ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿಚಾರದಲ್ಲಿ ತಹಶೀಲ್ದಾರ್ ಎಡವಟ್ಟು!
ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿಚಾರದಲ್ಲಿ ತಹಶೀಲ್ದಾರ್ ಎಡವಟ್ಟು, ಆಂಜನೇಸ್ವಾಮಿ ಮೂಲ ಮಂದಿರ ಎಂದು ಆದೇಶದಲ್ಲಿ ಉಲ್ಲೇಖ
ಮಂಡ್ಯ: ಶ್ರೀರಂಗಪಟ್ಟಣದ ವಿವಾದಿತ ಜಾಮಿಯಾ ಮಸೀದಿಗೂ ಮೊದಲೇ ಆ ಜಾಗದಲ್ಲಿ ಮೂಡಲ ಬಾಗಿಲು ಆಂಜನೇಯ ಸ್ವಾಮಿ ಮೂಲ ಮಂದಿರ ಇತ್ತೆಂಬ ವಾದಕ್ಕೆ ತಹಶೀಲ್ದಾರ್ ಆದೇಶ ಪತ್ರ ಇದೀಗ ಹೌದೆಂದು ಒಪ್ಪಿಕೊಂಡಿದೆ.
ಇಂದು ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ರವೀಂದ್ರ ಅವರು ಹೊರಡಿಸಿರುವ ನಿಷೇಧಾಜ್ಞೆ ಆದೇಶ ಪತ್ರದಲ್ಲಿ ಪಟ್ಟಣದ ಜಾಮಿಯಾ ಮಸೀದಿ ಶ್ರೀ ಮೂಡಲ ಬಾಗಿಲು ಆಂಜನೇಯ ಸ್ವಾಮಿ ಮೂಲ ಮಂದಿರ ಎಂದು ನಮೂದಿಸಲಾಗಿದೆ.
ಇದನ್ನೂ ಓದಿ- Chandrashekhar Kambar : ಚಂದ್ರಶೇಖರ ಕಂಬಾರ ಹೆಸರಿನಲ್ಲಿ ಸೈಬರ್ ಖದೀಮರು ವಂಚನೆಗೆ ಯತ್ನ, ಪ್ರಕರಣ ದಾಖಲು
ಜಾಮಿಯಾ ಮಸೀದಿ ಇರುವಲ್ಲಿ ಮೊದಲು ಶ್ರೀ ಮೂಡಲ ಬಾಗಿಲು ಆಂಜನೇಯ ಮೂಲ ಮಂದಿರ ಇತ್ತೆಂಬ ಹಿಂದೂಪರ ಸಂಘಟನೆಗಳ ವಾದಕ್ಕೆ ಈ ಮೂಲಕ ಈ ಆದೇಶ ಪತ್ರದಲ್ಲಿನ ಉಲ್ಲೇಖ ಪುಷ್ಟಿ ದೊರೆತಿದೆ.
ಈ ಹಿಂದಿನ ಗೆಜೆಟ್ ನಲ್ಲಿ ಇರುವ ಆದೇಶದ ಅನ್ವಯ ತಹಶೀಲ್ದಾರ್ ಈ ಆದೇಶ ಹೊರಡಿಸಿದ್ದಾರೆಯೇ ಅಥವಾ ತಹಶೀಲ್ದಾರ್ ಶ್ವೇತ ಅವರೇ ಮಹಾ ಎಡವಟ್ಟು ಮಾಡಿದ್ದಾರೆಯೇ ಎಂಬ ಪ್ರಶ್ನೆಗಳು ಉದ್ಬವವಾಗಿದೆ.
ಇದನ್ನೂ ಓದಿ- ಬಾಯ್ ಫ್ರೆಂಡ್ ಜೊತೆ ಸೇರಿ ಯುವತಿಯಿಂದ ರಾಬರಿ ಯತ್ನ.!
ಒಟ್ಟಾರೆ ಜಾಮಿಯಾ ಸಮಿತಿಗೂ ಮೊದಲೆ ಶ್ರೀ ಮೂಡಲ ಬಾಗಿಲು ಆಂಜನೇಯ ಸ್ವಾಮಿ ಮೂಲ ಮಂದಿರ ಇತ್ತೆಂಬ ಹಿಂದೂಪರ ಸಂಘಟನೆ ವಾದಕ್ಕೆ ತಹಶೀಲ್ದಾರ್ ಪತ್ರ ದೊಡ್ಡ ಸಾಕ್ಷಿಯಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.