ಪಠ್ಯ ವಿವಾದ: ಜೂನ್ 9 ರಂದು ಕಾಂಗ್ರೆಸ್ನಿಂದ ಪ್ರತಿಭಟನೆ
ಸಿದ್ದಗಂಗಾ ಶ್ರೀಗಳಿಗೆ, ಮುರುಘಾ ಮಠ ಶ್ರೀ, ಆದಿ ಚುಂಚನಗಿರಿ,ಸಾಣೆ ಮಠದ ಶ್ರೀಗಳಿಗೆ ನಮಸ್ಕಾರ ಹೇಳುತ್ತೇನೆ.ಅವರ ಧ್ವನಿ ಜೊತೆಗೆ ನಮ್ಮ ಧ್ವನಿ ಸೇರಿಸುತ್ತೇವೆ ಎಂದರು.
ಬೆಂಗಳೂರು: ಪಠ್ಯ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಜೂನ್ 9 ರಂದು ಕಾಂಗ್ರೆಸ್ ವಿಧಾನಸೌಧದಲ್ಲಿ ಧರಣಿ ಸತ್ಯಾಗ್ರಹ ನಡೆಸಲಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಧರಣಿ ನಡೆಯಲಿದ್ದು, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: KCET ಪರೀಕ್ಷೆ ಹಾಲ್ ಟಿಕೆಟ್ ಸಿಗದೆ ಸಾವಿರಾರು ವಿದ್ಯಾರ್ಥಿಗಳು ಕಂಗಾಲು!
ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಈಗ ಪಠ್ಯದ ಪರಿಷ್ಕರಣೆ ನೆಪದಲ್ಲಿ ಸಾಂಸ್ಕೃತಿಕ ಅತ್ಯಾಚಾರ ನಡೆಯುತ್ತಿದೆ. ಮೊದಲನೇ ಬಾರಿಗೆ ಸ್ವಾಮೀಜಿ,ಸಾಹಿತಿ, ಸಂಘಟನೆಗಳು ಸರ್ಕಾರದ ಧೋರಣೆಯನ್ನು ವಿರೋಧಿಸಿದ್ದಾರೆ.
ಸಿದ್ದಗಂಗಾ ಶ್ರೀಗಳಿಗೆ, ಮುರುಘಾ ಮಠ ಶ್ರೀ, ಆದಿ ಚುಂಚನಗಿರಿ,ಸಾಣೆ ಮಠದ ಶ್ರೀಗಳಿಗೆ ನಮಸ್ಕಾರ ಹೇಳುತ್ತೇನೆ.ಅವರ ಧ್ವನಿ ಜೊತೆಗೆ ನಮ್ಮ ಧ್ವನಿ ಸೇರಿಸುತ್ತೇವೆ ಎಂದರು.
ಚಿಕ್ಕ ವಯಸ್ಸಿನ ಮಕ್ಕಳಿಗೆ ಹೊಸ ರೂಪ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂಬುವುದನ್ನು ಪಠ್ಯದಲ್ಲಿ ತೆಗೆದು ಹಾಕಲಾಗಿದೆ. ಇದಕ್ಕಿಂತ ಅವಮಾನ ಏನು ಬೇಕು? ಇದು ಇಡೀ ಭಾರತ ಭೂಮಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿವೇಕಾನಂದ,ಪೆರಿಯಾರ್ ವಿಚಾರಗಳಿಗೆ ಕತ್ತರಿ ಹಾಕಲಾಗಿದೆ, ತಿರುಚಲಾಗಿದೆ. ಭಕ್ತಿ ಹಾಗೂ ಸೂಫಿ ಪಂಥದ ಪಠ್ಯಕ್ಕೆ ಕತ್ತರಿ ಹಾಕಲಾಗಿದೆ. ಬುದ್ಧ, ಮಹಾವೀರರನ್ನು ಏಕವಚನದಲ್ಲಿ ಉಲ್ಲೇಖ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜೂನ್ 9 ರಂದು ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಗಾಂಧಿ ಪ್ರತಿಮೆಯ ಎದುರು ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ತಿಳಿಸಿದರು.
ನಾಗೇಶ್ ರಾಜೀನಾಮೆ ಬೇಡ : ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಅವರ ರಾಜೀನಾಮೆಗೆ ಆಗ್ರಹ ವಿಚಾರವಾಗಿ, ನಾಗೇಶ್ ಕೇವಲ ಸಚಿವರು ಆದರೆ ಇದು ಬಿಜೆಪಿಯ ಮನಸ್ಥಿತಿ. ಅವರ ರಾಜೀನಾಮೆ ಬೇಡ ಏನೂ ಬೇಡ. ಪರಿಷ್ಕರಣೆ ಆದ ಪಠ್ಯ ವಾಪಸ್ ಪಡೆಯಲಿ, ಏನೇನು ತಯಾರು ಮಾಡಿದ್ದಾರೆ ಅದನ್ನು ಕಸದ ಬುಟ್ಟಿಗೆ ಹಾಕಲಿ. ಹಿಂದೆ ಏನಿತ್ತು ಆ ಪದ್ದತಿ ಮುಂದುವರಿಯಲಿ ಎಂದರು.
ಸಿದ್ದರಾಮಯ್ಯ ಅವರಿಂದ ನಾಗೇಶ್ ರಾಜೀನಾಮೆ ಬೇಡಿಕೆ ವಿಚಾರವಾಗಿ, ಅವರು ಹೇಳುತ್ತಾರೆ, ಕಾಂಗ್ರೆಸ್ ಪಕ್ಷ ಹಾಗೂ ನಾನು ಹೇಳುತ್ತಿದ್ದೀನಿ, ಪರಿಷ್ಕರಣೆ ಆಗಿದ್ದನ್ನು ಕಸದ ಬುಟ್ಟಿಗೆ ಹಾಕಿ ಈ ಹಿಂದಿನದ್ದು ಮುಂದುವರಿಸಲಿ ಎಂದರು.
ಅರಬ್ ರಾಷ್ಟ್ರಗಳಿಂದ ಭಾರತದ ಉತ್ಪನ್ನಗಳ ಬಹಿಷ್ಕಾರ ವಿಚಾರವಾಗಿ ಮಾತನಾಡಿ,ನಾನು ಈ ಹಿಂದೆ ಎಚ್ಚರಿಕೆ ನೀಡಿದ್ದೆ. ಬಿಜೆಪಿ ನಡೆಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರಿಗೆ ಸಮಸ್ಯೆ ಆಗುತ್ತಿದೆ. ಹೊರಗಡೆ ದೇಶದಲ್ಲಿ ಕೆಲಸ ಮಾಡುತ್ತಿರುವವರಿಗೆ ಸಮಸ್ಯೆ ಆಗುತ್ತಿದೆ.ನಮಗೆ ಕುವೆಂಪು, ಬಸವಣ್ಣ, ಶಿಶುನಾಳ ಶರೀಫ್, ಪೆರಿಯಾರ್ ಭಾರತ ಬೇಕು ಎಂದರು.
ಭಾರತವನ್ನು ಬೆಂಗಳೂರು ಮೂಲಕ ಜನ ನೋಡುತ್ತಾರೆ. ಆದರೆ ಇವಾಗ ಎಷ್ಟು ಸಮಸ್ಯೆ ಆಗುತ್ತಿದೆ ವಿದೇಶದಲ್ಲಿ ಇರುವ ಭಾರತೀಯರಿಗೆ. ವ್ಯಾಪಾರ ಕಮ್ಯನಿಟಿಗೆ ತೊಂದರೆ ಆಗುತ್ತಿದೆ ಎಂದರು.
ಇದನ್ನೂ ಓದಿ: SBI Vs Post Office RD: ಪೋಸ್ಟ್ ಆಫೀಸ್/ಎಸ್‌ಬಿಐ ಎಲ್ಲಿ ಆರ್‌ಡಿ ಮಾಡುವುದರಿಂದ ಹೆಚ್ಚು ಪ್ರಯೋಜನ
ರಾಜ್ಯ ಸಭೆ ಚುನಾವಣೆಯಲ್ಲಿ ಆತ್ಮಸಾಕ್ಷಿಯ ಮತವನ್ನು ಕೊಡಿ ಎಂದು ಕರೆ ಕೊಟ್ಟಿದ್ದೇವೆ.ನಾವು ಎಲ್ಲರಿಗೂ ಸಹಾಯ ಮಾಡಿದ್ದೇವೆ. ಮತಗಳನ್ನು ವೇಸ್ಟ್ ಮಾಡಬೇಡಿ,ಪ್ರತಿಷ್ಠೆ ಬೇಡ, ಜಾತ್ಯಾತೀತತೆಯನ್ನು ತೋರಿಸಿ ಎಂದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ