Ramesh Jarkiholi: ಜಾರಕಿಹೊಳಿ ರಾಜೀನಾಮೆಯಿಂದ ತೆರವಾದ ಖಾತೆ ಯಾರ ಮುಡಿಗೆ?

ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ತೆರವಾದ ಮಹತ್ವದ ಜಲಸಂಪನ್ಮೂಲ ಖಾತೆಯನ್ನು ಸಿಎಂ ಯಾರ ಹೆಗಲಿಗೆ ಹಾಕುತ್ತಾರೆ ಎನ್ನುವುದು ಕುತೂಹಲ

Last Updated : Mar 3, 2021, 05:04 PM IST
  • ರಾಜ್ಯ ರಾಜಕಾಣದಲ್ಲಿ ಸಂಚಲನ ಮೂಡಿಸಿರುವ ರಾಸಲೀಲೆ ಸಿಡಿ ಪ್ರಕರಣದ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ
  • ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರಿಗೆ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಪತ್ರ ರವಾನೆ ಮಾಡಿದ್ದು, ಸಿಎಂ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
  • ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ತೆರವಾದ ಮಹತ್ವದ ಜಲಸಂಪನ್ಮೂಲ ಖಾತೆಯನ್ನು ಸಿಎಂ ಯಾರ ಹೆಗಲಿಗೆ ಹಾಕುತ್ತಾರೆ ಎನ್ನುವುದು ಕುತೂಹಲ
Ramesh Jarkiholi: ಜಾರಕಿಹೊಳಿ ರಾಜೀನಾಮೆಯಿಂದ ತೆರವಾದ ಖಾತೆ ಯಾರ ಮುಡಿಗೆ? title=

ಬೆಂಗಳೂರು: ರಾಜ್ಯ ರಾಜಕಾಣದಲ್ಲಿ ಸಂಚಲನ ಮೂಡಿಸಿರುವ ರಾಸಲೀಲೆ ಸಿಡಿ ಪ್ರಕರಣದ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ.

ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರಿ(BS Yediyurappa)ಗೆ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಪತ್ರ ರವಾನೆ ಮಾಡಿದ್ದು, ಸಿಎಂ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

Siddaramaiah: 'ನೋಡೊದಕ್ಕು, ಹೇಳೊದಕ್ಕು ಅಸಹ್ಯವಾಗುತ್ತೆ, ಇಂತಹ ಮಾನಗೆಟ್ಟ ಸರ್ಕಾರ ಬೇಕಾ?'

ಪ್ರಮುಖವಾಗಿ ರಮೇಶ್ ಜಾರಕಿಹೊಳಿ(Ramesh Jarkiholi) ರಾಜೀನಾಮೆಯಿಂದ ತೆರವಾದ ಮಹತ್ವದ ಜಲಸಂಪನ್ಮೂಲ ಖಾತೆಯನ್ನು ಸಿಎಂ ಯಾರ ಹೆಗಲಿಗೆ ಹಾಕುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

Ramesh Jarkiholi: ರಾಜೀನಾಮೆ ಲೆಟರ್ ನಲ್ಲಿ 'ಮಹತ್ವದ ಅಂಶ ಉಲ್ಲೇಖಿಸಿದ' ಜಾರಕಿಹೊಳಿ!

ಈಗಾಗಲೇ ಸಹೋದರನ ರಾಜೀನಾಮೆಯಿಂದ ತೆರವಾದ ಸಚಿವ ಸ್ಥಾನವನ್ನು ನನಗೆ ನೀಡಬೇಕೆಂದು ಕೆಎಂಎಫ್(KMF) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಬಾಲಚಂದ್ರ ಜಾರಕಿಹೊಳಿ ಅವರು ಇಂದು ಎರಡ್ಮೂರು ಬಾರಿ ಸಿಎಂ ಭೇಟಿ ಮಾಡಿ ಚರ್ಚಿಸಿದ್ದಾರೆ ಎನ್ನಲಾಗಿದೆ.

Ramesh Jarakiholi : ರಾಸಲೀಲೆ ಪ್ರಕರಣದಲ್ಲಿ ಮಹತ್ವದ ತಿರುವು, ರಮೇಶ್ ಜಾರಕಿಹೊಳಿ ರಾಜೀನಾಮೆ

ಮತ್ತೊಂದೆಡೆ ಈ ಖಾತೆ ಮೇಲೆ ಹಲವರ ಕಣ್ಣು ಬಿದ್ದಿದೆ. ಆದ್ರೆ, ಸದ್ಯಕ್ಕೆ ಬಜೆಟ್(Budget) ಅಧಿವೇಶನ ಮುಗಿಯುವವರೆಗೆ ಜಲಸಂನ್ಮೂಲ ಖಾತೆಯನ್ನು ಯಾರಿಗೂ ಕೊಡದೇ ತಮ್ಮ ಬಳಿಯೇ ಇಟ್ಟುಕೊಳ್ಳುವ ಎಲ್ಲಾ ಸಾಧ್ಯತೆಗಳಿದ್ದು, ಅಧಿವೇಶನದ ಬಳಿಕ ಒಬ್ಬರಿಗೆ ಜನಸಂನ್ಮೂಲ ಖಾತೆಯನ್ನು ಬೇರೆಯವರೆಗೆ ಹಂಚಿಕೆ ಮಾಡಬೇಕಾಗುತ್ತೆ.

ಸಾಹುಕಾರರ' ಸರಸ ಸಿಡಿ..! ಪ್ರತಿಪಕ್ಷಗಳ ಕೈಗೆ ಬ್ರಹ್ಮಾಸ್ತ್ರ, ಮುಖ್ಯಮಂತ್ರಿ ಮೇಲೆ ಒತ್ತಡ

ಯಾಕಂದ್ರೆ ಇದೊಂದು ಮಹತ್ವದ ಖಾತೆ. ಎಲ್ಲಾ ಇಲಾಖೆ ಅಂತಲ್ಲ. ರಾಜ್ಯದ ನದಿ ನೀರು(River Water) ವಿವಾದಗಳು ಈ ಇಲಾಖೆಯಲ್ಲೇ ಬರುವುದರಿಂದ ಇದನ್ನು ನಿಭಾಯಿಸಲು ಸೂಕ್ತ ವ್ಯಕ್ತಿಯೇ ಬೇಕು. ಹಾಗಾಗಿ ಸಿಎಂ ಹಲವು ಒತ್ತಡಗಳ ಮಧ್ಯೆ ಈ ಖಾತೆಯನ್ನು ಹೊತ್ತುಕೊಂಡು ನಿಭಾಯಿಸುವುದು ಕಷ್ಟ ಸಾಧ್ಯ. ಹಾಗಾಗಿ ಬೇರೆಯವರಿಗೆ ವಹಿಸುವ ಸಾಧ್ಯತೆಗಳು ಹೆಚ್ಚಿವೆ.

'ಅದು ಫೇಕ್ ವಿಡಿಯೋ ಯಾಕೆ ರಾಜೀನಾಮೆ ನೀಡಬೇಕು?’

ಈ ಪ್ರಕರಣ ಸುಖಾಂತ್ಯ ಆಗುವವರೆಗೂ ರಮೇಶ್ ಜಾರಕಿಹೊಳಿಯನ್ನು ವಾಪಸ್ ಸಂಪುಟಕ್ಕೆ ಸೇರಿಸಿಕೊಳ್ಳುವುದು ಅನುಮಾನ. ಈ ಹಿನ್ನೆಲೆಯಲ್ಲಿ ಈಗಾಗಲೇ ಈ ಖಾತೆಯನ್ನು ನಿಭಾಯಿಸಿದ ಅನುಭವ ಇರುವ ಬಸವರಾಜ್ ಬೊಮ್ಮಾಯಿಗೆ ನೀಡಿದರೂ ಅಚ್ಚರಿಪಡಬೇಕಿಲ್ಲ.

'ಅದು ಫೇಕ್ ವಿಡಿಯೋ ಯಾಕೆ ರಾಜೀನಾಮೆ ನೀಡಬೇಕು?’

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News