ಮಂಗಳೂರು: ಪೈಲೆಟ್ ಆರೋಗ್ಯ ಕೈಕೊಟ್ಟ ಹಿನ್ನೆಲೆಯಲ್ಲಿ ಟೇಕ್ ಆಫ್ ಆಗಬೇಕಿದ್ದ ಸ್ಪೈಸ್ ಜೆಟ್ ವಿಮಾನ ರನ್ ವೇನಲ್ಲೇ ನಿಂತ ಘಟನೆ ಮಂಗಳವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಮಂಗಳೂರಿನಿಂದ ದುಬೈಗೆ ರಾತ್ರಿ 12.45ಕ್ಕೆ ತೆರಳಬೇಕಿದ್ದ ಸ್ಪೈಸ್ ಜೆಟ್ ಎಸ್‌ಜಿ-59 ವಿಮಾನ ರನ್ ವೇ ಅಲ್ಲಿ ಇನ್ನೇನು ಟೇಕ್ ಆಫ್ ಆಗಬೇಕು ಅನ್ನುವಷ್ಟರಲ್ಲಿ ಪೈಲೆಟ್ ಗೆ ಅನಾರೋಗ್ಯ ಕಾಡಿದೆ. ಈ ಕೂಡಲೇ ರನ್ ವೇ ಅಲ್ಲೇ ವಿಮಾನ ನಿಲ್ಲಿಸಿದ್ದರಿಂದ ಹಾರಾಟ ಸ್ಥಗಿತಗೊಂಡಿದೆ.  


ವಿಮಾನ ಹಾರಾಟ ಸ್ಥಗಿತಗೊಂಡದ್ದರಿಂದ ವಿಮಾನದಲ್ಲಿ 188 ಪ್ರಯಾಣಿಕರು ಪರ್ಯಾಯ ಪೈಲೆಟ್ ವ್ಯವಸ್ಥೆಗಾಗಿ ವಿಮಾನದಲ್ಲೇ ಹಲವು ಹಣತೆಗಳ ಕಾಲ ಜಾಗರಣೆ ಮಾಡಿದ್ದಾರೆ. ಇಂದು ಬೆಳಗ್ಗೆ 7 ಗಂಟೆಗೆ ಮತ್ತೆ ಪ್ರಯಾಣ ಬೆಳೆಸುವ ಸಿದ್ಧತೆ ನಡೆಸಲಾಗಿತ್ತಾದರೂ, ಪೈಲಟ್ ಆರೋಗ್ಯ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದರಿಂದ ಪ್ರಯಾಣ ರದ್ದುಗೊಳಿಸಲಾಗಿದೆ. ಪ್ರಸ್ತುತ ರನ್‌-ವೇಯಲ್ಲಿ ನಿಂತಿರುವ ಸ್ಪೈಸ್ ಜೆಟ್ ವಿಮಾನದಿಂದ ಉಳಿದ ವಿಮಾನಗಳ ಹಾರಾಟಕ್ಕೂ ತೊಂದರೆಯಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಗೆ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ.


ಟರ್ಕಿಯಿಂದ ಬರಬೇಕಾದ ಪರ್ಯಾಯ ಪೈಲಟ್ ಮಧ್ಯಾಹ್ನ ತಲುಪುವ ನಿರೀಕ್ಷೆಯಿದ್ದು, ವಿಮಾನ ತೆರಳಲು ಸಂಜೆ 4 ಗಂಟೆ ಸಮಯ ನಿಗದಿ ಮಾಡಲಾಗಿದೆ.