ಬೆಂಗಳೂರು: ಪಿಎಸ್ಐ ಪರೀಕ್ಷೆ ಅಕ್ರಮ ರಾಜ್ಯ ಸರ್ಕಾರದ ಬುಡಕ್ಕೆ ಬಾಂಬ್ ಇಟ್ಟಂತಾಗಿದೆ. ಈ ಪ್ರಕರಣವು ರಾಷ್ಟ್ರಮಟ್ಟದಲ್ಲಿ ಬಿಜೆಪಿ ಸರ್ಕಾರವನ್ನ ಪೇಚಿಗೆ ಸಿಲುಕಿಸಿತ್ತು. ಇದರ ನಡುವೆ ಈಗ ಶಿಕ್ಷಕರ ನೇಮಕಾತಿ ಪರೀಕ್ಷೆಯೂ ಎದುರಾಗಿದೆ. ಹೀಗಾಗಿ ಶಿಕ್ಷಣ ಇಲಾಖೆ ಈ ಪರೀಕ್ಷೆಗೆ ಇನ್ನಿಲ್ಲದ ಕಟ್ಟುನಿಟ್ಟಿನ ನೀತಿ ಜಾರಿಗೆ ತಂದಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ: ಒಂದು ದೇಶ-ಹಲವಾರು ರುಚಿಕರ ಖಾದ್ಯ: ಭಾರತದ ಪ್ರಮುಖ ಆಹಾರ ಪದ್ಧತಿ ಬಗ್ಗೆ ಇಲ್ಲಿದೆ ಮಾಹಿತಿ


ಪಿಎಸ್‌ಐ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆ ಪರೀಕ್ಷೆ ಅಕ್ರಮದಿಂದ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ 15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ವಿಚಾರದಲ್ಲಿ ಫುಲ್ ಅಲರ್ಟ್ ಆಗಿದೆ. ಮುಂದಿನ ವಾರ ಪ್ರಾಥಮಿಕ ಶಾಲಾ ಶಿಕ್ಷಕರ ಪರೀಕ್ಷೆ ನಡೆಯಲ್ಲಿದ್ದು, ಶಿಕ್ಷಣ ಇಲಾಖೆ ಪ್ರಶ್ನೆ ಪತ್ರಿಕೆ ಗೌಪ್ಯತೆಗೆ ತೀರಾ ತಲೆಕೆಡಿಸಿಕೊಂಡಿದೆ. ಜೊತೆಗೆ ಎರಡು ದಿನಗಳ ಕಾಲ ನಡೆಯುವ ಈ ಪರೀಕ್ಷೆಗೆ ಕಟ್ಟುನಿಟ್ಟಿನ ಕ್ರಮ ತಗೆದುಕೊಳ್ಳಲು ಮುಂದಾಗಿದೆ.


1 ಲಕ್ಷದ ಆರು ಸಾವಿರ ಅಭ್ಯರ್ಥಿಗಳು ನೋಂದಣಿ: 15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಮೇ 21 ಮತ್ತು 22ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಿದೆ. ಈ ಪರೀಕ್ಷೆಗೆ 1 ಲಕ್ಷದ 6 ಸಾವಿರ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲು ಇಂದು‌ ಶಿಕ್ಷಣ ಸಚಿವರು ಗೃಹ ಇಲಾಖೆ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಪರೀಕ್ಷಾ ಅಕ್ರಮ ತಡೆಗೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲು ಗೃಹ ಇಲಾಖೆಗೆ ಮನವಿ ಮಾಡಿದ್ದಾರೆ. ಇದರ ಜೊತೆಗೆ ಪರೀಕ್ಷಾ ನಿಯಮವನ್ನೂ ಇನ್ನಷ್ಟು ಬಿಗಿ ಮಾಡಿ ಶಿಕ್ಷಣ ಸಚಿವರು ಆದೇಶ ಹೊರಡಿಸಿದ್ದಾರೆ.


ಪರೀಕ್ಷೆಗೆ ಶಿಕ್ಷಣ ಇಲಾಖೆ ಕೈಗೊಂಡ ಟಫ್ ರೂಲ್ಸ್ ಹೀಗಿರಲಿದೆ: 


  • ಒಂದು ಕೊಠಡಿಯಲ್ಲಿ 20 ಮಂದಿ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ

  • ಪರೀಕ್ಷಾ ಕೇಂದ್ರಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಕೆ

  • ಮೂರು ದಿನ ಮೊದಲೇ ಪರೀಕ್ಷಾ ಕೇಂದ್ರ ವಶಕ್ಕೆ

  • 3 ಕಮಿಟಿ ರಚಿಸಿ ಪರೀಕ್ಷಾ ಕೇಂದ್ರದ ಮೇಲೆ ಹದ್ದಿನ ಕಣ್ಣು

  • ಮೊಬೈಲ್, ವಾಚ್, ಬ್ಲೂಟೂತ್ ಬಳಕೆ ನಿಷೇಧ

  • ಪರೀಕ್ಷಾ ಕೊಠಡಿಯಲ್ಲಿ ವಾಲ್ ಕ್ಲಾಕ್ ಅಳವಡಿಕೆ

  • ಪರೀಕ್ಷೆ ಆರಂಭಕ್ಕೂ ಮುನ್ನ ಪರಿಕ್ಷಾ ಹಾಲ್ ತಪಾಸಣೆ


ಇನ್ನು ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ವೇಳೆ ಅಕ್ರಮ ತಡೆಯಲು ಶಿಕ್ಷಣ ಇಲಾಖೆ ವಿಶೇಷವಾದ ಕೆಲ ನಿಯಮವನ್ನ ಜಾರಿಗೆ ತಂದಿದೆ. ಮುಖ್ಯವಾಗಿ ಈ ಬಾರಿ ಪರೀಕ್ಷೆಯ ಒಂದು ಕೊಠಡಿಯಲ್ಲಿ 20 ಮಂದಿ ಅಭ್ಯರ್ಥಿಗಳನ್ನ ಮಾತ್ರ ಪರೀಕ್ಷೆಗೆ ಕೂರಿಸಲು ತೀರ್ಮಾನಿಸಲಾಗಿದೆ. ಹಾಗೇ ಪರೀಕ್ಷಾ ಕೇಂದ್ರಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಿ ಎಲೆಕ್ಟ್ರಾನಿಕ್ ಉಪಕರಣ ಪತ್ತೆಗೆ ಕ್ರಮ ವಹಿಸಲಾಗಿದೆ. ಇನ್ನು ಪ್ರತೀ ಪರೀಕ್ಷಾ ಕೇಂದ್ರಗಳನ್ನ ಪರೀಕ್ಷೆಗೂ ಮೂರು ದಿನ ಮುಂಚಿತವಾಗೇ ವಶಕ್ಕೆ ಪಡೆಯಲಾಗುತ್ತದೆ.


ಇದನ್ನು ಓದಿ: ನಿಮ್ಮ ಫೆವರೆಟ್ ಶೋಗಳನ್ನು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಉಚಿತವಾಗಿ ವೀಕ್ಷಿಸಿ!


ಹಾಗೇ ಈ ಪರೀಕ್ಷಾ ಮೇಲ್ವಿಚಾರಣೆಗಾಗಿ 3 ಕಮಿಟಿ ರಚಿಸಲಾಸಗ್ತಿದ್ದು ಈ ಕಮಿಟಿ ಪರೀಕ್ಷೆ ಮೇಲೆ ಸಂಪೂರ್ಣ ನಿಗಾ ವಹಿಸಲಿದೆ. ಇನ್ನು ಪರೀಕ್ಷೆಗೆ ಮೊಬೈಲ್, ವಾಚ್, ಬ್ಲೂಟೂತ್ ಬಳಕೆಯನ್ನ ಸಂಪೂರ್ಣ ನಿಷೇಧ ಮಾಡಲಾಗಿದ್ದು ಪರೀಕ್ಷೆ ಆರಂಭಕ್ಕೂ ಮುನ್ನ ಪ್ರತೀ ಪರೀಕ್ಷಾ ಕೊಠಡಿಗಳ ತಪಾಸಣೆಗೂ ನಿರ್ಧರಿಸಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ