ಗ್ರಾಮ ದೇವತೆ ಹಬ್ಬದಲ್ಲಿ ಮುಳ್ಳಿನ ಬೇಲಿಗೆ ಹಾರಿದ ಭಕ್ತರು..!
ಗ್ರಾಮದೇವತೆ ಹಬ್ಬ ಬಂತೆಂದರೆ ಭರ್ಜರಿ ಊಟ, ನೃತ್ಯ, ದೇವತಾ ಪೂಜೆ, ಬಾಯಿಗೆ ಬೀಗ ಇರುವುದು ಸಾಮಾನ್ಯ. ಆದರೆ ಇಲ್ಲಿ ಹತ್ತಾರು ಭಕ್ತರು ಮುಳ್ಳಿನ ಬೇಲಿಗೆ ಹಾರಿ ಭಕ್ತಿ ಪರಾಕಷ್ಟೆ ಮೆರೆಯುತ್ತಾರೆ.
ಚಾಮರಾಜನಗರ: ಗ್ರಾಮದೇವತೆ ಹಬ್ಬ ಬಂತೆಂದರೆ ಭರ್ಜರಿ ಊಟ, ನೃತ್ಯ, ದೇವತಾ ಪೂಜೆ, ಬಾಯಿಗೆ ಬೀಗ ಇರುವುದು ಸಾಮಾನ್ಯ. ಆದರೆ ಇಲ್ಲಿ ಹತ್ತಾರು ಭಕ್ತರು ಮುಳ್ಳಿನ ಬೇಲಿಗೆ ಹಾರಿ ಭಕ್ತಿ ಪರಾಕಷ್ಟೆ ಮೆರೆಯುತ್ತಾರೆ.
ಚಾಮರಾಜನಗರ (Chamarajanagar) ಜಿಲ್ಲೆಯ ಯಳಂದೂರು ತಾಲೂಕಿನ ಗೂಳಿಪುರ ಎಂಬ ಗ್ರಾಮದಲ್ಲಿ ಮಾರಮ್ಮನ ಹಬ್ಬದ ಪ್ರಯುಕ್ತ ಉರುಕಾತಮ್ಮ, ಕುಂಟು ಮಾರಮ್ಮ, ಮಂಟೇಸ್ವಾಮಿ ಸೇರಿದಂತೆ ನಾನಾ ದೇವರನ್ನು ಪೂಜಿಸುವ ಭಕ್ತರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವಿಶೇಷ ಪೂಜೆ ಪುನಸ್ಕಾರ, ಮಡೆ ನೈವೇದ್ಯ ಅರ್ಪಿಸುವ ಭಕ್ತರು ಸಂಜೆ ವೇಳೆಗೆ ದೇವಾಲಯದ ಮುಂಭಾಗ ಇರುವ ಜಮೀನಿನ ಮುಳ್ಳಿನ ಬೇಲಿಗೆ ಹಾರಿ ಭಕ್ತಿ ಪರಾಕಾಷ್ಠೆ ಮೆರೆಯುತ್ತಾರೆ. ಮಕ್ಕಳ ಭವಿಷ್ಯದ ಬಗ್ಗೆ ನಿರ್ಲಕ್ಷ್ಯ ಬೇಡ; ತೀರ್ಪು ಪಾಲನೆ ಎಲ್ಲರ ಕರ್ತವ್ಯ ಎಂದ ಎಚ್ಡಿಕೆ
ಮೊದಲಿಗೆ ಗ್ರಾಮ ದೇವತೆಗಳ ಪ್ರತಿನಿಧಿಗಳು ಅನಿಸಿಕೊಂಡವರು ಸತ್ತಿಗೆ, ಸುರಾಪಾನಿ ಹಿಡಿದು ದೇವಾಲಯ ಪ್ರದಕ್ಷಿಣೆ ಹಾಕುವಾಗ ದೇವರು ಆಹ್ವಾವನೆ ಆಗಲಿದ್ದು ಬಳಿಕ ಓಡಿ ಬಂದು ಮುಳ್ಳಿನ ಬೇಲಿಗೆ ಹಾರುತ್ತಾರೆ.ಇದಾದ ಬಳಿಕ, ಕೆಲ ಭಕ್ತರಿಗೂ ದೇವತೆಗಳು ಆಹ್ವಾವನೆಯಾಗಲಿದ್ದು ದೇವರನ್ನು ಸಂತುಷ್ಟಗೊಳಿಸಲು ಮುಳ್ಳಿನ ಬೇಲಿಗೆ ಹಾರಿದರು. ಅಲ್ಲೇ ಇದ್ದ ಯುವಕರು ಅವರನ್ನು ಮೇಲಕ್ಕೆತ್ತಿದ್ದರು.
ಇದನ್ನೂ ಓದಿ : Hijab Row: ಶಾಲಾ-ಕಾಲೇಜುಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಡಿಕೆಶಿ ಮನವಿ
ರಭಸದಿಂದ ಓಡಿ ಬರುವ ಭಕ್ತರು ಮುಳ್ಳಿನ ಬೇಲಿಗೆ ಹಾರಿದರೂ ರಕ್ತ ಬರುವುದಾಗಲಿ, ನೋವಾಗುವುದಾಗಲಿ ಆಗದಿರುವುದು ಸೇರಿದ್ದ ನೂರಾರು ಮಂದಿಗೆ ಅಚ್ಚರಿ ತರಿಸಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.