South India's second Glass Sky Walk Bridge: ಸುಂದರ ಪ್ರಾಕೃತಿಕ ಸೌಂದರ್ಯದ ಮೂಲಕ ಕೊಡಗು ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿದೆ. ಸದ್ಯ ಈ ಪ್ರವಾಸೋದ್ಯಮಕ್ಕೆ ಗ್ಲಾಸ್‌ ಸ್ಕೈ ವಾಕ್ ಬ್ರಿಡ್ಜ್ ಹೊಸ ಸೇರ್ಪಡೆಯಾಗಿದೆ. ಖಾಸಗಿಯಾಗಿ ಆರಂಭವಾಗಿರುವ ಗ್ಲಾಸ್‌ ಸ್ಕೈ ವಾಕ್ ಬ್ರಿಡ್ಜ್ ಇಡೀ ದಕ್ಷಿಣ ಭಾರತದ ಗಮನ ಸೆಳೆಯುತ್ತಿದೆ. ಹಚ್ಚ ಹಸಿರ ಬೆಟ್ಟ ಗುಡ್ಡ ನಡುವಿರುವ ಆ ಗ್ಲಾಸ್ ಬ್ರಿಡ್ಜ್ ಹೇಗಿದೆ ಗೊತ್ತಾ... 


COMMERCIAL BREAK
SCROLL TO CONTINUE READING

ದಕ್ಷಿಣ ಭಾರತದ ಎರಡನೆ ಗ್ಲಾಸ್‌ ಸ್ಕೈ ವಾಕ್ ಬ್ರಿಡ್ಜ್ ಕೊಡಗಿನಲ್ಲಿ: 
ಪಶ್ಚಿಮ ಘಟ್ಟದ ಕಾಡು ಮತ್ತು ಬೆಟ್ಟಗಳ ಅದ್ಭುತ ನೋಟವೇ ರೋಮಾಂಚಕ ಸುತ್ತಲೂ ಹಸಿರಿರಲು.. ಬೆಟ್ಟ ಗುಡ್ಡದ ಇಕ್ಕೆಲಗಳು ಕೈ ಬೀಸಿ ಕರೆಯುತ್ತಿರಲು.. ಮುಗಿಲು ಕೈಗೆ ಸಿಗುವಂತಿರಲು.. ಗಾಜಿನ‌ ಮೇಲೆ ಹೆಜ್ಜೆ ಹಾಕಿ ಪ್ರಕೃತಿಯ ಸವಿಯುತ್ತಿರಲು.. ಇದೇ ಅಲ್ವಾ ಸ್ವರ್ಗ.. 


ಇದನ್ನೂ ಓದಿ- Rain Effect: ತುಮಕೂರಿನ ತಿಪಟೂರಿನಲ್ಲಿ ಅಂಡರ್ ಪಾಸ್ ಬಳಿ ಲಘು ಭೂಕುಸಿತ


ಹೌದು,  ಈ ಸ್ವರ್ಗಾನುಭವಕ್ಕೆ ಸಾಕ್ಷಿಯಾಗ್ತಿರೋದು ಕೊಡಗು. ವಾಸ್ತವವಾಗಿ, ಕೊಡಗಿನ ಹೆಸರು ಕೇಳಿದ್ರೆ ಆ ಸುಂದರ ಪ್ರಾಕೃತಿಕ ಸೌಂದರ್ಯದ ನೆನಪಾಗುತ್ತೆ. ಕೊಡಗಿನ‌ ಈ ಸ್ವಾಭಾವಿಕ ಪ್ರಕೃತಿಯ ಸೌಂದರ್ಯ ಇಡೀ ವಿಶ್ವದ ಗಮನ ಸೆಳೆದಿದೆ. ಅದ್ರಲ್ಲೂ ಇಲ್ಲಿನ ವೀವ್ ಪಾಯಿಂಟ್‌ಗಳಂತೂ ಮನಮೋಹಕ. ಅದರ ಸಾಲಿಗೆ ಸದ್ಯ ಬೆಟ್ಟದ ಇಕ್ಕೆಲಗಳ‌ ನಡುವೆ ಖಾಸಗಿಯವರಿಂದ ನಿರ್ಮಾಣವಾಗಿರುವ ಗ್ಲಾಸ್‌ ಸ್ಕೈ ವಾಕ್ ಬ್ರಿಡ್ಜ್ ಸೇರಿದೆ. ಹಸಿರ ಪ್ರಕೃತಿಯ ನಡುವೆ ಪಾರದರ್ಶಕ ಗಾಜಿನ ಮೇಲೆ ನಡೆಯುವ ರೋಮಾಂಚಕ ಅನುಭವ ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು. 


ಈ ಗ್ಲಾಸ್‌ ಸ್ಕೈ ವಾಕ್ ಬ್ರಿಡ್ಜ್ ಇರೋದು ಮಂಜಿನ ನಗರಿ ಮಡಿಕೇರಿ ಹೊರವಲಯದ ಉಡೋತ್ ಎಂಬಲ್ಲಿ. 31 ಮೀಟರ್ ಉದ್ದದ 2 ಮೀಟರ್ ಅಗಲದ 78 ಅಡಿ ಎತ್ತರದಲ್ಲಿರುವ ಈ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಎಲ್ಲರ ಗಮನ ಸೆಳೆಯುತ್ತಿದೆ. ಸುಮಾರು 5 ಟನ್ ಬಾರ ಹೊರುವ ಸಾಮರ್ಥ್ಯದ ಈ ಬ್ರಿಡ್ಜ್‌ನಲ್ಲಿ ಒಮ್ಮೆಗೆ 40-50 ಮಂದಿ ನಿಂತು ಪ್ರಕೃತಿಯ ಸೌಂದರ್ಯ ಸವಿಯಬಹುದು. ಇಂದು ವಿರಾಜಪೇಟೆ ಕ್ಷೇತ್ರದ ಶಾಸಕ ಎ ಎಸ್ ಪೊನ್ನಣ್ಣ ಅವರಿಂದ ಈ‌ ಬ್ರಿಡ್ಜ್ ಲೋಕಾರ್ಪಣೆಗೊಂಡಿದೆ. 


ಇದನ್ನೂ ಓದಿ- ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ 


ಒಟ್ಟಿನಲ್ಲಿ ಕೇರಳದ ವಯನಾಡ್‌ನಲ್ಲಿ ಖಾಸಗಿಯಾಗಿ ನಿರ್ಮಾಣವಾಗಿದ್ದ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಬಿಟ್ಟರೆ ದಕ್ಷಿಣ ಭಾರತದಲ್ಲಿ ಇರುವ ಗ್ಲಾಸ್ ಬ್ರಿಡ್ಜ್ ಎನ್ನುವ ಖ್ಯಾತಿಗೆ ಕೊಡಗಿನ ಈ ಗ್ಲಾಸ್ ಬ್ರಿಡ್ಜ್ ಪಾತ್ರವಾಗಿದೆ. ಇದು ಪ್ರವಾಸಿಗರನ್ನು ಕೊಡಗಿನತ್ತ ಮತ್ತಷ್ಟೂ ಆಕರ್ಷಿಸೋದಂತೂ ಸತ್ಯ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ