ದೇಶದ 20 ಸಾವಿರಕ್ಕೂ ಅಧಿಕ ಪೆಟ್ರೋಲ್ ಬಂಕ್ ಗಳಲ್ಲಿ ಸಿಗಲಿದೆ ಉಚಿತ ಪೆಟ್ರೋಲ್ .! ಏನಿದು ಹೊಸ ಸ್ಕೀಮ್ ?

ಫ್ರೀ ಪೆಟ್ರೋಲ್ ಎಂದರೆ ಪೆಟ್ರೋಲ್ ಬಂಕ್ ಗೆ ಹೋದ ಕೂಡಲೇ ಉಚಿತ ಪೆಟ್ರೋಲ್ ಸಿಗುತ್ತದೆಯೇ ? ಖಂಡಿತಾ ಇಲ್ಲ. ಅದಕ್ಕೊಂದು ಸ್ಕೀಮ್ ಇದೆ. ಇದರ ಪ್ರಕಾರ ಪ್ರತಿ ವರ್ಷ 50 ಲೀಟರ್ ಪೆಟ್ರೋಲ್ ಅನ್ನು ಉಚಿತವಾಗಿ ಪಡೆಯುವುದು ಸಾಧ್ಯವಾಗುತ್ತದೆ.  

Written by - Ranjitha R K | Last Updated : Dec 21, 2022, 11:06 AM IST
  • ಇತ್ತೀಚಿನ ದಿನಗಳಲ್ಲಿ ಯಾವುದೂ ಉಚಿತವಾಗಿ ಸಿಗುವುದಿಲ್ಲ.
  • ಒಮ್ಮೊಮ್ಮೆ ಉಚಿತವಾಗಿ ಸರಕುಗಳನ್ನು ಪಡೆಯಬಹುದಾದ ಆಫರ್ ಗಳು ಲಭ್ಯವಿರುತ್ತದೆ.
  • ಈಗ ಫ್ರೀಯಾಗಿ ಸಿಗುವ ಸರದಿ ಪೆಟ್ರೋಲ್ ನದ್ದು.
ದೇಶದ 20 ಸಾವಿರಕ್ಕೂ ಅಧಿಕ ಪೆಟ್ರೋಲ್ ಬಂಕ್ ಗಳಲ್ಲಿ ಸಿಗಲಿದೆ ಉಚಿತ ಪೆಟ್ರೋಲ್ .! ಏನಿದು ಹೊಸ ಸ್ಕೀಮ್ ?  title=
How To Get Free Petrol

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಯಾವುದೂ ಉಚಿತವಾಗಿ ಸಿಗುವುದಿಲ್ಲ. ಕುಡಿಯುವ ನೀರಿನಿಂದ ಹಿಡಿದು ಪ್ರತಿಯೊಂದು ವಸ್ತುಗಳಿಗೂ ಹಣ ಪಾವತಿ ಮಾಡಲೇಬೇಕು. ಆದರೆ ಒಮ್ಮೊಮ್ಮೆ ಉಚಿತವಾಗಿ ಸರಕುಗಳನ್ನು ಪಡೆಯಬಹುದಾದ ಆಫರ್ ಗಳು ಲಭ್ಯವಿರುತ್ತದೆ. ಬೈ ಒನ್ ಗೆಟ್ ಒನ್ ಫ್ರೀ, ಬೈ ಟೂ ಗೆಟ್ ಒನ್ ಫ್ರೀ, ಹೀಗೆ ಅಪರೂಪಕ್ಕೆ ಇಂಥಹ ಆಫರ್ ಗಳು ಕೂಡಾ ಸಿಗುತ್ತವೆ. ಈಗ ಫ್ರೀಯಾಗಿ ಸಿಗುವ ಸರದಿ ಪೆಟ್ರೋಲ್ ನದ್ದು. ಫ್ರೀ ಪೆಟ್ರೋಲ್ ಎಂದರೆ ಪೆಟ್ರೋಲ್ ಬಂಕ್ ಗೆ ಹೋದ ಕೂಡಲೇ ಉಚಿತ ಪೆಟ್ರೋಲ್ ಸಿಗುತ್ತದೆಯೇ ? ಖಂಡಿತಾ ಇಲ್ಲ. ಅದಕ್ಕೊಂದು ಸ್ಕೀಮ್ ಇದೆ. ಇದರ ಪ್ರಕಾರ ಪ್ರತಿ ವರ್ಷ 50 ಲೀಟರ್ ಪೆಟ್ರೋಲ್ ಅನ್ನು ಉಚಿತವಾಗಿ ಪಡೆಯುವುದು ಸಾಧ್ಯವಾಗುತ್ತದೆ. ಇಂಡಿಯನ್ ಆಯಿಲ್‌ನ ಪೆಟ್ರೋಲ್ ಪಂಪ್‌ಗಳಿಂದ ಈ ಉಚಿತ  ಪೆಟ್ರೋಲ್ ಅನ್ನು ಪಡೆಯಬಹುದು. 

ಪೆಟ್ರೋಲ್ ಅನ್ನು ಉಚಿತವಾಗಿ ಪಡೆಯುವುದು ಹೇಗೆ ಎನ್ನುವ ಪ್ರಶ್ನೆ ಮನಸ್ಸಿನಲ್ಲಿ ಮೂಡಿಯೇ ಮೂಡುತ್ತದೆ. ಅದು ಹೇಗೆ ಎನ್ನುವುದನ್ನು ನಾವಿಲ್ಲಿ ವಿವರವಾಗಿ ಹೇಳುತ್ತೇವೆ. HDFC ಬ್ಯಾಂಕ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಡುವೆ ಈ ಬಗ್ಗೆ ಒಂದು ಪಾರ್ಟ್ನರ್ ಶಿಪ್ ನಡೆಯುತ್ತಿದೆ. ಅದೇನೆಂದರೆ ಇಂಡಿಯನ್ ಆಯಿಲ್ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಸಿಗುತ್ತವೆ. ಈ ಕಾರ್ಡ್ ಮೂಲಕ ಖರ್ಚು ಮಾಡಿದರೆ ಅಂಕಗಳು ಸಿಗುತ್ತವೆ.  ಕಾರ್ಡುದಾರರು ಪ್ರತಿ ತಿಂಗಳು ಗಳಿಸಬಹುದಾದ ಗರಿಷ್ಠ ಇಂಧನ ಅಂಕಗಳ ಆಧಾರದ ಮೇಲೆ ಪ್ರತಿ ವರ್ಷ 50 ಲೀಟರ್‌ಗಳಷ್ಟು ಉಚಿತ ಇಂಧನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. 

ಇದನ್ನೂ ಓದಿ : Gold Price Today : ನಿಮ್ಮ ನಗರದಲ್ಲಿ ಎಂದು ಎಷ್ಟಿದೆ ಗೊತ್ತಾ ಚಿನ್ನ ಬೆಳ್ಳಿ ಬೆಲೆ ?

ಇಂಡಿಯನ್ ಆಯಿಲ್ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ಪ್ರಯೋಜನಗಳು :
IOCL ಕಾರ್ಡ್‌ನೊಂದಿಗೆ ನಿಮ್ಮ ವೆಚ್ಚದಲ್ಲಿ 5%ದಷ್ಟು  ಉಳಿಸಬಹುದು. ಮೊದಲ ಆರು ತಿಂಗಳಲ್ಲಿ ತಿಂಗಳಿಗೆ ಗರಿಷ್ಠ 250 ಫ್ಯುಯೆಲ್ ಪಾಯಿಂಟ್‌ಗಳನ್ನು ಗಳಿಸಬಹುದು, ನಂತರ ಮುಂದಿನ ಆರು ತಿಂಗಳಲ್ಲಿ ತಿಂಗಳಿಗೆ ಗರಿಷ್ಠ 150 ಫ್ಯುಯೆಲ್ ಪಾಯಿಂಟ್‌ಗಳನ್ನು ಗಳಿಸಬಹುದು.

-- ಕಿರಾಣಿ ಶಾಪಿಂಗ್ ಮತ್ತು ಬಿಲ್ ಪಾವತಿಯಲ್ಲಿ 5 ಪ್ರತಿಶತ ಅಂಕಗಳು ಲಭ್ಯವಿರುತ್ತವೆ. ಎರಡರಲ್ಲೂ, ತಿಂಗಳಿಗೆ ಗರಿಷ್ಠ 100-100 ಇಂಧನ ಪಾಯಿಂಟ್ ಗಳು ಸಿಗುತ್ತವೆ. ಇದಕ್ಕಾಗಿ ಕನಿಷ್ಠ 150 ರೂಪಾಯಿ ವಹಿವಾಟು ನಡೆಸಬೇಕಾಗುತ್ತದೆ. 

-- ಯಾವುದೇ ರೀತಿಯ ಶಾಪಿಂಗ್ ಮಾಡುವಾಗ, ಖರ್ಚು ಮಾಡಿದ 150 ರೂ.ಗೆ ಒಂದು ಫ್ಯುಯೆಲ್  ಪಾಯಿಂಟ್ ಸಿಗುತ್ತದೆ. 

-- ಅಲ್ಲದೆ, 1% ಇಂಧನ ಸರ್ಚಾರ್ಜ್ ಕೂಡಾ ಮನ್ನವಾಗುತ್ತದೆ. ಇದು ಸ್ಟೇಟ್‌ಮೆಂಟ್ ಸೈಕಲ್‌ನಲ್ಲಿ ಗರಿಷ್ಠ 250 ರೂಪಾಯಿಯಷ್ಟಾಗಿರಬಹುದು.  ಇದಕ್ಕಾಗಿ ಕನಿಷ್ಠ 400 ರೂ.ಗಳ ವಹಿವಾಟು ನಡೆಸಬೇಕು. 

ಇದನ್ನೂ ಓದಿ : Indian Railways: ರೈಲು ಪ್ರಯಾಣಿಕರೇ ಗಮನಿಸಿ, ಈ ವಸ್ತುಗಳನ್ನು ಎಂದಿಗೂ ರೈಲಿನಲ್ಲಿ ಕೊಂಡೊಯ್ಯಬೇಡಿ

ಗಳಿಸಿದ ಅಂಕಗಳ ಮೇಲೆ ಉಚಿತ ಪೆಟ್ರೋಲ್  : 
 ಈ ಎಲ್ಲಾ ಪ್ರಯೋಜನಗಳನ್ನು ಪಡೆದ ನಂತರ  IndianOil XTRAREWARDSTM ಪಾಯಿಂಟ್‌ಗಳನ್ನು (XRP) ಪಡೆಯಲು ಈ ಇಂಧನ ಪಾಯಿಂಟುಗಳನ್ನು ರಿಡೀಮ್ ಮಾಡಿಕೊಳ್ಳಬಹುದು. ಈ XRP ಗೆ ಬದಲಾಗಿ, ಭಾರತದಾದ್ಯಂತ 20,000 ಕ್ಕೂ ಹೆಚ್ಚು ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್‌ಗಳಲ್ಲಿ ವರ್ಷಕ್ಕೆ 50 ಲೀಟರ್ ನಷ್ಟು ಉಚಿತ ಇಂಧನವನ್ನು ಪಡೆಯುವುದು ಸಾಧ್ಯವಾಗುತ್ತದೆ.  

 

( ಗಮನಿಸಿ- ಯಾವುದೇ ರೀತಿಯ ಕಾರ್ಡ್ ತೆಗೆದುಕೊಳ್ಳುವಂತೆ ನಾವು ಯಾರಿಗೂ ಸೂಚಿಸುವುದಿಲ್ಲ. ಈ ಲೇಖನವನ್ನು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಬರೆಯಲಾಗಿದೆ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News