ದಾವಣಗೆರೆ: ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ದಲಿತ ವಿರೋಧಿಗಳಿದ್ದಾರೆ. ಹಾಗಾಗಿಯೇ ನನಗೆ ಮೂರು ಬಾರಿ ಮುಖ್ಯಮಂತ್ರಿ ಹುದ್ದೆ ಕೈತಪ್ಪಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಭಾನುವಾರ ದಾವಣಗೆರೆಯಲ್ಲಿ ನಡೆದ ಛಲವಾದಿ ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ, ರಾಜ್ಯದಲ್ಲಿ ಈ ಮೊದಲು ಬಸವಲಿಂಗಪ್ಪ , ಕೆ.ಎಚ್.ರಂಗನಾಥ್, ಮಲ್ಲಿಕಾರ್ಜುನ ಖರ್ಗೆ ಅವರುಗಳು ಮುಖ್ಯಮಂತ್ರಿಗಳಾಗಬೇಕಿತ್ತು. ಆದರೆ ಆಗಲಿಲ್ಲ. ನನಗೂ ಕೂಡ ಮೂರು ಬಾರಿ ಮುಖ್ಯಮಂತ್ರಿಯಾಗುವ ಅವಕಾಶವಿತ್ತು. ಆದರೆ ಅದನ್ನು ಪಕ್ಷದಲ್ಲಿರುವ ಕೆಲ ದಲಿತ ವಿರೋಧಿಗಳು ತಪ್ಪಿಸಿದ್ದಾರೆ ಎಂದು ದುಗುಡ ವ್ಯಕ್ತಪಡಿಸಿದ್ದಾರೆ.


ದಲಿತರಿಗೆ ಯಾವುದೇ ದೇವರಿಲ್ಲ. ಅಂಬೇಡ್ಕರ್ ಅವರೇ ದೇವರು. ರಾಜಕೀಯವಾಗಿ ಸಮುದಾಯಕ್ಕಾಗುತ್ತಿರುವ ಅನ್ಯಾಯವನ್ನು ದಲಿತರು ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದಲೇ ನಾನು ಇಂದು ಸಮಾವೇಶದಲ್ಲಿ ಭಾಗವಹಿಸಿದ್ದು, ಅಂಬೇಡ್ಕರ್ ಹಾಕಿ ಕೊಟ್ಟ ಹಾದಿಯಲ್ಲಿ ನಾವು ನಡೆಯಬೇಕಿದೆ ಎಂದು ಸಮಾವೇಶದಲ್ಲಿ ಬೆಂಬಲಿಗರಿಗೆ ಕರೆ ನೀಡಿದರು.