ಬೆಂಗಳೂರು; ನಗರದ ಮಹಾಲಕ್ಷ್ಮೀ ಲೇಔಟ್ ನಲ್ಲೊಂದು ವಿಚಿತ್ರ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಸಾವನ್ನು ಹುಡುಕಿ ಹೊರಟ ಟೆಕ್ಕಿ ಮಾಡಿದ ಕೆಲಸಕ್ಕೆ ಪೊಲೀಸರೇ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಆತ್ಮಹತ್ಯೆಗೂ‌ ಮುನ್ನ ಆತ ಏನೆಲ್ಲಾ ಸಿದ್ಧತೆ ಮಾಡಿಕೊಂಡಿದ್ದ ಅಂತಾ ಗೊತ್ತಾದರೆ ಎಂತವರೂ ಸಹ ಶಾಕ್ ಆಗೋದು ಖಂಡಿತ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Watch Video: ಮಗಳಾದ ಮಾರ್ಜಲ... ಬೆಕ್ಕಿಗೆ ಸೀಮಂತ ಮಾಡಿದ ದಂಪತಿ


ನಗರದ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯಲ್ಲಿ ‌ಸೀನಿಯರ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಟೆಕ್ಕಿ ವಿಜಯ್ ಕುಮಾರ್ ಸಾವಿಗಾಗಿ ಗೂಗಲ್ ಮೊರೆ ಹೋಗಿದ್ದ.  ಹೃದಯದ ಸಮಸ್ಯೆಯಿಂದ ಆಪರೇಷನ್ ಕೂಡ ಮಾಡಿಸಿಕೊಂಡು ಆರೋಗ್ಯ ಸರಿಯಾಗದೆ ಉಸಿರಾಟದ ಸಮಸ್ಯೆ ಸೇರಿದಂತೆ ಬೇರೆ ಬೇರೆ ಸೈಡ್ ಎಫೆಕ್ಟ್ ನಿಂದ ವಿಜಯ್ ಸಾಕಷ್ಟು ಬಳಲಿದ್ದ. ಇದರಿಂದ ತೀವ್ರ ಖಿನ್ನತೆಗೆ ಒಳಗಾದ ವಿಜಯಕುಮಾರ್, ಆತ್ಮಹತ್ಯೆಯ ನಿರ್ಧಾರ ಮಾಡಿದ್ದ. ಆತ್ಮಹತ್ಯೆಗೂ‌ ಮುನ್ನ, ಯಾವ ರೀತಿ ಆತ್ಮಹತ್ಯೆ ಮಾಡಿಕೊಳ್ಳಬೇಕು, ಯಾವ ರೀತಿ ಆತ್ಮಹತ್ಯೆ ಮಾಡಿಕೊಂಡರೆ ನೋವಿಲ್ಲದೇ ಸಾಯಬಹುದು ಎಂದು ಗೂಗಲ್ ಸರ್ಚ್ ಮಾಡಿ ಕೊನೆಗೆ ನೈಟ್ರೋಜನ್ ಕೆಮಿಕಲ್ ಆಯ್ಕೆ ಮಾಡಿಕೊಂಡಿದ್ದ. ಈ ಕೆಮಿಕಲ್ ನಿಂದ ಬರುವ ಹೊಗೆ ದೇಹದ ಒಳಗೆ ಸೇರಿದ್ರೆ ಪ್ರಜ್ಞೆ ತಪ್ಪಿ ಸುಲಭವಾಗಿ ಸಾಯಬಹುದು ಎಂದು ತಿಳಿದುಕೊಂಡಿದ್ದ.


ಇದೇ ಸರಿಯಾದ ದಾರಿ ಅಂತಾ ವಿಜಯಕುಮಾರ್ ಮೊನ್ನೆ ಮಹಾಲಕ್ಷ್ಮಿ ಲೇಔಟ್ ಬಳಿ ಇರುವ ಪಾರ್ಕ್‌ ಬಳಿ ತನ್ನ ಕಾರು ತೆಗೆದುಕೊಂಡು ಬಂದು ನಿಲ್ಲಿಸಿದ್ದ. ನಂತರ ಅಲ್ಲೇ ಇದ್ದ ವ್ಯಕ್ತಿಯೊಬ್ಬರನ್ನು ತಡೆದು, ‘ನಂಗೆ ಸುಸ್ತಾಗಿದೆ, ಬಿಸಿಲು ಬೀಳದಂತೆ ಕಾರಿಗೆ ಕವರ್ ಮುಚ್ಚಿ’ ಎಂದು ಹೇಳಿದ್ದಾನೆ. ಸಂಪೂರ್ಣವಾಗಿ ಟಾರ್ಪಲ್ ನಿಂದ ಕವರ್ ಮಾಡಿಸಿದ್ದ ಕಾರಿನಲ್ಲಿದ್ದ ಟೆಕ್ಕಿ ಮೂರು ಕೆಜಿಯ ನೈಟ್ರೋಜನ್ ಸಿಲಿಂಡರ್ ಓಪನ್ ಮಾಡಿದ್ದಾನೆ. ನೈಟ್ರೋಜನ್ ಸೇವಿಸಿದ ಕೆಲ ಹೊತ್ತಿನಲ್ಲೇ ಆಸ್ಥಸ್ಥರಾಗಿ ಒದ್ದಾಡಿ ಮೃತಪಟ್ಟಿದ್ದಾನೆ.


ಇನ್ನೂ ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟು ಯಾರು ಹತ್ತಿರ ಬರಬೇಡಿ. ಇದು ವಿಷದ ಗಾಳಿ ನಿ‌ಮಗೂ ಸಮಸ್ಯೆ ಆಗುತ್ತೆ, ಇದನ್ನು ಪೊಲೀಸರ ನುರಿತ ಟೀಂ ಓಪನ್ ಮಾಡಲಿ ಎಂದು ನೋಟ್ ಬರೆದು ಕಾರಿನ ಕ್ಲಾಸ್ ಗೆ ಅಂಟಿಸಿದ್ದ.


ಇದನ್ನೂ ಓದಿ: ದೇಶದ 20 ಸಾವಿರಕ್ಕೂ ಅಧಿಕ ಪೆಟ್ರೋಲ್ ಬಂಕ್ ಗಳಲ್ಲಿ ಸಿಗಲಿದೆ ಉಚಿತ ಪೆಟ್ರೋಲ್! ಏನಿದು ಹೊಸ ಸ್ಕೀಮ್


ಸದ್ಯ ವಿಚಾರ ತಿಳಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಮೃತದೇಹವನ್ನ ಆಸ್ಪತ್ರೆಗೆ ಶಿಫ್ಟ್ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.