಸೌಲಭ್ಯ ಪಡೆದುಕೊಳ್ಳುವಲ್ಲಿ ವಿಫಲವಾಗುತ್ತಾರೆ. 

ಇದನ್ನು ಓದಿ : ಮಾರ್ಚ್ 31ರಿಂದ ಲಕ್ಷದ್ವೀಪಕ್ಕೆ ಬೆಂಗಳೂರಿನಿಂದ ಇಂಡಿಗೋ ನೇರ ವಿಮಾನಯಾನ ಆರಂಭ

ಚ್ಚಿನ ಸಂಖ್ಯೆಯ ಹಕ್ಕುಗಳು, ಗೇಣಿದಾರರು ಮತ್ತು ಬೆಳೆಗಳ ಮಾಹಿತಿ ಸತ್ತ ರೈತರ ಹೆಸರಿನಲ್ಲಿ ಇನ್ನೂ ಇವೆ. ಸರ್ಕಾರದ ಯೋಜನೆಗಳ ಸಹಾಯವನ್ನು ಪಡೆಯಲು, ಶಾಶ್ವತ ಪರಿಹಾರದ ಅಂಗವಾಗಿ ಆರ್‌ಟಿಸಿ, ಆಧಾರ್ ಲಿಂಕ್ ಮಾಡಲು ಸೂಚನೆ ನೀಡಲಾಗಿದೆ" ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಭೂ ಮಾಲೀಕರು, ರೈತರ ಮನಗೆ ಆಗಮಿಸಿದ ಸಂದರ್ಭದಲ್ಲಿ ಎಲ್ಲಾ ಆರ್‌ಟಿಸಿಗಳನ್ನು ಆಧಾರ್ ಕಾರ್ಡ್‌ ಜೊತೆ ಲಿಂಕ್ ಮಾಡುವ ಪ್ರಕ್ರಿಯೆಗೆ ರೈತರು ಸಹಕಾರ ನೀಡಬೇಕು" ಎಂದು ಸಚಿವರು ಮನವಿ ಮಾಡಿದ್ದಾರೆ.

"ಆರ್‌ಟಿಸಿ, ಆಧಾರ್ ಕಾರ್ಡ್‌ ಲಿಂಕ್‌ ಮಾಡುವುದರಿಂದ ಭೂ ಸಂಬಂಧಿತ ವಂಚನೆಗಳನ್ನು ತಡೆಗಟ್ಟಲು ಸಹಾಯಕವಾಗುತ್ತದೆ. ಮಾಲೀಕತ್ವದ ಖಚಿತತೆ ಖಚಿತಪಡಿಸಿಕೊಳ್ಳಲು ಸಹಾಯಕವಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News