“ತುಳುವರಿಗೆ ಕನ್ನಡ ರಾಜ್ಯ ಭಾಷೆ, ತುಳು ಮಾತೃಭಾಷೆ”: ಒಡಿಯೂರು ಶ್ರೀ

ಬೆಂಗಳೂರಿನ ತುಳುವೆರೆ ಚಾವಡಿ 25ನೇ ವರ್ಷದ ಬೊಳ್ಳಿ ಪರ್ಬ ಕಾರ್ಯಕ್ರಮದಲ್ಲಿ ತುಳುನಾಡ್ದ​ ಸಿರಿ ಪ್ರಶಸ್ತಿ ಮತ್ತು  ಜೋಕುಲೆ ಉಜ್ಜಾಲ್​ ತುಳು ಪದಮಾಲೆ ಪುಸ್ತಕ ಹಾಗೂ ಸತ್ಯಪ್ಪೆ ಬಾಲೆಲು ಆಡಿಯೋ ಬಿಡುಗಡೆ ಮಾಡಿ ಮಾತನಾಡಿದ ಅವರು, ತುಳುಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರಿಸುವ ವಿಚಾರ ಕೂಡ ಹೋರಾಟದ ಹಾದಿಯಲ್ಲಿದೆ.

Written by - Zee Kannada News Desk | Edited by - Bhavishya Shetty | Last Updated : Feb 13, 2023, 07:21 PM IST
    • ತುಳುನಾಡಿನವರಿಗೆ ಕನ್ನಡ ರಾಜ್ಯ ಭಾಷೆಯಾದ್ರೆ, ತುಳು ಮಾತೃಭಾಷೆಯಾಗಿದೆ
    • ಈ ಎರಡು ಭಾಷೆಗಳನ್ನು ಉಳಿಸುವ ಮತ್ತು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ
    • ಬೆಂಗಳೂರಿನ ತುಳುವೆರೆ ಚಾವಡಿ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಹೇಳಿಕೆ
“ತುಳುವರಿಗೆ ಕನ್ನಡ ರಾಜ್ಯ ಭಾಷೆ, ತುಳು ಮಾತೃಭಾಷೆ”: ಒಡಿಯೂರು ಶ್ರೀ title=
Odiyoor Sri

ಹೃದಯದ ಭಾವನೆಗಳ ಇನ್ನೊಂದು ರೂಪವೇ ಭಾಷೆ. ಭಾಷೆಗೆ ಸೆಳೆಯುವಂತಹ ಶಕ್ತಿ ಇದೆ. ತುಳುನಾಡಿನವರಿಗೆ ಎರಡು ಭಾಷೆ ಇದೆ. ಕನ್ನಡ ರಾಜ್ಯ ಭಾಷೆಯಾದ್ರೆ, ತುಳು ಮಾತೃಭಾಷೆಯಾಗಿದೆ. ಈ ಎರಡು ಭಾಷೆಗಳನ್ನು ಉಳಿಸುವ ಮತ್ತು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.

ಬೆಂಗಳೂರಿನ ತುಳುವೆರೆ ಚಾವಡಿ 25ನೇ ವರ್ಷದ ಬೊಳ್ಳಿ ಪರ್ಬ ಕಾರ್ಯಕ್ರಮದಲ್ಲಿ ತುಳುನಾಡ್ದ​ ಸಿರಿ ಪ್ರಶಸ್ತಿ ಮತ್ತು  ಜೋಕುಲೆ ಉಜ್ಜಾಲ್​ ತುಳು ಪದಮಾಲೆ ಪುಸ್ತಕ ಹಾಗೂ ಸತ್ಯಪ್ಪೆ ಬಾಲೆಲು ಆಡಿಯೋ ಬಿಡುಗಡೆ ಮಾಡಿ ಮಾತನಾಡಿದ ಅವರು, ತುಳುಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರಿಸುವ ವಿಚಾರ ಕೂಡ ಹೋರಾಟದ ಹಾದಿಯಲ್ಲಿದೆ. ಆದ್ರೆ ಅದಕ್ಕಿಂತ ಮುನ್ನ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿಸಬೇಕು. ಈಗಾಗಲೇ ಸರ್ಕಾರ ಈ ಬಗ್ಗೆ ಅಧ್ಯಯನ ಸಮಿತಿಯನ್ನು ರಚಿಸಿದ್ದು, ಇದು ಆದಷ್ಟು ಬೇಗ ಜಾರಿಯಾಗಲು ತುಳುನಾಡಿನವರು ಎಲ್ಲರೂ ಒಗ್ಗಟ್ಟಿನಿಂದಿರಬೇಕು ಎಂದು ಹೇಳಿದ್ರು.

ಇದನ್ನೂ ಓದಿ:  ಫೆಬ್ರವರಿ 15ರಂದು ಆಮ್‌ ಆದ್ಮಿ ಪಾರ್ಟಿಯಿಂದ "ಪೊರಕೆಯೇ ಪರಿಹಾರ" ಯಾತ್ರೆ

ಇನ್ನು ನಮ್ಮ ಮಾತೃಭಾಷೆಯನ್ನು ಎಲ್ಲರೂ ಉಳಿಸಿಕೊಳ್ಳಬೇಕು. ಕರಾವಳಿಯ ಜನರಲ್ಲಿ ನಾಯಕತ್ವದ ಗುಣವಿದೆ. ಸದಾ ಕ್ರಿಯಾಶೀಲತೆಯಿಂದ ಇರುವ ಜನ ಆತ್ಮವಿಶ್ವಾಸದಿಂದ ಇರುತ್ತಾರೆ. ಹಾಗೇ ತುಳುಭಾಷೆ ಜಾತಿ ಧರ್ಮವನ್ನು ಮೀರಿ ನಿಂತಿದೆ ಎಂದು ತುಳುಭಾಷೆಯಲ್ಲಿ ಅಡಗಿರುವ ಶಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಈಗಾಗಲೇ ತುಳು ಭಾಷೆಯನ್ನು ಎರಡನೇ ಭಾಷೆಯನ್ನಾಗಿಸಲು ಅಧ್ಯಯನ ಸಮಿತಿಯನ್ನು ರಚಿಸಿದೆ. ಹಾಗೇ ತುಳು ಭಾಷೆಯ ಲಿಪಿಯೂ ಸರಿಯಾಗಬೇಕು. ಜೊತೆಗೆ ಶಾಲೆಗಳಲ್ಲಿ ತುಳು ಭಾಷೆಯನ್ನು ನಾಲ್ಕನೇ ತರಗತಿಯವರೆಗೆ  ಆಯ್ಕೆಯ ಭಾಷೆಯನ್ನಾಗಿಸಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ, ಖ್ಯಾತ ಯಕ್ಷಗಾನ ಕಲಾವಿದರಾದ ಸೀತಾರಾಮ ಕುಮಾರ್ ಕಟೀಲ್, ಹಿರಿಯ ತುಳು ಸಾಹಿತಿ ಕುಶಲಾಕ್ಷಿ ವಿ.ಕಣ್ವತೀರ್ಥ, ಸಮಾಜ ಸೇವಕ ರವಿ ಕಟಪಾಡಿ, ಪ್ರಕಾಶ್ ಜೆ ಶೆಟ್ಟಿಗಾರ್ ಇವರಿಗೆ ತುಳುನಾಡ್ದ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಬೆಳ್ಳಿ ಹಬ್ಬ ಸಂಭ್ರಮದ ಪ್ರಯುಕ್ತ ಹಿರಿಯ ತುಳು-ಕನ್ನಡ ಸಾಹಿತಿ ಡಿ.ಕೆ.ಚೌಟ ಇವರ ಸಂಸ್ಮರರ್ಣಾಥವಾಗಿ ಹಿರಿಯ ತುಳು ಸಾಹಿತಿ ಉಗಪ್ಪ ಪೂಜಾರಿಯವರಿಗೆ ಪ್ರಶಸ್ತಿ ಮತ್ತು ಸಾಮಾಜಿಕ ಚಿಂತಕ, ತುಳು ಹೊರಾಟಗಾರ ಡಾ.ಉದಯ ಧರ್ಮಸ್ಥಳ ಇವರ ಸಂಸ್ಮರರ್ಣಾಥವಾಗಿ ತುಳು ಸೇವೆಗಾಗಿ ಯುವ ಪ್ರತಿಭೆ ಸತೀಶ್ ಅಗ್ಪಲ್ ರವರಿಗೆ ಪ್ರಶಸ್ತಿ ನೀಡಲಾಯಿತು. ವಿಶೇಷ ಚೇತನರಾದ ಉಲ್ಲಾಸ್ ಯು ನಾಯಕ್​, ಲಿಖಿತ ಮತ್ತು ಶ್ರಾವ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 

ಇದನ್ನೂ ಓದಿ: ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆಗೆ 250 ರೂ. ಟೋಲ್ ನಿಗದಿ ಸಾಧ್ಯತೆ

ಕಾರ್ಯಕ್ರಮದಲ್ಲಿ ತುಳುವೆರೆ ಚಾವಡಿ ಸಂಘದ ಅಧ್ಯಕ್ಷ ಪುರುಷೋತ್ತಮ್ ಚೇಂಡ್ಲಾ, ಉಮೇಶ್ ಪೂಂಜಾ, ವಸಂತ್​ ಶೆಟ್ಟಿ ಬೆಳ್ಳಾರೆ, ಪ್ರೋ. ರಾಧಾಕೃಷ್ಣ ಸೇರಿದಂತೆ ಕಾರ್ಯಕ್ರಮದಲ್ಲಿ ತುಳುವೆರೆ ಚಾವಡಿ ಸಂಘದ ಪದಾಧಿಕಾರಿಗಳು, ಸದಸ್ಯರು ಭಾಗಿಯಾಗಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News