ಕಾರ್‌ ಒನರ್‌ಗಳೇ ಎಚ್ಚರ..! : 3.50 ಕೋಟಿ ಕಾರನ್ನು 42 ಲಕ್ಷಕ್ಕೆ ಮಾರಿದ್ದರಂತೆ ಮೆಕ್ಯಾನಿಕ್ಸ್‌..!

ಶೋರೂಂ ಸರ್ವಿಸ್‌ಗೆ ಬಿಟ್ಟ ಹೈಎಂಡ್ ಕಾರುಗಳ ಮಾರಾಟ ಪ್ರಕರಣದಲ್ಲಿ ಕಾರು ಕಳೆದುಕೊಂಡಿದ್ದ ಉದ್ಯಮಿ ದಿ ಆದಿಕೇಶವುಲು ಮೊಮ್ಮಗ ಗೀತಾವಿಷ್ಣು ಸ್ಪೋಟಕ ಮಾಹಿತಿಯೊಂದನ್ನು ನೀಡಿದ್ದಾರೆ. 3 ಕೋಟಿ 50 ಲಕ್ಷ ಬೆಲೆಬಾಳುವ ಕಾರನ್ನು ಖದೀಮರು 40 ಲಕ್ಷಕ್ಕೆ ಮಾರಾಟ ಮಾಡಿದ್ದರು ಎಂದಿದ್ದಾರೆ.

Written by - VISHWANATH HARIHARA | Edited by - Krishna N K | Last Updated : Oct 17, 2022, 07:01 PM IST
  • ಶೋರೂಂ ಸರ್ವಿಸ್‌ಗೆ ಬಿಟ್ಟ ಹೈಎಂಡ್ ಕಾರುಗಳ ಮಾರಾಟ ಪ್ರಕರಣ
  • ಕಾರು ಕಳೆದುಕೊಂಡಿದ್ದ ಉದ್ಯಮಿ ದಿ ಆದಿಕೇಶವುಲು ಮೊಮ್ಮಗ ಗೀತಾವಿಷ್ಣು ಸ್ಪೋಟಕ ಮಾಹಿತಿ
  • 3 ಕೋಟಿ 50 ಲಕ್ಷ ಬೆಲೆಬಾಳುವ ಕಾರನ್ನು 40 ಲಕ್ಷಕ್ಕೆ ಮಾರಾಟ ಮಾಡಿದ್ದ ಖದೀಮರು
ಕಾರ್‌ ಒನರ್‌ಗಳೇ ಎಚ್ಚರ..! : 3.50 ಕೋಟಿ ಕಾರನ್ನು 42 ಲಕ್ಷಕ್ಕೆ ಮಾರಿದ್ದರಂತೆ ಮೆಕ್ಯಾನಿಕ್ಸ್‌..! title=

ಬೆಂಗಳೂರು : ಶೋರೂಂ ಸರ್ವಿಸ್‌ಗೆ ಬಿಟ್ಟ ಹೈಎಂಡ್ ಕಾರುಗಳ ಮಾರಾಟ ಪ್ರಕರಣದಲ್ಲಿ ಕಾರು ಕಳೆದುಕೊಂಡಿದ್ದ ಉದ್ಯಮಿ ದಿ ಆದಿಕೇಶವುಲು ಮೊಮ್ಮಗ ಗೀತಾವಿಷ್ಣು ಸ್ಪೋಟಕ ಮಾಹಿತಿಯೊಂದನ್ನು ನೀಡಿದ್ದಾರೆ. 3 ಕೋಟಿ 50 ಲಕ್ಷ ಬೆಲೆಬಾಳುವ ಕಾರನ್ನು ಖದೀಮರು 40 ಲಕ್ಷಕ್ಕೆ ಮಾರಾಟ ಮಾಡಿದ್ದರು ಎಂದಿದ್ದಾರೆ.

ಆಗಿದ್ದಿಷ್ಟು ಗೀತಾವಿಷ್ಣು ಐಷಾರಾಮಿ ಕಾರು ಅಪಘಾತವಾಗಿತ್ತು. ರಿಪೇರಿ ಕಾರಣ ಸರ್ವಿಸ್‌ಗೆ ಎಂದು ತಮ್ಮ ಪರಿಚಯಸ್ಥ ಮೆಕ್ಯಾನಿಕ್ ಬಳಿ ಬಿಟ್ಟಿದ್ದರು. ಆದರೆ ಕಾರಿನ ರಿಪೇರಿ ಇಲ್ಲಾಗುವುದಿಲ್ಲ‌ ಅಂತಾ ಮೆಕಾನಿಕ್ ಕಾರುನ್ನು ಹೈದರಾಬಾದ್‌ನ ಪರಿಚಯಸ್ಥರ ಬಳಿ ಬಿಟ್ಟಿದ್ದ. ಆದರೆ ಈಗ ಬಂಧನವಾಗಿರುವ ಆರೋಪಿಗಳು ರಿಪೇರಿಯಾದ ಕಾರನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದರು.

ಇದನ್ನೂ ಓದಿ: Bigg Boss ಮನೆಯಿಂದ ನಿನ್ನೆ ಹೊರಬಂದ ದರ್ಶ್‌ ಬಗ್ಗೆ ಇಲ್ಲಿದೆ ಇಂಟರೆಸ್ಟಿಂಗ್‌ ಮಾಹಿತಿ

ಈ ಹಿನ್ನೆಲೆ ಪುಲಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಗೀತಾವಿಷ್ಣು ಪ್ರಕರಣ ದಾಖಲಿಸಿದ್ದರು. ಸದ್ಯ ಈ ಕಾರನ್ನು ಹೈದರಾಬಾದ್‌ನಲ್ಲಿ ನಂಬರ್ ಪ್ಲೇಟ್ ಇಲ್ಲದೆ ವ್ಯಕ್ತಿಯೊಬ್ಬರು ಚಲಾಯಿಸುತ್ತಿದ್ದರು. ದೂರಿನ ಹಿನ್ನೆಲೆ ಕಾರ್ಯಾಚರಣೆ ನಡೆಸಿದ್ದ ಪುಲಕೇಶಿ ನಗರ ಪೊಲೀಸರು ಕಾರನ್ನು ಪತ್ತೆಹಚ್ಚಿ ಗೀತಾವಿಷ್ಣುಗೆ ಹಿಂದಿರೂಗಿಸಿದ್ದಾರೆ. ಇದಕ್ಕೂ ಮೊದಲು ಲೋನ್ ಪಡೆಯಲು ಕಾರುನ್ನು ಅಡ ಇಟ್ಟಿದ್ದರು ಎನ್ನಲಾಗಿತ್ತು.

ಮುಂದುವರೆದ ಪೊಲೀಸರ ಕಾರ್ಯಾಚರಣೆ : ಸದ್ಯ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈಗಾಗಲೇ 14 ಹೈಎಂಡ್ ಕಾರುಗಳನ್ನು ಸೀಜ್ ಮಾಡಿ ಮಾಲೀಕರಿಗೆ ವಾಪಸ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಕೃತ್ಯದ ಹಿಂದೆ ದೊಡ್ಡ ಜಾಲ ಇರುವ ಸಂಶಯ ವ್ಯಕ್ತವಾಗುತ್ತಿದ್ದು, ಪೊಲೀಸರು ಮತ್ತೆ ಕಾರ್ಯಾಚರಣೆ ಚುರುಕುಗೊಳಿಸುವ ಸಾಧ್ಯತೆ ಇದೆ. ಅದೆನೇ ಇರ್ಲಿ ಐಷಾರಾಮಿ ಕಾರುಗಳನ್ನು ರಿಪೇರಿಗೆ ಅಂತಾ ಬಿಡುವ ಮೊದಲು ಕಾರು ಮಾಲೀಕರು ಸಹ ಎಚ್ಚರದಿಂದ ಇರಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News