ನದಿಗೆ ಇಳಿಯುವವರಿಗೆ ಲಾಠಿ ಏಟು !ಪೊಲೀಸರಿಗೆ ಸಚಿವ ಕೃಷ್ಣಭೈರೇಗೌಡ ಸೂಚನೆ
ಅನಗತ್ಯವಾಗಿ ನದಿಗೆ ಇಳಿಯುವ ಜನರಿಗೆ ಲಾಠಿ ಪ್ರಯೋಗ ಮಾಡಿ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಸೂಚನೆ ನೀಡಿದ್ದಾರೆ.
ಗುಲ್ಬರ್ಗಾ : ಮಳೆ ಅಬ್ಬರದ ನಡುವೆ ರಾಜ್ಯದ ಎಲ್ಲಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರುವಂತೆ ಜನರನ್ನು ಸರ್ಕಾರ ಅನೇಕ ರೀತಿಯಲ್ಲಿ ಕೇಳಿ ಕೊಂಡಿದೆ. ಆದರೆ ಕೆಲವೆಡೆ ಅಪಾಯವನ್ನು ಲೆಕ್ಕಿಸದೆ ನದಿಗೆ ಇಳಿಯುವುದು, ಮೀನು ಹಿಡಿಯುವುದು, ಸೆಲ್ಫಿ ತೆಗೆಯುವುದು ಮುಂತಾದ ಘಟನೆಗಳು ಬೆಳಕಿಗೆ ಬಂದಿದೆ.ಈ ಮೂಲಕ ಜನರು ತಮ್ಮ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ.
ಇದೀಗ ಅನಗತ್ಯವಾಗಿ ನದಿಗೆ ಇಳಿಯುವ ಜನರಿಗೆ ಲಾಠಿ ಪ್ರಯೋಗ ಮಾಡಿ ಎಂದು ಡಿಸಿ,ಎಸ್ಪಿ,ಅವರಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು,ನದಿಗಳು ಉಕ್ಕಿ ಹರಿಯುತ್ತಿವೆ ಇಂತಹ ಸಂದರ್ಭದಲ್ಲಿ ಜನರು ಮೀನು ಹಿಡಿಯಲು ಹೋಗಿ,ಸೆಲ್ಪೀ ತೆಗೆದುಕೊಳ್ಳಲು ಹೋಗಿ ಸಾವೀಗೀಡಾಗುತ್ತಿದ್ದಾರೆ. ಹೀಗಾಗಿ ನದಿಗೆ ಇಳಿಯುವ ಜನರಿಗೆ ಲಾಠಿ ಪ್ರಯೋಗ ಮಾಡಲು ಡಿಸಿ,ಎಸ್ಪಿ ಅವರಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸುಳ್ಳು ಹೇಳುವುದು ನಿಮಗೆ ಅಭ್ಯಾಸವೋ, ಆಚಾರವೋ, ಚಾಳಿಯೋ ಗೊತ್ತಿಲ್ಲ: ಸಿಎಂಗೆ ಕೇಂದ್ರ ಸಚಿವ ಎಚ್‌ಡಿಕೆ
ಜನರು ನಮ್ಮ ಬಗ್ಗೆ ತಪ್ಪು ತಿಳಿದರೂ ಪರವಾಗಿಲ್ಲ,ರಾಜ್ಯದಲ್ಲಿ ಒಂದು ಪ್ರಾಣವನ್ನು ಕಳೆದುಕೊಳ್ಳಲು ಕೂಡಾ ನಾವು ತಯಾರಿಲ್ಲ.ಒಳ್ಳೆಯ ಮಾತಿಗೆ ಗೌರವ ಕೊಡಲಿಲ್ಲ ಅಂದರೆ ಅವರಿಗೆ ಲಾಠಿ ಏಟು ಒಂದೇ ದಾರಿ ಎಂದು ಸಚಿವರಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
2019-20ರಲ್ಲಿ ರಾಜ್ಯದಲ್ಲಿ ಪ್ರವಾಹದಲ್ಲಿ 272 ಜನ,2022ರಲ್ಲಿ249 ಜನ ಸಾವಿಗೀಡಾಗಿದ್ದಾರೆ. ಹೀಗಾಗಿ ಈ ಬಾರಿ ಅಂಥಹ ಅಹಿತಕರ ಘಟನೆಗಳು ನಡೆಯಬಾರದು ಎನ್ನುವ ಉದ್ದೇಶದಿಂದ ಈ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಪಾದಯಾತ್ರೆ ಪರವಾನಗಿ ಇಲ್ಲ ಎಂಬ ಹೇಳಿಕೆ ವಿಚಾರ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.