Chandrashekhar Kambar : ಚಂದ್ರಶೇಖರ ಕಂಬಾರ ಹೆಸರಿನಲ್ಲಿ ಸೈಬರ್ ಖದೀಮರು ವಂಚನೆಗೆ ಯತ್ನ, ಪ್ರಕರಣ ದಾಖಲು

ನನ್ನ ಹೆಸರಿನಲ್ಲಿ ಬೇರೆ ಬೇರೆ ವ್ಯಕ್ತಿಗಳಿಗೆ ವಾಟ್ಸ್ಯಾಪ್ ಸಂದೇಶ ಕಳಿಸುತ್ತಿರುವ ಕಿಡಿಗೇಡಿಗಳು ಧನ ಸಹಾಯ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಆದ್ದರಿಂದ ತಮ್ಮ ಹೆಸರು ದುರುಪಯೋಗವಾಗದಂತೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇನೆ. 

Written by - VISHWANATH HARIHARA | Last Updated : Jun 2, 2022, 07:26 PM IST
  • ಸಾಹಿತಿ ಚಂದ್ರಶೇಖರ ಕಂಬಾರ ಹೆಸರಿನಲ್ಲಿ ಸೈಬರ್ ಖದೀಮರು ವಂಚನೆ ಯತ್ನ
  • ನಗರದ ದಕ್ಷಿಣ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ
  • ಚಂಡಿಗಡ, ಕೋಲ್ಕತ್ತಾ ದಲ್ಲಿ ನನ್ನ ಸ್ನೇಹಿತರೊಬ್ಬರಿಗೆ ವಾಟ್ಸಾಪ್ ಮೂಲಕ ಮಸೇಜ್
Chandrashekhar Kambar : ಚಂದ್ರಶೇಖರ ಕಂಬಾರ ಹೆಸರಿನಲ್ಲಿ ಸೈಬರ್ ಖದೀಮರು ವಂಚನೆಗೆ ಯತ್ನ, ಪ್ರಕರಣ ದಾಖಲು title=

ಬೆಂಗಳೂರು : ಜ್ಞಾನಪೀಠ ಪ್ರಶಸ್ತಿ ವಿಜೇತ ಹಾಗೂ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಹೆಸರಿನಲ್ಲಿ ಸೈಬರ್ ಖದೀಮರು ವಂಚನೆ ಯತ್ನ ಸಂಬಂಧ ನಗರದ ದಕ್ಷಿಣ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆ ಯತ್ನ ಸಂಬಂಧ ಮಾಧ್ಯಮಗಳೊಂದಿಗೆ‌ ಪ್ರತಿಕ್ರಿಯಿಸಿದ ಕಂಬಾರ, ನನ್ನ ಹೆಸರಿನಲ್ಲಿ ಬೇರೆ ಬೇರೆ ವ್ಯಕ್ತಿಗಳಿಗೆ ವಾಟ್ಸ್ಯಾಪ್ ಸಂದೇಶ ಕಳಿಸುತ್ತಿರುವ ಕಿಡಿಗೇಡಿಗಳು ಧನ ಸಹಾಯ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಆದ್ದರಿಂದ ತಮ್ಮ ಹೆಸರು ದುರುಪಯೋಗವಾಗದಂತೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇನೆ. 

ಇದನ್ನೂ ಓದಿ : ಸಿನಿಮಾ ಖಳನಟನಿಂದ ಹಣಕ್ಕಾಗಿ ರಿಯಲ್ ಕಿಡ್ನಾಪ್: ಪೊಲೀಸರ ಅತಿಥಿಯಾದ ವಿಲನ್

ಚಂಡಿಗಡ, ಕೋಲ್ಕತ್ತಾ ದಲ್ಲಿ ನನ್ನ ಸ್ನೇಹಿತರೊಬ್ಬರಿಗೆ ವಾಟ್ಸಾಪ್  ಮೂಲಕ ಮಸೇಜ್ ಮಾಡಿದ್ದಾರೆ. ನಾನು ತೊಂದರೆಯಲ್ಲಿದ್ದೇನೆ, ಹಣದ ಸಹಾಯಬೇಕಿದೆ ಅಂದಿದ್ದಾರೆ. ಅವರ ಸ್ನೇಹಿತ ನನಗೆ ಕಾಲ್ ಮಾಡಿ ಈ ವಿಚಾರ ತಿಳಿಸಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ. ಈ‌ ಹಿಂದೆ ಕೂಡ ಇದೇ ರೀತಿ ಈ ಈ-ಮೇಲ್ ಗಳ ಮೂಲಕ ಹಣ ಕೇಳಿದ್ದರು. ಕೆಲ ಕಿಡಿಗೇಡಿಗಳು ನನ್ನ ಹೆಸರನ್ನು ಬಳಸಿಕೊಂಡು ಈ ರೀತಿ ಮಾಡ್ತಿದ್ದಾರೆ. ನಾನು ಆರೋಗ್ಯವಾಗಿದ್ದೇನೆ ಎಂದು ಚಂದ್ರಶೇಖರ ಕಂಬಾರ ಸ್ಟಷ್ಟನೆ ನೀಡಿದ್ದಾರೆ.

ಕವಿ, ಸಾಹಿತಿಯಾಗಿರುವ ಚಂದ್ರಶೇಖರ ಕಂಬಾರರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿ ಕಾರ್ಯ ನಿರ್ವಹಿಸಿದವರು. ಅವರ ಸಮಗ್ರ ಸಾಹಿತ್ಯ ಕೃತಿಗೆ 2010ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.

ಇದನ್ನೂ ಓದಿ : ಬೀಜ, ಗೊಬ್ಬರ ಕೊರತೆಯಾಗದಂತೆ ನಿಗಾ ವಹಿಸಿ: ಅಧಿಕಾರಿಗಳಿಗೆ ಮುಖ್ಯಮಂತ್ರಿ ಕಟ್ಟುನಿಟ್ಟಿನ ಸೂಚನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News