ಬೆಂಗಳೂರು : ಬಾಂಗ್ಲಾ ದೇಶದ ಸರ್ಕಾರ ಅಲ್ಲಿನ ಹಿಂದುಗಳ ಮೇಲಿನ ದೌರ್ಜನ್ಯವನ್ನು ನಿಲ್ಲಿಸಿ, ಇಸ್ಕಾನ್ ಸ್ವಾಮೀಜಿಯನ್ನು ತಕ್ಷಣ ಬಿಡುಗಡೆ ಮಾಡಬೇಕು. ಹಿಂದುಗಳ ಮೇಲಿನ ದಾಳಿ ನಿಲ್ಲಿಸಲು ಅಮೇರಿಕಾ ಮಧ್ಯಪ್ರವೇಶ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.


COMMERCIAL BREAK
SCROLL TO CONTINUE READING

ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆ ಖಂಡನೀಯವಾಗಿದ್ದು, ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಜೀವನ, ಆಸ್ತಿಪಾಸ್ತಿ ಅಪಾಯದಲ್ಲಿದೆ ಎಂದು ಟ್ವೀಟ್ ಮಾಡುವ ಮೂಲಕ ಕಳವಳ ವ್ಯಕ್ತಪಡಿಸಿದ್ದಾರೆ. ಜನರಿಂದ ಆಯ್ಕೆಯಾಗದ ಬಾಂಗ್ಲಾ ಸರ್ಕಾರ ಅಲ್ಲಿನ ಇಡೀ ಸಮುದಾಯವನ್ನು ಒಗ್ಗೂಡಿಸುತ್ತಿದ್ದು, ರಿಪಬ್ಲಿಕ್ ಆಫ್ ಬಾಂಗ್ಲಾ ದೇಶವನ್ನು ಮುಸ್ಲೀಂ ರಾಷ್ಟ್ರವನ್ನಾಗಿ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 


ಇದನ್ನೂ ಓದಿ : ತಿಮ್ಮಪ್ಪನ ಭಕ್ತರ ಗಮನಕ್ಕೆ..! ತಿರುಪತಿಯಲ್ಲಿ ಭಾರೀ ಮಳೆ ಸಾಧ್ಯತೆ, ಎಚ್ಚರವಹಿಸುವಂತೆ ಡಿಸಿ ಸೂಚನೆ..
 
ಇಸ್ಕಾನ್ ಸ್ವಾಮೀಜಿಯನ್ನು ಬಂಧಿಸಿರುವುದು ಅತ್ಯಂತ ಅವಾಸ್ತವಿಕ ಮತ್ತು ಕಾನೂನು ಬಾಹಿರವಾಗಿದೆ. ಯಾವುದೇ ರೀತಿಯ ಪ್ರಚೋದನೆ ಮಾಡದಿದ್ದರೂ ಸ್ವಾಮೀಜಿ ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವುದು ಬಾಂಗ್ಲಾ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ಬಾಂಗ್ಲಾ ದೇಶ ಒಂದು ವಿಷಯವನ್ನು ನೆನಪಿಸಿಕೊಳ್ಳಬೇಕು. ಭಾರತೀಯ ಸೈನ್ಯದ ನೆರವಿನಿಂದ ಬಾಂಗ್ಲಾ ಪ್ರತ್ಯೇಕ ದೇಶವಾಗಿದೆ.ಭಾರತೀಯರ ಬೆಂಬಲದಿಂದಲೇ ಬಾಂಗ್ಲಾ ದೇಶದ ಅಸ್ತಿತ್ವ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ಎಚ್ಚರಿಸಿದ್ದಾರೆ. 


ಎರಡನೇಯದಾಗಿ ಪ್ರತಿದಿನ ಭಾರತಕ್ಕೆ ಬಾಂಗ್ಲಾ ದೇಶಿಗರು ವಲಸೆ ಬರುತ್ತಿದ್ದು, ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ. ನಮ್ಮ ದೇಶ ಮತ್ತು ನಮ್ಮ ಸಮಾಜ ಬಹಳ ಸಹನೆಯಿಂದ ಇದೆ. ಆದರೆ, ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲಿನ ಹಿಂಸೆಯನ್ನು ಸಹಿಸಲು ಸಾಧ್ಯವಿಲ್ಲ. ಎದ್ನು ಹೇಳಿದ್ದಾರೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 
  
ಭಾರತ ಸರ್ಕಾರ ಬಾಂಗ್ಲಾ ಗಡಿಯನ್ನು ತಕ್ಷಣ ಬಂದ್ ಮಾಡಿ, ಭಾರತಕ್ಕೆ ಬಾಂಗ್ಲಾ ಪ್ರಜೆಗಳು ನುಸುಳುವುದನ್ನು ತಡೆಯಬೇಕು.ಭಾರತದಲ್ಲಿ ವಾಸವಾಗಿರುವ ಬಾಂಗ್ಲಾ ಪ್ರಜೆಗಳನ್ನು ಯಾವುದೇ ಮುಲಾಜಿಲ್ಲದೇ ಅವರ ದೇಶಕ್ಕೆ ವಾಪಸ್ ಕಳುಹಿಸುವಂತೆ ಭಾರತ ಸರ್ಕಾರಕ್ಕೆ ಆಗ್ರಹಿಸುತ್ತೇನೆ. ಬಾಂಗ್ಲಾದೇಶ ಪ್ರತಿ ದಿನ ತರಕಾರಿ, ಆಹಾರ ಧಾನ್ಯಗಳ ಖರೀದಿಗೆ ಭಾರತವನ್ನೇ  ಅವಲಂಬಿಸಿದೆ. ಆದ್ದರಿಂದ ತಕ್ಷಣ ಹಿಂದುಗಳ ಮೇಲಿನ ದಾಳಿಯನ್ನು ನಿಲ್ಲಿಸಿ, ಇಸ್ಕಾನ್ ಸ್ವಾಮೀಜಿಯನ್ನು ಬಿಡುಗಡೆಗೊಳಿಸಿ, ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ