ಗಣಿಗಾರಿಕೆ ಆರೋಪ: ಪತಿ ಮಾಡಿದ ತಪ್ಪಿಗೆ ಪತ್ನಿ ವಿರುದ್ಧ ಪ್ರಕರಣ ದಾಖಲು!
ಕಲ್ಲುಗಣಿಗಾರಿಕೆಯಿಂದ ಐತಿಹಾಸಿಕ ಶಾಸನಗಳಿಗೆ ಧಕ್ಕೆ ಆಗಿರುವ ಆರೋಪ ಹಿನ್ನೆಲೆ ದೂರಿನ ಹಿನ್ನೆಲೆ ಜಂಟಿಯಾಗಿ ಎರಡು ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕೊಪ್ಪಳ: ಕೊಪ್ಪಳದ ಗದಗ ರಸ್ತೆಯಲ್ಲಿರುವ ಇಂದ್ರಕಿಲಾ ಬೆಟ್ಟದ ವ್ಯಾಪ್ತಿಯಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಪತಿ ಮಾಡಿದ ತಪ್ಪಿಗೆ ಪತ್ನಿ ವಿರುದ್ಧ ಪ್ರಕರಣ ದಾಖಲಾಗಿದೆ. ರಿಯಲ್ ಎಸ್ಟೇಟ್ ಹೆಸರಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿದ ಕಾಂಗ್ರೆಸ್ ಮುಖಂಡ ಕಲ್ಲು ಗಣಿಗಾರಿಕೆ ಮಾಡಿರುವ ಆರೋಪ ಕೇಳಿಬಂದಿದೆ.
ತಹಶೀಲ್ದಾರ್ ದೂರಿನ ಮೇರೆಗೆ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸೈಯದ್ ಪತ್ನಿ ಸಿಮ್ರಾನ್ ಸೈಯದ್ ವಿರುದ್ಧ ಕೊಪ್ಪಳ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಲ್ಪಾ ಗ್ರ್ಯಾಂಡ್ ಹೋಟೆಲ್ ಹಿಂಭಾಗದ ಸರ್ವೇ ನಂಬರ್ 656ರಲ್ಲಿ ಅನಧಿಕೃತ ಗಣಿಗಾರಿಕೆ ನಡೆಸಲಾಗಿದೆ. ಕಲ್ಲು ಬ್ಲಾಸ್ಟಿಂಗ್ ಮಾಡಿರುವ ಆರೋಪದಡಿ ಎಫ್‍ಐಆರ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ: ನ್ಯಾ.ಕೆ.ಭಕ್ತವತ್ಸಲ ಆಯೋಗಕ್ಕೆ ಅಹವಾಲು ಸಲ್ಲಿಸಲು ಸೂಚನೆ
ಇಂದ್ರಕಿಲಾಬೆಟ್ಟದ ಐತಿಹಾಸಿಕ ಶಾಸನಗಳು ಹಾಗೂ ಐತಿಹ್ಯಗಳಿಗೆ ಧಕ್ಕೆ ಆರೋಪ ಹಿನ್ನೆಲೆ ಸೈಯದ್ ಮಾಡಿ ತಪ್ಪಿಗೆ ಪತ್ನಿ ಸಿಮ್ರಾನ್ ವಿರುದ್ಧ ಪ್ರಕರಣ ದಾಖಲಾಗಿದೆ. ಇಂದ್ರಕಿಲಾ ಬೆಟ್ಟದ ಮಧ್ಯದಲ್ಲಿ ರಿಯಲ್ ಎಸ್ಟೇಟ್ ಹೆಸರಿನಲ್ಲಿ ಕಲ್ಲು ಗಣಿಗಾರಿಕೆ ನಡೆಸಲಾಗಿದೆ. ಕೆ.ಎಂ ಸೈಯದ್ ಪತ್ನಿ ಹೆಸರಿನ ಸರ್ವೇ ನಂಬರ್ 656ರ 4 ಎಕರೆ 16 ಗುಂಟೆಯ ಪಟ್ಟಾ ಭೂಮಿಯಲ್ಲಿ ಅನಧಿಕೃತ ಗಣಿಗಾರಿಕೆ ನಡೆಸಲಾಗಿದೆ. ಸ್ಥಳದಲ್ಲಿ ಬ್ಲಾಸ್ಟಿಂಗ್ ಮಾಡಿ ಕಲ್ಲು ಅಗೆದಿರುವ ಆರೋಪದ ಹಿನ್ನೆಲೆ ಪ್ರಕರಣ ದಾಖಲಾಗಿದೆ.
ಕಲ್ಲುಗಣಿಗಾರಿಕೆಯಿಂದ ಐತಿಹಾಸಿಕ ಶಾಸನಗಳಿಗೆ ಧಕ್ಕೆ ಆಗಿರುವ ಆರೋಪ ಹಿನ್ನೆಲೆ ದೂರಿನ ಹಿನ್ನೆಲೆ ಜಂಟಿಯಾಗಿ ಎರಡು ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೇ 31ರ ಮಂಗಳವಾರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಧಿಕಾರಿಗಳ ಭೇಟಿ ವೇಳೆ ಅನಧಿಕೃತ ಗಣಿಗಾರಿಕೆ ಬೆಳಕಿಗೆ ಬಂದಿದೆ. ಬೌಂಡಿಂಗ್ ಹಾಕದೆ, ಗಣಿ ಮತ್ತು ಭೂ ವಿಜ್ಞಾನಿ ಇಲಾಖೆ ಪರವಾನಗಿ ಪಡೆಯದೆ ಕಲ್ಲುಗಣಿಗಾರಿಕೆ ನಡೆಸಲಾಗಿದೆ.
ಇದನ್ನೂ ಓದಿ: 'ಸಚಿವ ನಾಗೇಶ್ ಅವರ ಮನೆ ಮೇಲಿನ ದಾಳಿ ಹೇಡಿತನದ ಸಂಕೇತ'
ಕಲ್ಲುಗಳಿಗೆ ಡ್ರಿಲಿಂಗ್ ಮಾಡಿ ಕಾಂಗ್ರೆಸ್ ಮುಖಂಡ ಸ್ಫೋಟಿಸಿದ್ದಾರೆ. ಅಗೆದ ಕಲ್ಲುಗಳನ್ನು ಸರ್ವೇ ನಂಬರ್ 626ರಲ್ಲಿ ಸಂಗ್ರಹಿಸಿ ನಿಯಮ ಉಲ್ಲಂಘನೆ ಮಾಡಲಾಗಿದೆ. ಕೆ.ಎಂ.ಸೈಯದ್ ಪತ್ನಿ ಸಿಮ್ರಾನ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಜೂನ್ 3ರಂದು ಮತ್ತೊಮ್ಮೆ ಸರ್ವೇ ಮಾಡಲು ನಿರ್ಧರಿಸಲಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.