ಬೆಂಗಳೂರು: ಅತೃಪ್ತ ಶಾಸಕರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದಕ್ಕೆ ಸ್ಪೀಕರ್ ರಮೇಶ್ ಕುಮಾರ್ ಗೃಹ ಸಚಿವ ಎಂ ಬಿ ಪಾಟೀಲ್ ಮೇಲೆ ಕೆಂಡಾಮಂಡಲವಾಗಿದ್ದಾರೆ.


COMMERCIAL BREAK
SCROLL TO CONTINUE READING

ಎ.ಟಿ ರಾಮಸ್ವಾಮಿ ಮಾತನಾಡಿ ಅತೃಪ್ತ ಶಾಸಕರಿಗೆ ವಿಮಾನ ನಿಲ್ದಾಣದಿಂದ ವಿಧಾನಸಭೆಗೆ ಬರಲು ವಾಪಸ್ ತೆರಲು ಜೀರೋ ಟ್ರಾಫಿಕ್ ವ್ಯವಸ್ಥೆ  ಕಲ್ಪಿಸಿಕೊಡಲಾಯಿತಲ್ಲವೇ ? ಇದಕ್ಕೆಲ್ಲಾ ಕಾನೂನಿನಲ್ಲಿ ಅವಕಾಶವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮುಂದುವರೆದು  ಯಾರೋ ಗರ್ಭಿಣಿ ಅಂಗವಿಕಲ ವ್ಯಕ್ತಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಕೊಡುತ್ತಿರಾ ನೀವು ಎಂದು ಪ್ರಶ್ನಿಸಿದರು.



ಇನ್ನೊಂದೆಡೆ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ 'ಜೀರೋ ಟ್ರಾಫಿಕ್ ಅವರಿಗೆ ಸಿಕ್ಕಿತ್ತು ಎಂಬುದರ ಬಗ್ಗೆ ನನಗೆ ಖಚಿತ ಮಾಹಿತಿ ಇದೆ. ಒಂದು ವೇಳೆ ಅವ್ರಿಗೆ ಕೊಟ್ಟಿದ್ದೆ ಆದಲ್ಲಿ ಯಾವ ಆಧಾರದ ಮೇಲೆ ಅವರಿಗೆ ಕೊಟ್ಟಿದ್ರಿ? ಗೃಹ ಇಲಾಖೆ ಕೊಟ್ಟಿದ್ಯಾ ಅಥವಾ ಇಲ್ವಾ ಅಷ್ಟು ಮಾತ್ರ ಹೇಳಿ...ಇದರಿಂದ ಸಮಾಜಕ್ಕೆ ಏನು ಸಂದೇಶ ಹೋಗುತ್ತದೆ? ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಇದಕ್ಕೆ ಅವಕಾಶ ನೀಡಬಹುದೇ? ಎಂದು ಗೃಹ ಸಚಿವರನ್ನು ಪ್ರಶ್ನಿಸಿದರು. '



ಇದಕ್ಕೆ ಉತ್ತರಿಸಿದ ಎಂ.ಬಿ.ಪಾಟೀಲ್ ಅತೃಪ್ತ ಶಾಸಕರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಹೇಳಿದರು. ಇದಕ್ಕೆ ಏಕಾಏಕಿ ಕಿಡಿ ಸ್ಪೀಕರ್ ರಮೇಶ್ ಕುಮಾರ್ 'ನಿಮ್ಮ ಅಧಿಕಾರಿಗಳು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದನ್ನು ಇಡೀ ದೇಶವೇ ನೋಡಿದೆ ಈ ರೀತಿ ಉತ್ತರಿಸಲು ನಿಮಗೆ ನಿಮ್ಮ ಆತ್ಮ ಸಾಕ್ಷಿಯಾದರೂ ಒಪ್ಪುತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದರು.