ಜಪಮಾಲೆಯಿಂದಲೂ ಕೂಡ ಪೂರ್ಣಗೊಳ್ಳುತ್ತವೆ ಮನೋಕಾಮನೆ, ಗೃಹದೋಷಗಳು ... ಹೇಗೆ?

ಸನಾತನ ಸಂಪ್ರದಾಯದಲ್ಲಿ ವಿವಿಧ ಸಂಗತಿಗಳಿಂದ ತಯಾರಿಸಲಾಗಿರುವ 108 ಮಣಿಗಳ ಮಾಲೆ ಜಪಿಸುವುದರ ಮೂಲಕ ಸಿದ್ಧಿ ಅತ್ತು ಶುಭ ಫಲಿತಾಂಶಗಳನ್ನು ಸಾಧಿಸಬಹುದುಎಂದು ಹೇಳಲಾಗುತ್ತದೆ. ಯಾವ ದೇವಿ-ದೇವರ ಹಾಗೂ ಗ್ರಹಗಳ ಮಂತ್ರ ಜಪಿಸಲು ಯಾವ ಮಾಲೆ ಶುಭ ಹಾಗೂ ಯಾವ ಮಾಲೆ ಧರಿಸುವುದರಿಂದ ಜೀವನದಲ್ಲಿ ಮಂಗಳ ಸಾಧಿಸಬಹುದು ಎಂಬುದನ್ನು ತಿಳಿಯೋಣ ಬನ್ನಿ. 

Last Updated : Oct 3, 2020, 03:26 PM IST
  • ಪ್ರಾಚೀನ ಕಾಲದಿಂದಲೂ ಕೂಡ ಭಾರತದಲ್ಲಿ ರತ್ನಗಳು ಹಾಗೂ ಅವುಗಳಿಂದ ತಯಾರಿಸಲಾಗಿರುವ ಮಾಲೆಗಳ ಪ್ರಚಲಿತದಲ್ಲಿವೆ.
  • ರುದ್ರಾಕ್ಷ ಮಾಲೆಧಾರಣೆ ದೇವಾಧಿ ದೇವನ ಸಾಧನೆಗೆ ಉತ್ತಮ.
  • ರಾಹು ಮಹಾದೆಸೆ ನಿವಾರಣೆಗೆ ಬಿಳಿ ಚಂದನದ ಮಾಲೆ ಧರಿಸುವುದು ಉತ್ತಮ.
ಜಪಮಾಲೆಯಿಂದಲೂ ಕೂಡ ಪೂರ್ಣಗೊಳ್ಳುತ್ತವೆ ಮನೋಕಾಮನೆ, ಗೃಹದೋಷಗಳು ... ಹೇಗೆ? title=

ನವದೆಹಲಿ: ಪ್ರಾಚೀನ ಕಾಲದಿಂದಲೂ ಕೂಡ ಭಾರತದಲ್ಲಿ ರತ್ನಗಳು ಹಾಗೂ ಅವುಗಳಿಂದ ತಯಾರಿಸಲಾಗಿರುವ ಮಾಲೆಗಳ ಪ್ರಚಲಿತದಲ್ಲಿವೆ. ಈ ಮಾಲೆಗಳು ಕೇವಲ ಸೌಂದರ್ಯ ಸಾಧನಗಳಾಗದೆ ಅದೃಷ್ಟವನ್ನು ಕೂಡ ತರುತ್ತವೆ ಎಂದು ಹೇಳಲಾಗುತ್ತದೆ. ಸನಾತನ ಸಂಪ್ರದಾಯದಲ್ಲಿ ವಿವಿಧ ಸಂಗತಿಗಳಿಂದ ತಯಾರಿಸಲಾಗಿರುವ 108 ಮಣಿಗಳ ಮಾಲೆ ಜಪಿಸುವುದರ ಮೂಲಕ ಸಿದ್ಧಿ ಅತ್ತು ಶುಭ ಫಲಿತಾಂಶಗಳನ್ನು ಸಾಧಿಸಬಹುದುಎಂದು ಹೇಳಲಾಗುತ್ತದೆ. ಯಾವ ದೇವಿ-ದೇವರ ಹಾಗೂ ಗ್ರಹಗಳ ಮಂತ್ರ ಜಪಿಸಲು ಯಾವ ಮಾಲೆ ಶುಭ ಹಾಗೂ ಯಾವ ಮಾಲೆ ಧರಿಸುವುದರಿಂದ ಜೀವನದಲ್ಲಿ ಮಂಗಳ ಸಾಧಿಸಬಹುದು ಎಂಬುದನ್ನು ತಿಳಿಯೋಣ ಬನ್ನಿ. 

ಇದನ್ನು ಓದಿ- ಮನೆಯಿಂದ ದಾರಿದ್ರ್ಯ ತೊಲಗಿಸಬೇಕೇ? ನೀರಿಗೆ ಸಂಬಂಧಿಸಿದ ಈ ಉಪಾಯ ಮಾಡಿ ನೋಡಿ

ಮಾಲೆಗಳು ಮತ್ತು ಅದರ ಲಾಭಗಳು
ಪ್ರತಿಯೊಂದು ಮಾಲೆಗೆ ತನ್ನದೇ ಆದ ಮಹತ್ವವಿದೆ. ಯಾವ ಮಾಲೆ ಧರಿಸುವುದರಿಂದ ಏನು ಲಾಭವಾಗುತ್ತದೆ ತಿಳಿಯೋಣ ಬನ್ನಿ

ವೈಜಯಂತಿ ಮಾಲೆ: ವೈಜಯಂತಿ ಬೀಜಗಳಿಂದ ಈ ಮಾಲೆಯನ್ನು ತಯಾರಿಸಲಾಗುತ್ತದೆ. ಶ್ರೀಕೃಷ್ಣನಿಗೆ ಪ್ರಿಯವಾದ ಮಾಲೆ ಇದಾಗಿದೆ.  ಶ್ರೀವೈಷ್ಣವ ಪರಂಪರೆಯಲ್ಲಿ ಸಾಧಕರು ಈ ಮಾಲೆಯನ್ನು ಧರಿಸುತ್ತಿದ್ದರು. ಸಾತ್ವಿಕ ಕಾರ್ಯ ಹಾಗೂ ಜಪ ಮಾಡಲು ಈ ಮಾಲೆ ಬಳಕೆಯಾಗುತ್ತದೆ.

ಇದನ್ನು ಓದಿ- ವಾಸ್ತು ಶಾಸ್ತ್ರದ ಪ್ರಕಾರ ಈ ದಿಕ್ಕು ಸರಿಯಾದ ಕೊನದಲ್ಲಿದ್ದರೆ ಬದಲಾಗುತ್ತೆ ಭಾಗ್ಯ

ತುಳಸಿ ಮಾಲೆ: ಶ್ರೀ ವಿಷ್ಣು ಹಾಗೂ ದೇವಿ ಲಕ್ಷ್ಮಿಯ ಜಪ ಮಾಡಿ ಅವರನ್ನು ಪ್ರಸನ್ನಗೊಳಿಸಲು ಈ ಮಾಲೆ ಅತ್ಯಂತ ಮಹತ್ವ ಹಾಗೂ ಶುಭ ಎಂದು ಹೇಳಲಾಗುತ್ತದೆ. ಈ ಮಾಲೆ ಧರಿಸುವುದರಿಂದ ತನು-ಮನ ಪವಿತ್ರವಾಗುತ್ತದೆ ಎನ್ನಲಾಗಿದೆ.

ಅರಿಶಿಣ ಮಾಲೆ: ದೇವಗುರು ಬೃಹಸ್ಪತಿಯ ಸಾಧನೆಗಾಗಿ ಈ ಮಾಲೆ ಸರ್ವೋತ್ತಮ ಎಂದು ಹೇಳಲಾಗುತ್ತದೆ. ಈ ಮಾಲೆ ಸುಖ-ಸಮೃದ್ಧಿಯ ಕಾಮನೆಗಾಗಿ ಉಪಯೋಗಿಸಲಾಗುತ್ತದೆ. ಇದರಿಂದ ಜಪ ಶೀಘ್ರ ಫಲ ನೀಡುತ್ತದೆ.

ಇದನ್ನು ಓದಿ- ಗೃಹ ಪ್ರವೇಶ ಮಾಡುವ ಮುನ್ನ ಈ ಸಂಗತಿಗಳನ್ನು ನೆನಪಿಡಿ, ಸುಖ ಹಾಗೂ ಸಮೃದ್ಧಿ ನಿಮ್ಮದಾಗುತ್ತದೆ

ಬಿಳಿ ಚಂದನದ ಮಾಲೆ: ಶ್ರೀವಿಷ್ಣುವನ್ನು ಪ್ರಸನ್ನಗೊಳಿಸಲು ಉಪಯೋಗಿಸಲಾಗುತ್ತದೆ. ಈ ಮಾಲೆಯನ್ನು ಧರಿಸುವುದರಿಂದ ಮನಸ್ಸು ಶಾಂತಗೊಳಿಸುತ್ತದೆ. ರಾಹು ಮಾಹಾ ದೆಸೆಯಲ್ಲಿಯೂ ಈ ಮಾಲೆ ಅತ್ಯಂತ ಶುಭಕರ ಎಂದು ಹೇಳಲಾಗುತ್ತದೆ.

ಕೆಂಪು ಚಂದನದ ಮಾಲೆ: ದೇವಿಯ ಸಾಧನೆಗಾಗಿ ರಕ್ತಚಂದನದ ಮಾಲೆಯನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಇದನ್ನು ಧರಿಸುವುದರಿಂದ ಸಾಧಕರಲ್ಲಿ ಬಲ ಹಾಗೂ ಸಾಹಸ ವೃದ್ಧಿಯಾಗುತ್ತದೆ.

ಇದನ್ನು ಓದಿ- Rudraksh ಧರಿಸುವ ಮುನ್ನ ಈ ನಿಯಮಗಳು ನಿಮಗೆ ತಿಳಿದಿರಲಿ

ಹವಳದ ಮಾಲೆ: ಮಂಗಳನ ಶುಭತನವನ್ನು ಪಡೆದುಕೊಳ್ಳಲು ಹವಳವನ್ನು ಧರಿಸಳಗುತ್ತದೆ. ಈ ರತ್ನ ಸುಖ ಮತ್ತು ಸಮೃದ್ಧಿಯ ಪ್ರತೀಕವಾಗಿದೆ. ಈ ಮಾಲೆಯನ್ನು ಗಣೇಶ-ಲಕ್ಷ್ಮಿ ಸಾಧನೆಗಾಗಿ ಬಳಸಲಾಗುತದೆ.

ಸ್ಪಟಿಕದ ಮಾಲೆ: ಸ್ಪಟಿಕದ ಮಾಲೆಗಳಲ್ಲಿನ ಮಣಿಗಳು ಪಾರದರ್ಶಕ, ಹೊಳಪುಳ್ಳ ಹಾಗೂ ಗೋಲಾಕಾರದಲ್ಲಿ ಇರುತ್ತವೆ. ಶುಕ್ರ ಗ್ರಹದ ಜೊತೆಗೆ ಈ ಮಾಲೆ ಸಂಬಂಧ ಹೊಂದಿದೆ. ಶುಕ್ರಗ್ರಹ ದೋಷ ಪರಿಹಾರ ಹಾಗೂ ಧನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರಗೊಳಿಸಲು ಈ ಮಾಲೆ ಅತ್ಯಂತ ಶುಭಕರ ಎಂದು ಹೇಳಲಾಗುತ್ತದೆ.

ಇದನ್ನು ಓದಿ- Hindu ಧರ್ಮದಲ್ಲಿ 108 ಅಂಕ ಮಹತ್ವಪೂರ್ಣ ಎಂದು ಏಕೆ ಹೇಳಲಾಗುತ್ತದೆ? ಇಲ್ಲಿದೆ ಕಾರಣ

ಮುತ್ತಿನ ಮಾಲೆ: ಮುತ್ತು ಚಂದ್ರಗ್ರಹದ ಜೊತೆಗೆ ನೇರ ಸಂಬಂಧ ಹೊಂದಿದೆ ಹಾಗೂ ಚಂದ್ರ ಮನಸ್ಸಿನ ಪ್ರತೀಕ. ಯಾವುದೇ ಕಾರ್ಯಸಿದ್ಧಿ ಪ್ರಾಪ್ತಿಗೆ ಮನಸ್ಸು ಶಾಂತವಾಗಿರುವುದು ಅತ್ಯಂತ ಮಹತ್ವದ್ದು. ಎಲ್ಲಿಯವರೆಗೆ ಮನಸ್ಸು ಶಾಂತವಾಗಿರುವುದಿಲ್ಲವೋ ಅಲ್ಲಿಯವರೆಗೆ ನೀವು ಯಾವುದೇ ಕಾರ್ಯದ ಮೇಲೆ ಫೋಕಸ್ ಮಾಡಲು ಸಾಧ್ಯವಿಲ್ಲ. ಈ ಮಾಲೆ ಧರಿಸುವುದರಿಂದ ಚಂದ್ರನಿಗೆ ಸಂಬಂಧಿಸಿದ ದೋಷ ನಿವಾರಣೆಯಾಗುತ್ತದೆ ಹಾಗೂ ವ್ಯಕ್ತಿಗೆ ಎಲ್ಲ ರೀತಿಯ ಸುಖ ಪ್ರಾಪ್ತಿಯಾಗುತ್ತದೆ.

Trending News