ಕಲಬುರಗಿ: ಕರ್ನಾಟಕ ಸೇರಿದಂತೆ ದೇಶದಾದ್ಯಂತ ರೈಲುಗಳ ಮೇಲೆ ಕಲ್ಲು ತೂರಾಟ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ‘ವಂದೇ ಭಾರತ್ ಎಕ್ಸಪ್ರೆಸ್’ ಹಾಗೂ ‘ಕಲಬುರಗಿ-ಬೀದರ್ ಪ್ಯಾಸೆಂಜರ್’ ರೈಲಿನ’ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಘಟನೆ  ನಡೆದಿದೆ. ಬಾಗಲಕೋಟೆ-ಮೈಸೂರು ನಡುವೆ ಚಲಿಸುವ ‘ಬಸವ ಎಕ್ಸ್ ಪ್ರೆಸ್’ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸ್ಪೀಕರ್ ಹುದ್ದೆ ದುರುಪಯೋಗವಾಗುತ್ತಿದೆ : ಬಸವರಾಜ ಬೊಮ್ಮಾಯಿ ಆಕ್ರೋಶ


ಕಲಬುರಗಿ ತಾಲೂಕಿನ ಬಬಲಾದ ಗ್ರಾಮದ ಬಳಿ ಬುಧವಾರ(ಜುಲೈ 19) ರಾತ್ರಿ ‘ಬಸವ ಎಕ್ಸ್ ಪ್ರೆಸ್’ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ. ಇದರಿಂದ ರೈಲಿನ AC A1 ಬೋಗಿಯ ಗಾಜು ಪುಡಿ-ಪುಡಿಯಾಗಿದ್ದು, ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.


ಇದನ್ನೂ ಓದಿ: ಕೆರೆಗಳ ಮೇಲೆ ಫ್ಲೋಟಿಂಗ್‌ ಸೋಲಾರ್‌ ಪ್ಯಾನೆಲ್‌ ಅಳವಡಿಸಲು ಚಿಂತನೆ : ಸಚಿವ ಎನ್‌.ಎಸ್‌ ಭೋಸರಾಜ್‌ 


ದುಷ್ಕರ್ಮಿಗಳು ರೈಲಿನ ಇಂಜಿನ್ ಮೇಲೂ ಸಹ ಕಲ್ಲು ಎಸೆದಿದ್ದು, ಗಾಜು ಪುಡಿ ಪುಡಿಯಾಗಿದೆ. ಬಾಗಲಕೋಟೆ-ಮೈಸೂರು ಮಧ್ಯೆ ನಿತ್ಯ ಸಂಚರಿಸುವ ‘ಬಸವ ಎಕ್ಸ್ ಪ್ರೆಸ್’ ರೈಲು, ಕಲಬುರಗಿ, ವಾಡಿ, ಯಾದಗಿರಿ ಮಾರ್ಗವಾಗಿ ಸಂಚಾರಿಸುತ್ತದೆ. ಈ ಬಗ್ಗೆ ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.