ಬೆಂಗಳೂರು: ಕರ್ನಾಟಕದಲ್ಲಿ ಅವಧಿಗೂ ಮೊದಲೇ ಬೇಸಿಗೆ ಕಾಲಿಡಲಿದ್ದು, ತಾಪಮಾನ ದಿಢೀರ್ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


COMMERCIAL BREAK
SCROLL TO CONTINUE READING

ಚಳಿಗಾಲದ ಅಂತ್ಯದ ನಡುವೆಯೇ ರಾಜ್ಯಕ್ಕೆ ಬೇಸಿಗೆ ಝಳ ಕಾಲಿಟ್ಟಿದ್ದು, ಅವಧಿಗೂ ಮೊದಲೇ ರಾಜ್ಯದಲ್ಲಿ ಬೇಸಿಗೆ ಆರಂಭವಾಗಲಿದೆ. ರಾಜ್ಯದಲ್ಲಿ ಸಾಮಾನ್ಯ ಮಾರ್ಚ್ 1 ರ ಬದಲಿಗೆ ಫೆಬ್ರವರಿ 24ರಿಂದಲೇ ಬೇಸಿಗೆ ಆರಂಭವಾಗಲಿದ್ದು, ತಾಪಮಾನ ದಿಢೀರ್ ಏರಿಕೆ ಕಾಣಲಿದೆ. ಇದು ಮುಂದಿನ ದಿನಗಳಲ್ಲಿ ತಾಪಮಾನ ಏರಿಕೆಯೊಂದಿಗೆ ಶುಷ್ಕ ಹವಾಮಾನದ ಮುನ್ಸೂಚನೆಯಾಗಿದೆ.ಉತ್ತರ ಮತ್ತು ವಾಯುವ್ಯ ಮಾರುತಗಳು ಬೆಚ್ಚಗಿರುವುದು ಇದಕ್ಕೆ ಕಾರಣ ಎಂದು ಹೇಳಿದೆ. 


ಇದನ್ನೂ ಓದಿ: ವಿದ್ಯುತ್‌ ತಂತಿ ತುಂಡಾಗಿ ಬಿದ್ದು ಚೆನ್ನೈ ಬೆಂಗಳೂರು ಮಾರ್ಗದಲ್ಲಿ ಸ್ಥಗಿತವಾಗಿದ್ದ ರೈಲು ಸಂಚಾರ ಯಥಾಸ್ಥಿತಿಗೆ


ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಬೆಂಗಳೂರು ಕೇಂದ್ರದ  ಐಎಂಡಿ ಅಧಿಕಾರಿಗಳು, ಕರ್ನಾಟಕದ ಕೆಲವು ಭಾಗಗಳಲ್ಲಿ ಈಗಾಗಲೇ ಸಾಮಾನ್ಯ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಬೆಂಗಳೂರಿನಲ್ಲಿ  ತಾಪಮಾನವು ಸುಮಾರು 31 ರಿಂದ 32 ಡಿಗ್ರಿ ಸೆಲ್ಸಿಯಸ್‌ನಲ್ಲಿದ್ದರೂ, ಸಾಪೇಕ್ಷ ಆದ್ರ್ರತೆಯ ಮಟ್ಟವು ಸುಮಾರು 20 ರಿಂದ 35 ಪ್ರತಿಶತದಷ್ಟು ಇರುವುದರಿಂದ ನಾಗರಿಕರು ಶಾಖವನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. 


ಇದನ್ನೂ ಓದಿ: ಭ್ರಷ್ಟಾಚಾರದಲ್ಲಿ ಬಿಜೆಪಿ ನಾಚಿಕೆಯ ಕೊನೆಯ ಗೆರೆಯನ್ನೂ ಮೀರಿದೆ: ಕಾಂಗ್ರೆಸ್


7 ಮಿಮೀ ಮಳೆ ಕಾಣುತ್ತಿದ್ದ ಸಿಲಿಕಾನ್ ಸಿಟಿ: 


ಸಾಮಾನ್ಯವಾಗಿ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ 7 ಮಿಮೀ ಮಳೆಯಾಗುತ್ತದೆ, ಆದರೆ ಈ ವರ್ಷ ಅದು ಸಂಭವಿಸಿಲ್ಲ.ಅಲ್ಲದೆ, ಮುಂದಿನ ಐದು ದಿನಗಳಲ್ಲಿ ಬೇಸಿಗೆಯ ಬಿಸಿಲಿನ ತಾಪ ಹೆಚ್ಚಲಿದೆ. ಮಳೆಯೂ ಇಲ್ಲ ಮತ್ತು ಮೋಡದ ರಚನೆಯೂ ಇಲ್ಲ.ತೇವಾಂಶದ ಸಹಭಾಗಿತ್ವವು ಸಹ ನಡೆಯುತ್ತಿದೆ. ಇದು ಮಳೆಯ ಸಾಧ್ಯತೆಯನ್ನು ಕಡಿಮೆ ಮಾಡಿದೆ ಎಂದು ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.