ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಶುಪಾಲನಾ ವಿಭಾಗದಿಂದ ಜುಲೈ 11ರಿಂದ ಬೀದಿ ನಾಯಿಗಳ ಸಮೀಕ್ಷೆಯ ಕಾರ್ಯ ಪ್ರಾರಂಭಿಸಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ ಹಾಗೂ ಪ್ರಾಣಿಜನ್ಯ ರೋಗವಾದ ರೇಬೀಸ್ ರೋಗವನ್ನು ತಡೆಗಟ್ಟಲು ಬೀದಿ ನಾಯಿಗಳಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆಂಟಿರೇಬೀಸ್ ಲಸಿಕಾ ಕಾರ್ಯಕ್ರಮವನ್ನು ಪಾಲಿಕೆಯ ಪಶುಪಾಲನಾ ವಿಭಾಗದಿಂದ ಕೈಗೊಳ್ಳಲಾಗಿರುತ್ತದೆ. ಈ ಪೈಕಿ 2019ನೇ ಸಾಲಿನಲ್ಲಿ ಬೀದಿ ನಾಯಿಗಳ ಸಮೀಕ್ಷೆಯನ್ನು ಮಾಡಿದ್ದು, 3.10 ಲಕ್ಷ ಬೀದಿ ನಾಯಿಗಳು ಇರುವುದಾಗಿ ಅಂದಾಜಿಸಲಾಗಿರುತ್ತದೆ.


COMMERCIAL BREAK
SCROLL TO CONTINUE READING

ಪಾಲಿಕೆಯ 8 ವಲಯಗಳಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆಂಟಿರೇಬೀಸ್ ಲಸಿಕಾ ಕಾರ್ಯಕ್ರಮವನ್ನು 2019ನೇ ಸಾಲಿನಿಂದ ಇಲ್ಲಿಯವರೆಗೆ ನಿರಂತರವಾಗಿ ನಡೆಯುತ್ತಿದ್ದು, ಕಾರ್ಯಕ್ರಮದ ಯಶಸ್ವಿ ಅನುಷ್ಟಾನದ ಬಗ್ಗೆ ತಿಳಿಯಲು ಬೀದಿನಾಯಿಗಳ ಸಮೀಕ್ಷೆಯ ಕಾರ್ಯ ಪ್ರಾರಂಭಿಸಲಾಗುತ್ತಿದೆ. ಬೀದಿನಾಯಿಗಳ ಸಮೀಕ್ಷೆಯು ICAR-NIVEDI ಪ್ರಧಾನ ವಿಜ್ಞಾನಿಗಳು (Biostatistics)ಡಾ.ಕೆ.ಪಿ.ಸುರೇಶ್, ICAR-NIVEDI ಪ್ರಧಾನ ವಿಜ್ಞಾನಿ (Virology)ಡಾ.ಹೇಮಾದ್ರಿ ದಿವಾಕರ್, ಬೆಂಗಳೂರಿನ ವೆಟರಿನರಿ ಕಾಲೇಜಿನ ಸೂಕ್ಷ್ಮಾಣುಜೀವಿ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಶ್ರೀಕೃಷ್ಣ ಇಸ್ಲೂರು, WVS ಸಂಸ್ಥೆ ಮತ್ತು ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯ ಮ್ಯಾನೇಜರ್ ಆಪರೇಷನ್ ಡಾ.ಬಾಲಾಜಿ ಚಂದ್ರಶೇಖರ್ ಮತ್ತು ಬೆಂಗಳೂರು ನಗರ ಜಿಲ್ಲೆಯ ಅರೆತಾಂತ್ರಿಕ ಸಿಬ್ಬಂದಿಯ ಸಹಯೋಗದೊಂದಿಗೆ ನಡೆಯಲಿದೆ.


ಇದನ್ನೂ ಓದಿ: ಗೃಹ ಸಚಿವ ಜಿ.ಪರಮೇಶ್ವರ್‌ರಿಂದ ಬೇಡಿಕೆ ಈಡೇರಿಸುವ ಭರವಸೆ


840 ಚ.ಕಿ.ಮೀ ವ್ಯಾಪ್ತಿಯುಳ್ಳ ಬಿಬಿಎಂಪಿಯನ್ನು(ವಸತಿ ಪ್ರದೇಶ, ಕೊಳಚೆ ಪ್ರದೇಶ, ವಾಣಿಜ್ಯ ಪ್ರದೇಶ ಹಾಗೂ ಕೆರೆಗಳು) 0.5 ಚ.ಕಿ.ಮೀ ವ್ಯಾಪ್ತಿಯ 6,850 ಮೈಕ್ರೋ ಜೋನ್‍ಗಳನ್ನಾಗಿ ವಿಂಗಡಿಸಲಾಗಿದ್ದು, ಅದರಲ್ಲಿ ಶೇ.20ರಷ್ಟು ರ‍್ಯಾಂಡಂ ಸ್ಯಾಂಪಲ್‌ಗಳನ್ನು ಅಂದರೆ 1,360 ಮೈಕ್ರೋ ಜೋನ್‍ಗಳಲ್ಲಿ ಸಮೀಕ್ಷೆ ಮಾಡಲು ಆಯ್ಕೆ ಮಾಡಲಾಗಿರುತ್ತದೆ. ಅದರಂತೆ ಬೆಂಗಳೂರು ನಗರ ಜಿಲ್ಲೆಯ ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯ 70 ಅರೆತಾಂತ್ರಿಕ ಸಿಬ್ಬಂದಿ, ಪಾಲಿಕೆಯ ಪಶುಪಾಲನಾ ವಿಭಾಗದ 30 ಸಿಬ್ಬಂದಿ ಸೇರಿದಂತೆ 100 ಮಂದಿಯ ಮೂಲಕ ಈ ಸಮೀಕ್ಷೆಯನ್ನು ಮಾಡಲಾಗುತ್ತಿದೆ. ಬೀದಿ ನಾಯಿ ಸಮೀಕ್ಷೆಯನ್ನು ಕ್ರಮಬದ್ಧವಾಗಿ ವ್ಯವಸ್ಥಿತವಾಗಿ ವಾರ್ಡ್‍ವಾರು ನಿರ್ವಹಿಸಲು 1 ತಂಡದಲ್ಲಿ ಇಬ್ಬರು ಸಮೀಕ್ಷಾದಾರರಂತೆ ಒಟ್ಟು 50 ತಂಡಗಳನ್ನು ರಚಿಸಲಾಗಿದ್ದು, ಇದರ ಮೇಲ್ವಿಚಾರಣೆಗಾಗಿ 15 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ.


ಬೀದಿ ನಾಯಿಗಳ ಸಮೀಕ್ಷೆಯು ಒಟ್ಟು 14 ದಿನಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಸದರಿ ಸಮೀಕ್ಷೆಯು ಪ್ರತಿನಿತ್ಯ ಬೆಳಗ್ಗೆ 6ರಿಂದ ಬೆಳಗ್ಗೆ 8.30ಗಂಟೆಯೊಳಗೆ ನಡೆಯಲಿದೆ. ಮೈಕ್ರೋಜೋನ್‌ನಲ್ಲಿ ಕಂಡುಬರುವ ಬೀದಿ ನಾಯಿಗಳ ಭಾವಚಿತ್ರದೊಂದಿಗೆ ಪ್ರತಿ ನಾಯಿಯ ಮಾಹಿತಿಯನ್ನು WVS ಡೇಟಾ ಕಲೆಕ್ಷನ್ ಆ್ಯಪ್‌ನಲ್ಲಿ ನಮೂದಿಸಬೇಕು. ಆ್ಯಪ್‌ನಲ್ಲಿ ದಾಖಲಾದ ಮಾಹಿತಿಯನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಮಾತ್ರ ವೀಕ್ಷಿಸಬಹುದಾಗಿದ್ದು, ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿರುವುದಿಲ್ಲ. ಒಟ್ಟು 14 ದಿನಗಳ ಸಮೀಕ್ಷೆಯ ನಂತರ ICAR-NIVEDI ವಿಜ್ಞಾನಿ(Biostatistics) ಡಾ.ಕೆ.ಪಿ.ಸುರೇಶ್ ಅವರು ಮಾಹಿತಿಯನ್ನು ಕ್ರೋಢೀಕರಿಸಿ ಪಾಲಿಕೆಗೆ ವರದಿ ನೀಡಲಿದ್ದಾರೆ.


ಇದನ್ನೂ ಓದಿ: Kasturi Rangan: ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್​ಗೆ ಲಘು ಹೃದಯಾಘಾತ!


ಬೀದಿನಾಯಿಗಳ ಸಮೀಕ್ಷೆಯ ಪ್ರಮುಖ ಉದ್ದೇಶ:


ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಒಟ್ಟು ಬೀದಿನಾಯಿಗಳ ಸಂಖ್ಯೆ(ಹೆಣ್ಣು-ಗಂಡು ನಾಯಿಗಳ ಸಂಖ್ಯೆ) ಲಭ್ಯವಾಗಲಿದೆ.


ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವ ಶೇಕಡವಾರು ಬೀದಿನಾಯಿಗಳ ಸಂಖ್ಯೆ(ಹೆಣ್ಣು-ಗಂಡು ನಾಯಿಗಳ ಸಂಖ್ಯೆ) ಲಭ್ಯವಾಗಲಿದೆ.


ಮಾನವ-ಬೀದಿನಾಯಿಗಳ ಅನುಪಾತ ಲಭ್ಯವಾಗಲಿದೆ.


ಬೀದಿನಾಯಿಗಳ ಸಂಖ್ಯೆ ಲಭ್ಯವಾಗಲಿದೆ.


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.