ವಿದ್ಯುತ್‌ ತಂತಿ ತುಂಡಾಗಿ ಬಿದ್ದು ಚೆನ್ನೈ ಬೆಂಗಳೂರು ಮಾರ್ಗದಲ್ಲಿ ಸ್ಥಗಿತವಾಗಿದ್ದ ರೈಲು ಸಂಚಾರ ಯಥಾಸ್ಥಿತಿಗೆ

ನಮಗೆ ಯಾವುದೇ ಮಾಹಿತಿ ಇರಲಿಲ್ಲ. ರೈಲು ಸುಮ್ಮನೆ ನಿಧಾನಗೊಂಡು ನಿಂತಿತು. ಕ್ರಾಸಿಂಗ್ ಗೆ ರೈಲು ನಿಂತಿದೆ. ಎಂದು ನಾವೆಲ್ಲ ಭಾವಿಸಿದ್ದೆವು. ಎಷ್ಟೋ ಹೊತ್ತಿನವರೆಗೆ ರೈಲು ಆರಂಭವಾಗದೇ ಇದ್ದಾಗ ಮೇಲ್ವೇತುವೆ ಉಪಕರಣಗಳು ಕೆಟ್ಟು ಹೋಗಿದೆ ಎಂದು ಮನಗಂಡೆವು ಎಂದು ಪ್ರಯಾಣಿಕರು ಸಾಮಾಜಿಕ ಜಾತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

Written by - Manjunath Hosahalli | Edited by - Manjunath N | Last Updated : Feb 23, 2023, 05:58 PM IST
  • ಜಿಲ್ಲೆಯ ಮಾಲೂರು ತಾಲ್ಲೂಕು ಬ್ಯಾಟರಾಯನಹಳ್ಳಿ ಬಗ್ಗೆ ವಿದ್ಯುತ್‌ ರೈಲು ತುಂಟಾಗಿ ಬಿದ್ದಿದೆ.
  • ಮಧ್ಯಾಹ್ನ ಸುಮಾರಿಗೆ ವಿದ್ಯುತ್‌ ಲೈನ್ ತುಂಡಾಗಿರುವ ಕುರಿತು ಮಾಹಿತಿ ಸಿಕ್ಕ ತಕ್ಷಣ ಬಂಗಾರಪೇಟೆ ಹಾಗೂ ಕಂಟ್ರೋನ್‌ಮೆಂಟ್ ರೈಲ್ವೇ ಸಿಬ್ಬಂದಿಗಳು
  • ಕೂಡಲೇ ಸ್ಥಳಕ್ಕೆ ಬಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಆಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ
ವಿದ್ಯುತ್‌ ತಂತಿ ತುಂಡಾಗಿ ಬಿದ್ದು ಚೆನ್ನೈ ಬೆಂಗಳೂರು ಮಾರ್ಗದಲ್ಲಿ ಸ್ಥಗಿತವಾಗಿದ್ದ ರೈಲು ಸಂಚಾರ ಯಥಾಸ್ಥಿತಿಗೆ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿದ್ಯುತ್‌ ತಂತಿ ತುಂಡಾಗಿ ಬಿದ್ದಿದ್ದ ಹಿನ್ನೆಲೆಯಲ್ಲಿ ಚೆನ್ನೈ ಮತ್ತು ಬೆಂಗಳೂರು ಮಾರ್ಗದಲ್ಲಿ ಓಡಾಡುವ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು ಈಗ ಅದು ಯಥಾಸ್ಥಿತಿಗೆ ಬಂದಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಬುಧವಾರ ಜಿಲ್ಲೆಯ ಮಾಲೂರು ತಾಲೂಕಿನ ಬ್ಯಾಟರಾಯನಹಳ್ಳಿ  ಬಳಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಸದ್ಯ ದುರಸ್ತಿ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸುಮಾರು 8 ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು ಎಂದು ನೈಋತ್ಯ ರೈಲ್ವೆ ಹೇಳಿದೆ.

ಪ್ರಮುಖವಾಗಿ ಮಾರಿಕುಪ್ಪಂ ಬೆಂಗಳೂರು, ಬೆಂಗಳೂರು ಮೈಸೂರು ತಿರುಪತಿ, ಬೆಂಗಳೂರು ಚೆನೈ, ಜೋಲಾರ್‌ಪೇಟ್ ಬೆಂಗಳೂರು, ಸೇರಿದಂತೆ ಸುಮಾರು ಎಂಟು ರೈಲುಗಳ ಸಂಚಾರ ಸ್ಥಗಿತವಾಗಿತ್ತು

ಜಿಲ್ಲೆಯ ಮಾಲೂರು ತಾಲ್ಲೂಕು ಬ್ಯಾಟರಾಯನಹಳ್ಳಿ ಬಗ್ಗೆ ವಿದ್ಯುತ್‌ ರೈಲು ತುಂಟಾಗಿ ಬಿದ್ದಿದೆ. ಮಧ್ಯಾಹ್ನ ಸುಮಾರಿಗೆ ವಿದ್ಯುತ್‌ ಲೈನ್ ತುಂಡಾಗಿರುವ ಕುರಿತು ಮಾಹಿತಿ ಸಿಕ್ಕ ತಕ್ಷಣ ಬಂಗಾರಪೇಟೆ ಹಾಗೂ ಕಂಟ್ರೋನ್‌ಮೆಂಟ್ ರೈಲ್ವೇ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ಬಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಆಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ.

ಇದನ್ನೂ ಓದಿ: ಭ್ರಷ್ಟಾಚಾರದಲ್ಲಿ ಬಿಜೆಪಿ ನಾಚಿಕೆಯ ಕೊನೆಯ ಗೆರೆಯನ್ನೂ ಮೀರಿದೆ: ಕಾಂಗ್ರೆಸ್

ತಕ್ಷಣವೇ ದುರಸ್ಥಿ ಕಾರ್ಯ ಆರಂಭ ಮಾಡಿ ಸತತವಾಗಿ ದುರಸ್ಥಿ ಕಾರ್ಯ ನಡೆಸಲಾಗಿತ್ತು. ಸದ್ಯ  ದುರಸ್ಥಿ ಕಾರ್ಯ ಪೂರ್ಣಗೊಂಡಿದ್ದು ಎಂದಿನಂತೆ ರೈಲು ಸಂಚಾರ ಅರಭವಾಗಿದೆ ಎಂದು ತಿಳಿಸಿದೆ.

ಕೋಲಾರ ಜಿಲ್ಲೆಯ ಮಾರ್ಗವಾಗಿ ಮಧ್ಯಾಹ್ನ 2.45 ಕ್ಕೆ ಬೆಂಗಳೂರು- ಮಾರಿಕುಪ್ಪಂ ಪ್ಯಾಸೆಂಜರ್ ರೈಲು (ತೃ. ನಂ. 01775) ಹಾದು ಹೋಗುತ್ತಿದ್ದಾಗ ಓವರ್‌ ಹೆಡ್ ವಿದ್ಯುತ್‌ ತಂತಿಗಳು ತುಂಡಾಗಿತ್ತು. ಬಂಗಾರಪೇಟೆ ಮಾರ್ಗದ ಕಡೆಗೆ (ಯುಪಿ ಲೈನ್) ಇವೆ, ಆದರೆ ಡೌನ್ ಲೈನ್ (ಬಂಗಾರಪೇಟೆಯಿಂದ ಕೆಎಸ್‌ಆರ್) ಬಾಧಿತವಾಗಿಲ್ಲ ಎಂದಿದೆ.

ಒಟ್ಟು 15 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗಿತ್ತು ಮತ್ತು 1 ರೈಲನ್ನು ಭಾಗಶಃ ರದ್ದುಗೊಳಿಸಲಾಗಿತ್ತು  ಓವರ್ಹೆಡ್ ವಿದ್ಯುತ್‌ ತಂತಿ ಸ್ಟಾಪ್ ಆಗಿತ್ತು.  ಡೀಸೆಲ್ ಇಂಜಿನ್‌ಗಳೊಂದಿಗೆ ರೈಲುಗಳನ್ನು ಓಡಿಸಲು ಟ್ರ್ಯಾಕ್ ಸೂಕ್ತವೆಂದು ಪರಿಗಣಿಸಿ ಆಗತ್ಯಕ್ಕೆ ಅನುಗುಣವಾಗಿ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಯಾಣಿಕರ ಆಕ್ರೋಶ:

ಬಂಗಾರಪೇಟೆ ಮತ್ತು ಇತರ ನಿಲ್ದಾಣಗಳಿಂದ ಬೆಂಗಳೂರಿಗೆ ಪ್ರತಿದಿನ ಸಾವಿರಾರು ಜನರು ಪ್ರಯಾಣಿಸುತ್ತಾರೆ. ಬೆಂಗಳೂರು ರೈಲ್ವೆ ವಿಭಾಗವು ಸಾಮಾಜಿಕ ಜಾಲತಾಣಗಳಲ್ಲಿ ಸೇವೆಗೆ ಅಡ್ಡಿಪಡಿಸುವ ಕುರಿತು ಸಂದೇಶವನ್ನು ನೀಡಿಲ್ಲ. ಸಾವಿರಾರು ಪ್ರಯಾಣಿಕರು ನಿಲ್ದಾಣಗಳಲ್ಲಿ ಸುಳಿವಿಲ್ಲದೇ ಸಿಕ್ಕಿಹಾಕಿಕೊಂಡರು ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದರು.

ನಮಗೆ ಯಾವುದೇ ಮಾಹಿತಿ ಇರಲಿಲ್ಲ. ರೈಲು ಸುಮ್ಮನೆ ನಿಧಾನಗೊಂಡು ನಿಂತಿತು. ಕ್ರಾಸಿಂಗ್ ಗೆ ರೈಲು ನಿಂತಿದೆ. ಎಂದು ನಾವೆಲ್ಲ ಭಾವಿಸಿದ್ದೆವು. ಎಷ್ಟೋ ಹೊತ್ತಿನವರೆಗೆ ರೈಲು ಆರಂಭವಾಗದೇ ಇದ್ದಾಗ ಮೇಲ್ವೇತುವೆ ಉಪಕರಣಗಳು ಕೆಟ್ಟು ಹೋಗಿದೆ ಎಂದು ಮನಗಂಡೆವು ಎಂದು ಪ್ರಯಾಣಿಕರು ಸಾಮಾಜಿಕ ಜಾತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಮಕ್ಕಳಿಗಾಗಿ ಆಟದ ಮೈದಾನ ರಕ್ಷಿಸಿ ಕೊಟ್ಟ ಮಾಜಿ ಶಾಸಕ ರಾಜಣ್ಣ

ನಾಳೆ ಕೆಲ ರೈಲುಗಳು ರದ್ದು:

ರೈಲು ಸಂಖ್ಯೆ 06528 ಎಸ್ ಎಂ ವಿ ಬಿ- ಬಂಗಾರಪೇಟೆ ಮೆಮು ಎಕ್ಸ್‌ಪ್ರೆಸ್, 06289 ಬಂಗಾರಪೇಟೆ - ಕುಪ್ಪಂ  ಮೆಮು ಮತ್ತು 06292  ಕುಪ್ಪಂ - ಕೆ ಎಸ್ ಬೆಂಗಳೂರು ಮೆಮು ಸೇವೆಗಳನ್ನು ನಾಳೆ ರಂದು ದೇವನಗೊಂದಿ- ಮಾಲೂರು ನಿಲ್ದಾಣಗಳ ನಡುವಿನ ಸೇತುವೆಯ ಗರ್ಡರ್ ತೆಗೆಯುವ ಕೆಲಸದಿಂದಾಗಿ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News