ಮಂಗಳೂರು: ಮಂಗಳೂರು ಸಹಿತ ರಾಜ್ಯ ಇತರ ಕಡಲ ತೀರದಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಮೇಲೆ ತಮಿಳುನಾಡು ಮೀನುಗಾರರು ಆಳಸಮುದ್ರದಲ್ಲಿ ಆಕ್ರಮಣ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದರಿಂದ ಹತ್ತಕ್ಕೂ ಹೆಚ್ಚು ಕರಾವಳಿಯ ಬೋಟುಗಳು ಹಾನಿಗೊಳಗಾಗಿವೆ.


COMMERCIAL BREAK
SCROLL TO CONTINUE READING

ಆಳಸಮುದ್ರಕ್ಕೆ ಸ್ಮಾಲ್‌ ರಿಬ್ಬನ್‌ ಫಿಶ್‌ ಅಂದರೆ ಪಾಂಬೋಲ್‌ ಮೀನು ಹಿಡಿಯಲು ತೆರಳಿದ್ದ ಮಂಗಳೂರು ಮತ್ತು ಉಡುಪಿ ಭಾಗದ ಸುಮಾರು 300 ಬೋಟುಗಳಿಗೆ ಸಮುದ್ರದ ಮಧ್ಯದಲ್ಲೇ ತಡೆಯೊಡ್ಡಲಾಗಿದೆ. ಬೋಟುಗಳನ್ನು ಹಿಂಬಾಲಿಸಿಕೊಂಡು ಬರುವ ತಮಿಳುನಾಡಿನ ಮೀನುಗಾರರು, ಕರ್ನಾಟಕದ ಬೋಟುಗಳ ಮೇಲೆ ಕಲ್ಲು, ದೊಣ್ಣೆಗಳನ್ನು ಎಸೆದು ಗಾಜುಗಳನ್ನು ಪುಡಿ ಮಾಡಿದ್ದಾರೆ. ಈ ಘಟನೆಯಲ್ಲಿ ಹತ್ತಕ್ಕೂ ಅಧಿಕ ಬೋಟುಗಳಿಗೆ ಹಾನಿಯಾಗಿದೆ. ಈ ನಡುವೆ ಇನ್ನು ಕೆಲವು ಬೋಟುಗಳು ದಾಳಿಯಿಂದ ತಪ್ಪಿಸಿಕೊಂಡು ಮಂಗಳೂರಿಗೆ ಬಂದಿವೆ ಎಂದು ವರದಿ ಆಗಿದೆ.


ಇದನ್ನೂ ಓದಿ- ನಾನು ಸದಾ ರಿಲವೆಂಟ್ ರಾಜಕಾರಣಿ:ಸದನದಲ್ಲಿ ಸಿದ್ದು ಗುಡುಗು!


ಮಂಗಳೂರಿನಿಂದ ಸುಮಾರು 200 ಮತ್ತು ಮಲ್ಪೆ, ಉಡುಪಿ ಭಾಗದ ಸುಮಾರು 100 ಬೋಟುಗಳು ಆಳಸಮುದ್ರಕ್ಕೆ ತೆರಳಿ ಮೀನುಗಾರಿಕೆಯನ್ನು ಮಾಡುತ್ತಿದ್ದು, ಈ ನಡುವೆ ತಮಿಳುನಾಡಿನ ಮೀನುಗಾರರು ದಾಳಿ ನಡೆಸಲು ಆರಂಭಿಸಿದ್ದಾರೆ. ಇವರ ದಾಳಿಯಿಂದ ಸುಮಾರು 1500ಕ್ಕೂ ಅಧಿಕ ಮಂದಿ ಮೀನುಗಾರಾರರು ಮೀನುಗಾರಿಕೆ ನಡೆಸಲಾಗದೇ ಮರಳಿ ಬಂದಿದ್ದಾರೆ. ಪ್ರತೀ ಬೋಟಿಗೂ 10 ಲಕ್ಷ ರೂಪಾಯಿಗೂ ಅಧಿಕ ಹಾನಿ ಉಂಟಾಗಿದೆ. 


ಇದನ್ನೂ ಓದಿ- ರಾಜ್ಯ ರಾಜಕೀಯದ ಬಗ್ಗೆ ಕೋಡಿಮಠದ ಶ್ರೀಗಳಿಂದ ಸ್ಫೋಟಕ ಭವಿಷ್ಯ.!


ತೀರದಿಂದ 12 ನಾಟಿಕಲ್ ಮೈಲಿನ ಅನಂತರ ಆಳಸಮುದ್ರದಲ್ಲಿ ಯಾರು ಬೇಕಾದರೂ ಮೀನುಗಾರಿಕೆ ಮಾಡಬಹುದಾಗಿದೆ. ಅದಕ್ಕೆ ರಾಜ್ಯದ ವ್ಯಾಪ್ತಿ ಇರುವುದಿಲ್ಲ. ಆದರೆ ತಮಿಳುನಾಡಿನ ಮೀನುಗಾರರು ಪ್ರಚೋದಿತರಾಗಿ ಆಕ್ರಮಣ ನಡೆಸಿದ್ದಾರೆ. ತಮಿಳುನಾಡಿನ ಮೀನುಗಾರರ ಅಕ್ರಮಣ, ದಾಳಿ ಮೀನುಗಾರರ ನಡುವಿನ ಸಂಘರ್ಷ, ಅಂತಾರಾಜ್ಯ ವಿವಾದಕ್ಕೆ ಕಾರಣ ಮಾಡಿಕೊಟ್ಟಿದೆ. ಜಿಲ್ಲಾದಿಕಾರಿ, ಸರಕಾರ ಕೂಡಲೇ ಮಧ್ಯೆ ಪ್ರವೇಶಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮೀನುಗಾರ ಮುಖಂಡರು ಆಗ್ರಹಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.