ಬೆಂಗಳೂರು : ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ತೌಕ್ತೆ ಚಂಡಮಾರುತ ಪರಿಣಾಮವಾಗಿ ರಾಜ್ಯದ ಮಡಿಕೇರಿ, ಮಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆ ಶುರುವಾಗಿದೆ. ಮಡಿಕೇರಿಯಲ್ಲಿ ರಾತ್ರಿಯಿಂದಲೇ ಮಳೆ ಸುರಿಯುತ್ತಿದ್ದರೇ, ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ ನಗರದ ಸುತ್ತಮುತ್ತ ತುಂತುರು ಮಳೆ ಶುರುವಾಗಿದೆ, ಮೈಸೂರು ಜಿಲ್ಲೆಯಲ್ಲೂ ಜಿಟಿಜಿಟಿ ಮಳೆ ಆರಂಭವಾಗಿದೆ.


COMMERCIAL BREAK
SCROLL TO CONTINUE READING

ತೌಕ್ತೆ ಚಂಡಮಾರುತದ ಎಫೆಕ್ಟ್(Tauktae Cyclone Effect) ರಾಜ್ಯದ ವಿವಿಧೆಡೆ ಭಾರೀ ಪರಿಣಾಮ ತೋರಿದೆ. ಮಡಿಕೇರಿ ಜಿಲ್ಲೆಯಲ್ಲಿ ರಾತ್ರಿಯಿಂದಲೇ ಮಳೆ ಶುರುವಾಗಿದ್ದು, ಮತ್ತೆ ಎಲ್ಲಿ ಮೂರು ವರ್ಷಗಳ ಹಿಂದೆ ಆದ ಮಳೆಯ ಅವಾಂತರ, ಈ ವರ್ಷ ಕೂಡ ಆಗಿಬಿಡುತ್ತದೋ ಎನ್ನುವ ಆತಂಕವನ್ನು ಜನರಲ್ಲಿ ಮೂಡಿಸಿದೆ.


ಇದನ್ನೂ ಓದಿ : ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ : BPL ಕಾರ್ಡ್‌ದಾರರಿಗೆ ಅಕ್ಕಿ ಹೆಚ್ಚಳ!


ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ತೌಕ್ತೆ ಚಂಡಮಾರುತದ ಪರಿಣಾಮವಾಗಿ, ಕಡಲಬ್ಬರ ಉಂಟಾಗಿದೆ. ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ(Heavy Rain)ಯಾಗುವ ಮುನ್ಸೂಚನೆ ಕೂಡ ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ನಿನ್ನೆ ರಾತ್ರಿಯಿಂದಲೇ ಜಿಲ್ಲೆಯಲ್ಲೂ ಮಳೆ ಶುರುವಾಗಿದ್ದು, ಕಡಲು ಗಾಳಿಯೊಂದಿಗಿನ ಮಳೆಯಿಂದಾಗಿ ಪ್ರಕ್ಷುಬ್ಧಗೊಂಡಿದೆ. ಸಮುದ್ರ ತೀರಕ್ಕೆ ಭಾರೀ ಗಾತ್ರದ ಅಲೆಗಳು ಬಂದು ಅಪ್ಪಳಿಸುತ್ತಿರೋದು ಕಂಡು ಬರುತ್ತಿದೆ.


ಇದನ್ನೂ ಓದಿ : ಕೊರೊನಾ ಸಂಕಷ್ಟದಲ್ಲಿ ನೆರವಾಗುತ್ತಿದ್ದ ಕನ್ನಡಿಗ ಬಿ.ವಿ ಶ್ರೀನಿವಾಸ್ ಪ್ರಶ್ನಿಸಿದ ದೆಹಲಿ ಪೊಲೀಸರು, ವ್ಯಾಪಕ ಖಂಡನೆ


ಶಿವಮೊಗ್ಗ ಜಿಲ್ಲೆ(Shivamogga Dist)ಯಲ್ಲೂ ರಾತ್ರಿಯಿಂದಲೇ ಮೋಡ ಕವಿದ ವಾತಾವರಣ ಇದ್ದು, ಜೋರಾದಂತ ಗಾಳಿ ಬೀಸುತ್ತಿದೆ. ಬೆಳ್ಳಂಬೆಳಿಗ್ಗೆ ಜಿಲ್ಲೆಯ ಅನೇಕ ಕಡೆಗಳಲ್ಲಿ ತುಂತುರು ಮಳೆ ಕೂಡ ಸುರಿದಿದೆ. ಈಗಾಗಲೇ ಮೊನ್ನೆಯಷ್ಟೇ ಸುರಿದಂತ ಭಾರೀ ಮಳೆಯಿಂದಾಗಿ ಶಿವಮೊಗ್ಗ ನಗರದಲ್ಲಿನ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ದೊಡ್ಡ ಅವಾಂತರ ಕೂಡ ಉಂಟಾಗಿತ್ತು.


ಇದನ್ನೂ ಓದಿ : R Ashok : ಮೇ 24 ರ ನಂತರ ಲಾಕ್​ಡೌನ್​ ಮುಂದುವರೆಯುವ ಸುಳಿವು ನೀಡಿದ ಕಂದಾಯ ಸಚಿವ!


ಇನ್ನೂ ತೌಕ್ತೆ ಚಂಡಮಾರುತದ ಪರಿಣಾಮವಾಗಿ ಮೈಸೂರು ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದ ಜಿಟಿಜಿಟಿ ಮಳೆ(Rain) ಆರಂಭವಾಗಿದೆ. ಬೆಳ್ಳಂಬೆಳ್ಗಿಗೆ ಆರಂಭಗೊಂಡಿದ್ದಂತ ಮಳೆಯಿಂದಾಗಿ ಲಾಕ್ ಡೌನ್ ನಡುವೆಯೂ ಅಗತ್ಯ ವಸ್ತು ಖರೀದಿಗೆ ತೆರಳಿದಂತ ಜನರಿಗೆ ಅಡ್ಡಿಯಾಯಿತು, ಮಳೆ ಸುರಿದಿದ್ದರಿಂದ ವ್ಯಾಪಾರ ಇಲ್ಲದೇ ಅಂಗಡಿ ಮಾಲೀಕರಲ್ಲಿ ಬೇಸರ ಕೂಡ ಉಂಟಾಗಿದ್ದು ಕಂಡು ಬಂದಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.