ಒಂದು ದೇಶ-ಹಲವಾರು ರುಚಿಕರ ಖಾದ್ಯ: ಭಾರತದ ಪ್ರಮುಖ ಆಹಾರ ಪದ್ಧತಿ ಬಗ್ಗೆ ಇಲ್ಲಿದೆ ಮಾಹಿತಿ

ರಾಜ್ಯದ ಒಂದೊಂದು ಜಿಲ್ಲೆಗಳಲ್ಲಿ ಒಂದೊಂದು ರೀತಿಯ ವಿಭಿನ್ನ ಆಹಾರಗಳು ದೊರಕುತ್ತದೆ. ಮಂಡ್ಯದಲ್ಲಿ ರಾಗಿಮುದ್ದೆ, ದಾವಣಗೆರೆಯಲ್ಲಿ ಬೆಣ್ಣೆದೋಸೆ, ದಕ್ಷಿಣ ಕನ್ನಡದಲ್ಲಿ ಕೋಳಿ ರೊಟ್ಟಿ, ಬೆಳಗಾವಿಯ ಕುಂದಾ, ಮೈಸೂರು ಬಜ್ಜಿ ಹೀಗೆ ಅನೇಕ ಆಹಾರ ಪದ್ಧತಿಗಳು ಕಾಣಸಿಗುತ್ತವೆ. 

Written by - Bhavishya Shetty | Last Updated : May 10, 2022, 02:22 PM IST
  • ಭಾರತದ ಪ್ರಮುಖ ಭಕ್ಷ್ಯಗಳ ವಿವರ ಇಲ್ಲಿದೆ
  • ಭಾರತದಲ್ಲಿ ಆಹಾರ ಪದ್ಧತಿಯು ಇತರ ದೇಶಗಳಿಗಿಂದ ವಿಭಿನ್ನ
  • ಕೆಲವು ರಾಜ್ಯಗಳಲ್ಲಿ ಉಣಬಡಿಸುವ ಪ್ರಸಿದ್ಧ ಆಹಾರದ ನಿಮಗೆ ತಿಳಿದಿದೆಯೇ?
ಒಂದು ದೇಶ-ಹಲವಾರು ರುಚಿಕರ ಖಾದ್ಯ: ಭಾರತದ ಪ್ರಮುಖ ಆಹಾರ ಪದ್ಧತಿ ಬಗ್ಗೆ ಇಲ್ಲಿದೆ ಮಾಹಿತಿ title=
Indian cuisine

ಭಾರತದ ಪ್ರತೀ ರಾಜ್ಯಗಳಲ್ಲಿ, ಪತ್ರೀ ಜಿಲ್ಲೆಗಳಲ್ಲಿ, ಪ್ರತೀ ಪ್ರದೇಶದಲ್ಲಿಒಂದೊಂದು ವಿಭಿನ್ನವಾದ ಆಹಾರ ಪದ್ಧತಿಗಳಿವೆ. ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ ಎನ್ನುವಂತೆ ವಿವಿಧವಾದ ರುಚಿಕರ ಖಾದ್ಯ ಭಾರತದ ಮೂಲೆ ಮೂಲೆಗಳಲ್ಲಿ ಲಭ್ಯವಾಗುತ್ತದೆ. ಇನ್ನು ಭಾರತದ ಆಹಾರ ಪದ್ಧತಿಯನ್ನು ಬೇರೆ ದೇಶಗಳಿಗೆ ಹೋಲಿಸಿದರೆ ಸ್ವಲ್ಪ ವಿಭಿನ್ನ ಎನ್ನಬಹುದು. ಇದೀಗ ದೇಶದ ಕೆಲವು ರಾಜ್ಯಗಳಲ್ಲಿ ಉಣಬಡಿಸುವ ಪ್ರಸಿದ್ಧ ಆಹಾರಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. 

ಇದನ್ನು ಓದಿ: ನಿಮ್ಮ ಫೆವರೆಟ್ ಶೋಗಳನ್ನು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಉಚಿತವಾಗಿ ವೀಕ್ಷಿಸಿ!

ಭಾರತದ 10 ವಿವಿಧ ಸ್ಥಳಗಳ ಪ್ರಸಿದ್ಧ ಭಕ್ಷ್ಯಗಳು  ಈ ಕೆಳಗಿನಂತಿದೆ. 
ಕರ್ನಾಟಕ: ರಾಜ್ಯದ ಒಂದೊಂದು ಜಿಲ್ಲೆಗಳಲ್ಲಿ ಒಂದೊಂದು ರೀತಿಯ ವಿಭಿನ್ನ ಆಹಾರಗಳು ದೊರಕುತ್ತದೆ. ಮಂಡ್ಯದಲ್ಲಿ ರಾಗಿಮುದ್ದೆ, ದಾವಣಗೆರೆಯಲ್ಲಿ ಬೆಣ್ಣೆದೋಸೆ, ದಕ್ಷಿಣ ಕನ್ನಡದಲ್ಲಿ ಕೋಳಿ ರೊಟ್ಟಿ, ಬೆಳಗಾವಿಯ ಕುಂದಾ, ಮೈಸೂರು ಬಜ್ಜಿ ಹೀಗೆ ಅನೇಕ ಆಹಾರ ಪದ್ಧತಿಗಳು ಕಾಣಸಿಗುತ್ತವೆ. 

ತಮಿಳುನಾಡು: ತಮಿಳುನಾಡಿನ ಅಡುಗೆಗಳಲ್ಲಿ ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ದೋಸೆ ಮತ್ತು ಇಡ್ಲಿ ಇದ್ದೇ ಇರುತ್ತದೆ. ಇದು ಇಲ್ಲಿನ ಸಾರ್ವಕಾಲಿಕ ಆಹಾರ ಎನ್ನಬಹುದು. ನೀವು ತಮಿಳುನಾಡಿಗೆ ಭೇಟಿ ನೀಡಿದರೆ, ವಡಾ, ಅಪ್ಪಂ, ರಸಂ, ಚೆಟ್ಟಿನಾಡ್ ಚಿಕನ್ ಮತ್ತು ಪೊಂಗಲ್ ಖಂಡಿತವಾಗಿಯೂ ಸೇವಿಸಬೇಕು. 

ಗುಜರಾತ್: ಗುಜರಾತ್‌ನಲ್ಲಿ ನಮಗೆ ಮಸಾಲೆ ಮತ್ತು ಸಿಹಿ ಮಿಶ್ರಣದ ಆಹಾರವನ್ನು ದೊರಕುತ್ತದೆ. ಇಲ್ಲಿನ ಜನರ ನೆಚ್ಚಿನ ಖಾದ್ಯವೆಂದರೆ ಡೋಕ್ಲಾ. ಇನ್ನು ಇತರ ಮಸಾಲೆಯುಕ್ತ ಮತ್ತು ಸಿಹಿ ಖಾದ್ಯಗಳನ್ನು ಸವಿಯಲು, ಥೇಪ್ಲಾ, ಖಾಂಡ್ವಿ ಮತ್ತು ಧನಸಕ್ ತಿನಿಸುಗಳನ್ನು ಸೇವಿಸಬಹುದು. 

ಬಿಹಾರ: ಬಿಹಾರದ ಪ್ರಸಿದ್ಧ ಲಿಟ್ಟಿ-ಚೋಖಾ ಎಲ್ಲರನ್ನೂ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಇದರ ಹೊರತಾಗಿ ನಮಗೆ ಸತ್ತು ಪರಂತಾಸ್‌, ಝಲ್ ಮುರ್ಹಿ, ಖಾಜಾ ಮತ್ತು ತಿಲ್ಕುಟ್‌ಗಳು ಇಲ್ಲಿ ಲಭ್ಯವಾಗುತ್ತದೆ. 

ಹೈದರಾಬಾದ್-ಆಂಧ್ರಪ್ರದೇಶ: ಹೈದರಾಬಾದಿ ಬಿರಿಯಾನಿ ಬಗ್ಗೆ ಕೇಳದವರು ಯಾರು ಇಲ್ಲ. ಬಿರಿಯಾನಿಗೆ ಫೇಮಸ್‌ ಆಗಿರುವ ಹೈದರಾಬಾದ್‌ ಮತ್ತು ಆಂಧ್ರಪ್ರದೇಶ ಇತರ ಅಧಿಕೃತ ಭಕ್ಷ್ಯಗಳಿಗೂ ಪ್ರಸಿದ್ಧಿ ಪಡೆದಿದೆ. ಮಿರ್ಚಿ ಸಲಾನ್, ಪುಳಿಹೋರ, ಕೋಡಿಕೂರ ಮತ್ತು ಘೋಂಗುರ ಉಪ್ಪಿನಕಾಯಿ ಹೀಗೆ ಹತ್ತು ಹಲವಾರು ಬಗೆಯ ಖಾದ್ಯಗಳು ಲಭ್ಯವಾಗುತ್ತದೆ. 

ರಾಜಸ್ಥಾನ: ರಾಜರ ನಾಡು, ಐತಿಹಾಸಿಕ ಕೋಟೆಗಳು ಮತ್ತು ರಾಜಮನೆತನಕ್ಕೆ ಹೆಸರುವಾಸಿಯಾಗಿರುವ ರಾಜಸ್ಥಾನ ಪಾಕಪದ್ಧತಿಗೂ ಪ್ರಸಿದ್ಧವಾಗಿದೆ. ತುಪ್ಪದಲ್ಲಿ ಕರಿದ ದಾಲ್ ಬಾತಿ ಚುರ್ಮಾವನ್ನು ವಿವಿಧ ಬೇಳೆಕಾಳುಗಳ ಮಿಶ್ರಣದೊಂದಿಗೆ ಬಡಿಸಲಾಗುತ್ತದೆ. ಖಾಸ್ತ ಕಚೋರಿ, ಬಿಕನೇರಿ ಭುಜಿಯಾ, ಗಟ್ಟೆ ಕಿ ಸಬ್ಜಿ, ಲಹ್ಸುನ್ ಕಿ ಚಟ್ನಿ ಮತ್ತು ಘೇವರ್‌ಗಳು ಇಲ್ಲಿ ಲಭ್ಯವಾಗುತ್ತದೆ. 

ಜಮ್ಮು ಮತ್ತು ಕಾಶ್ಮೀರ: ವಾಜ್ವಾನ್ ಎಂಬುದು ಕಾಶ್ಮೀರಿಗಳ ರಾಜಮನೆತನದಿಂದ ಉಪಚರಿಸುವ ಭಕ್ಷ್ಯವಾಗಿದೆ. ಇಲ್ಲಿನ ಅಡುಗೆಯವರು ಅವರ ಅದ್ಭುತವಾದ ಪಾಕಪದ್ಧತಿಯಿಂದ ಜನಮನ ಸೆಳೆಯುತ್ತಾರೆ. ಅವುಗಳಲ್ಲಿ ಕೆಲವು ದಮ್ ಆಲೂ, ರೋಗನ್ ಜೋಶ್, ರಿಸ್ತಾ, ತಬಕ್ ಮಾಜ್, ಕಾಶ್ಮೀರಿ ಹಾಖ್, ಗುಷ್ಟಬಾ ಮತ್ತು ಖುಬಾನಿ ಕಾ ಹಲ್ವಾ ಪ್ರಸಿದ್ಧ ಭಕ್ಷ್ಯಗಳಾಗಿವೆ. 

ಸಿಕ್ಕಿಂ: ಈ ರಾಜ್ಯದಲ್ಲಿ ಮೊಮೊಸ್‌ ತುಂಬಾ ಫೇಮಸ್‌. ತುಕ್ಪ್ತಾ, ಫಾಗ್ಶಾಪ, ಗುಂಡ್ರುಕ್, ಸಿಂಕಿ ಮತ್ತು ಸೆಲ್ ರೋಟಿಗಳು ಈಶಾನ್ಯ ರಾಜ್ಯದಿಂದ ಬಂದಿರುವ ಆಹಾರ ಪದ್ಧತಿಗಳು. 

ಮಹಾರಾಷ್ಟ್ರ: ವಡಾ ಪಾವ್ ಮಹಾರಾಷ್ಟ್ರದಲ್ಲಿ ವಾಸಿಸುವ ಅಥವಾ ಭೇಟಿ ನೀಡುವ ಪ್ರತಿಯೊಬ್ಬ ವ್ಯಕ್ತಿಯ ಮೊದಲ ಆಯ್ಕೆಯಾಗಿದೆ. ಪಾವ್-ಭಾಜಿ, ಬಟಾಟ ವಡಾ, ಕೊಲ್ಹಾಪುರಿ ಪಂದ್ರಾ ರಸ, ಶ್ರೀಖಂಡ್, ಥಾಲಿಪೀಠ ಮತ್ತು ಮೋದಕ್ ಈ ಪ್ರದೇಶದ ಕೆಲವು ಪ್ರಮುಖ ಭಕ್ಷ್ಯಗಳಾಗಿವೆ.

ಇದನ್ನು ಓದಿ: Weight Loss: ದೇಹದ ತೂಕ ಇಳಿಸಲು ದಕ್ಷಿಣ ಭಾರತದ ಆಹಾರ ಪದ್ಧತಿ ಸೂಕ್ತವಂತೆ..!

ಪಶ್ಚಿಮ ಬಂಗಾಳ: ಬಂಗಾಳದಲ್ಲಿ ಮೀನುಪ್ರಿಯರು ಹೆಚ್ಚಾಗಿದ್ದಾರೆ. ಜೊತೆಗೆ ರಸಗುಲ್ಲಾ ಸಹ ಇಲ್ಲಿನ ಪ್ರಸಿದ್ಧವಾದ ತಿನಿಸು. ಝಲ್-ಮುರಿ, ಸಂದೇಶ್, ಲುಚಿ, ಮಿಸ್ಟಿ ದೋಯಿ, ಭಾಪಾ ಇಲಿಶ್ ಅಥವಾ ಆವಿಯಲ್ಲಿ ಬೇಯಿಸಿದ ಹಿಲ್ಸಾ ಮೀನು, ದೋಯಿ ಇಲಿಶ್ ಮತ್ತು ಮಾಚರ್ ಕಾಲಿಯಾ ಹೀಗೆ ಹಲವಾರು ತಿನಿಸುಗಳು ಇಲ್ಲಿ ಸಿಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News