ಬೆಂಗಳೂರು :ಕೊವಿಡ್-19 ಪ್ರಕೋಪದ ಹಿನ್ನೆಲೆ ಘೋಷಿಸಲಾಗಿದ್ದ ಲಾಕ್ ಡೌನ್ ಹಿನ್ನೆಲೆ ಬಂದ್ ಆಗಿದ್ದ ಬೆಂಗಳೂರಿನ ಇಸ್ಕಾನ್ ದೇವಸ್ಥಾನದ (ISKCON Temple)ಬಾಗಿಲುಗಳು ಸುದೀರ್ಘ 6 ತಿಂಗಳುಗಳ ಅವಧಿಯ ಬಳಿಕ ಇದೀಗ ಮತ್ತೆ ಅಕ್ಟೋಬರ್ 5 ರಂದು ತೆರೆದುಕೊಳ್ಳಲಿವೆ.  ದೇವಸ್ಥಾನದ ಆಡಳಿತ ಮಂಡಳಿ ಶನಿವಾರ ಈ ಕುರಿತು ಮಾಹಿತಿ ನೀಡಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ- ಜಪಮಾಲೆಯಿಂದಲೂ ಕೂಡ ಪೂರ್ಣಗೊಳ್ಳುತ್ತವೆ ಮನೋಕಾಮನೆ, ಗೃಹದೋಷಗಳು ... ಹೇಗೆ?


ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ದೇವಸ್ಥಾನದ ಆಡಳಿತ ಮಂಡಳಿ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಆಧರಿಸಿ ದೇವಸ್ಥಾನವನ್ನು ಬೆಳಗ್ಗೆ 9.30 ರಿಂದ 12.30 ರವರೆಗೆ ಮತ್ತು ಸಂಜೆ 4 ರಿಂದ 8 ಗಂಟೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ತೆರೆಯಲಾಗುವುದು ಎಂದು ಹೇಳಿದೆ. ಇನ್ನೊಂದೆಡೆ ವಾರಾಂತ್ಯಕ್ಕೆ ದೇವಸ್ಥಾನವನ್ನು ಬೆಳಗ್ಗೆ 9.30 ರಿಂದ ರಾತ್ರಿ 8 ಗಂಟೆಯವರೆಗೆ ತೆರೆಯಲಾಗುವುದು. ಈ ಅವಧಿಯಲ್ಲಿ ಧಾರ್ಮಿಕ ಮಂಡಳಿಗಳಿಗೆ ಅವಕಾಶ ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. 


ಇದನ್ನು ಓದಿ- ವಿಶ್ವದ ಅತಿ ದೊಡ್ಡ ಭಗವದ್ಗೀತೆ ಗ್ರಂಥ ಅನಾವರಣ ಮಾಡಿದ ಪ್ರಧಾನಿ ಮೋದಿ


ದೇವಸ್ಥಾನದ ಪ್ರವೇಶದ ವೇಳೆ ಎಲ್ಲ ಪ್ರೋಟೋಕಾಲ್ ಗಳನ್ನು ಪಾಲಿಸುವುದು ಅನಿವಾರ್ಯಗೊಳಿಸಲಾಗಿದೆ. ದೇವಸ್ಥಾನಕ್ಕೆ ಭೇಟಿ ನೀಡುವ ಎಲ್ಲರಿಗೂ ಕೂಡ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ ಹಾಗೂ ಮುಂಜಾಗ್ರತಾ ಕ್ರಮವಾಗಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, 65 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಹಾಗೂ ಗರ್ಭವತಿ ಮಹಿಳೆಯರಿಗೆ ಸುರಕ್ಷತೆಯ ದೃಷ್ಟಿಯಿಂದ ದೇವಸ್ಥಾನಕ್ಕೆ ತೆರಳದಂತೆ ಸಲಹೆ ನೀಡಲಾಗಿದೆ.