ಬೆಂಗಳೂರು :  ಎಸ್ ಎಸ್ ಎಲ್ ಸಿ ಪರೀಕ್ಷೆ ಯ ವೇಳಾ ಪಟ್ಟಿ ಈಗಾಗಲೇ ಪ್ರಕಟವಾಗಿದೆ. ಈ ಬಾರಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಈ ಬಾರಿ ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳನ್ನು ಹೆಚ್ಚಿಸಲಾಗಿದೆ. ಈ ವಿಚಾರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಯುಕ್ತ ಅನ್ಬು ಕುಮಾರ್ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಎಸ್ ಎಸ್ ಎಲ್ ಸಿ (SSLC) ಪರೀಕ್ಷೆಯಲ್ಲಿ ಪ್ರತಿ ವರ್ಷ 20 ಅಂಕಗಳಿಗೆ ಮಲ್ಟಿಪಲ್ ಚಾಯ್ಸ್ (Multiple choice) ಪ್ರಶ್ನೆಗಳಿರುತ್ತವೆ. ಆದರೆ ಈ ಬಾರಿ ಇದರ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಈ ಸಲ 30 ಅಂಕಗಳಿಗೆ ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳು ಬರಲಿವೆ. ಇನ್ನು ಎಸ್ ಎಸ್ ಎಲ್ ಸಿ ಪರೀಕ್ಷೆಯ ಅಂಕಗಳಲ್ಲಿಯೂ ಯಾವುದೇ ರೀತಿಯ ವ್ಯತ್ಯಾಸಗಳಿರುವುದಿಲ್ಲ. 100 ಅಂಕಗಳಿಗೆ ಪರೀಕ್ಷೆ (exam)  ನಡೆಯುತ್ತದೆ. ಇದರಲ್ಲಿ 20 ಅಂಕ ಇಂಟರ್ನೆಲ್ ಮತ್ತು 80 ಅಂಕಗಳಿಗೆ  ಮುಖ್ಯ ಪರೀಕ್ಷೆ ನಡೆಯುತ್ತದೆ. ಉಳಿದಂತೆ, ಪರೀಕ್ಷೆ ಎಸ್ ಎಸ್ಎಲ್ ಸಿ ಬೋರ್ಡ್ ಸ್ಟಾಂಡರ್ಡ್ ನಂತೆಯೇ ನಡೆಯಲಿದೆ ಎಂದು ಅನ್ಬು ಕುಮಾರ್ (Anbu Kumar ) ತಿಳಿಸಿದ್ದಾರೆ. 


ಇದನ್ನೂ ಓದಿ : Ramesh Jarkiholi: ಜಾರಕಿಹೊಳಿ ರಾಜೀನಾಮೆಯಿಂದ ತೆರವಾದ ಖಾತೆ ಯಾರ ಮುಡಿಗೆ?


ಇನ್ನು, ಎಸ್ ಎಸ್ ಎಲ್ ಸಿ ಪರೀಕ್ಷೆಯ ವೇಳಾ ಪಟ್ಟಿ (SSLC Time table) ಈಗಾಗಲೇ ಪ್ರಕಟವಾಗಿದ್ದು, ಜೂನ್ 21ರಿಂದ ಜುಲೈ 5ರವರೆಗೆ ಎಸ್ ಎಸ್ಎಲ್ ಸಿ ಪರೀಕ್ಷೆ ನಡೆಯಲಿದೆ.
 
ಎಸ್ ಎಸ್ಎಲ್ ಸಿ ಪರೀಕ್ಷೆಯ ವೇಳಾ ಪಟ್ಟಿ :  
ಜೂನ್ -21 : ಕನ್ನಡ (kannada) , ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಸಂಸ್ಕೃತ
ಜೂನ್ - 24 : ಗಣಿತ
ಜೂ -28 : ವಿಜ್ಞಾನ
ಜೂ -30 : ತೃತೀಯ ಭಾಷೆಗಳಾದ ಹಿಂದಿ (Hindi) , ಕನ್ನಡ, ಇಂಗ್ಲೀಷ್ , ಉರ್ದು, ಸಂಸ್ಕೃತ, ಕೊಂಕಣಿ, ತುಳು,
ಜು -2 : ದ್ವಿತೀಯ ಭಾಷೆ ಇಂಗ್ಲೀಷ್ /ಕನ್ನಡ
ಜು- 5: ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ. 


ಇದನ್ನೂ ಓದಿ : Siddaramaiah: 'ನೋಡೊದಕ್ಕು, ಹೇಳೊದಕ್ಕು ಅಸಹ್ಯವಾಗುತ್ತೆ, ಇಂತಹ ಮಾನಗೆಟ್ಟ ಸರ್ಕಾರ ಬೇಕಾ?'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.