ಬಾಗಲಕೋಟೆ : ಚಾಲಕನ ನಿಯಂತ್ರಣ ತಪ್ಪಿ ಡಿಸೇಲ್  ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ ಬಾಗಲಕೋಟೆಯ ಲೋಕಾಪುರ ಪಟ್ಟಣದ ಬಳಿ ನಡೆದಿದೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಲೋಕಾಪುರ - ಮುಧೋಳ ರಸ್ತೆಯಲ್ಲಿ ಅವಘಡ ಸಂಭವಿಸಿದೆ. ಟ್ಯಾಂಕರ್ ಬಿದ್ದ ರಭಸಕ್ಕೆ ಹೊತ್ತಿ ಉರಿದಿದೆ. 


COMMERCIAL BREAK
SCROLL TO CONTINUE READING

ಬೆಳಗಾವಿಯಿಂದ ಜಮಖಂಡಿ ಕಡೆ ಹೊರಟಿದ್ದ ಟ್ಯಾಂಕರ್ ಮುಧೋಳ ತಾಲೂಕಿನ ಲೋಕಾಪುರ - ಮುಧೋಳ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಟ್ಯಾಂಕರ್ ಪಲ್ಟಿಯಾಗುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡಿದೆ. ಡಿಸೇಲ್ ಸಾಗಿಸುತ್ತಿದ್ದ ಟ್ಯಾಂಕರ್ ಆದ ಕಾರಣ ಬೆಂಕಿಯ ತೀವ್ರತೆ ಹೆಚ್ಚಾಗಿದೆ.  


ಇದನ್ನೂ ಓದಿ : AICC ಅಧ್ಯಕ್ಷರಾದರೆ ಖರ್ಗೆಗೆ ಕೆಪಿಸಿಸಿಯದ್ದೇ  ಮೊದಲ ದೊಡ್ಡ ಸವಾಲು!


ಟ್ಯಾಂಕರ್ ನಲ್ಲಿ ಅಂದಾಜು 20 ಸಾವಿರ ಲೀಟರ್ ಡಿಸೇಲ್ ಇತ್ತು ಎನ್ನಲಾಗುತ್ತಿದೆ. ಬೆಂಕಿ ಹೊತ್ತಿ ಕೊಳುತ್ತಿದ್ದಂತೆಯೇ ಇಡೀ ಟ್ಯಾಂಕರ್ ಗೆ ಬೆಂಕಿ ಆವರಿಸಿದ್ದು, ಟ್ಯಾಂಕರ್ ಸುತ್ತಿ ಕರಕಲಾಗಿದೆ. ಬೆಂಕಿಯ ತೀವ್ರತೆಗೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ದಟ್ಟ  ಹೊಗೆ ಆವರಿಸಿತ್ತು. 


ಅದೃಷ್ಟವಶಾತ್ ಘಟನೆಯಲ್ಲಿ ಚಾಲಕ, ಕ್ಲೀನರ್ ಇಬ್ಬರೂ ಪಾರಾಗಿದ್ದಾರೆ. ಆದರೆ ಘಟನೆಯಿಂದ ಗಾಬರಿಗೊಂಡ ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ.  ಸ್ಥಳಕ್ಕೆ ಮುಧೋಳ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ.  


ಇದನ್ನೂ ಓದಿ : ಕಾರ್‌ ಒನರ್‌ಗಳೇ ಎಚ್ಚರ..! : 3.50 ಕೋಟಿ ಕಾರನ್ನು 42 ಲಕ್ಷಕ್ಕೆ ಮಾರಿದ್ದರಂತೆ ಮೆಕ್ಯಾನಿಕ್ಸ್‌..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.