HD Kumaraswamy : ಗಡಿ ವಿವಾದ ಮುಗಿದು ಹೋದ ಅಧ್ಯಾಯ : ಹೆಚ್.ಡಿ. ಕುಮಾರಸ್ವಾಮಿ
ಲಕ್ಷ್ಮೇಶ್ವರಕ್ಕೆ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗ್ತೀದಿನಿ. ಪಂಚ ರತ್ನ ಕ್ಕೆ ಹೋದ ಕಡೆ ಅಭೂತಪೂರ್ವ ಬೆಂಬಲ ಸಿಕ್ಕಿದೆ.ಜನೇವರಿ 3 ರಿಂದ ಬೀದರ್ ಭಾಗದಿಂದ ಕಾರ್ಯಕ್ರಮ ಆರಂಭವಾಗತ್ತೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಹುಬ್ಬಳಿ : ಲಕ್ಷ್ಮೇಶ್ವರಕ್ಕೆ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗ್ತೀದಿನಿ. ಪಂಚ ರತ್ನ ಕ್ಕೆ ಹೋದ ಕಡೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಜನೇವರಿ 3 ರಿಂದ ಬೀದರ್ ಭಾಗದಿಂದ ಕಾರ್ಯಕ್ರಮ ಆರಂಭವಾಗತ್ತೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ನಗರದ ಏರಪೋರ್ಟ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ, ನಾನು ಈ ಬಾರಿ ಚಳಿಗಾಲ ಅಧಿವೇಶನದಲ್ಲಿ ಭಾಗಿಯಾಗಲ್ಲ. ಫೆಬ್ರುವರಿ ತಿಂಗಳಲ್ಲಿ ಬೆಳಗಾವಿ ಭಾಗದಲ್ಲಿ ಪಂಚರತ್ನ ಕಾರ್ಯಕ್ರಮ ಆರಂಭವಾಗುತ್ತೆ. ಬಿಜೆಪಿ ಸರ್ಕಾರ ಯಾವ ಕಾರ್ಯಕ್ರಮ ಆಗಿಲ್ಲ. ಪಂಚರತ್ನ ಯಾತ್ರೆಗೆ ಸಮಯ ನಿಗದಿಯಾಗಿದೆ ಹಾಗಾಗಿ ನಾನು ಭಾಗವಹಿಸುತ್ತಿಲ್ಲ. ನಮ್ಮ ಉಪಸ್ಥಿತಿಯಲ್ಲಿ ಬಂಡೆಪ್ಪ ಕಾಶಂಪೂರ ಸಮಸ್ಯೆ ಬಗ್ಗೆ ಮಾತಾಡ್ತಾರೆ. ಸರ್ಕಾರ ಕೇವಲ ಘೋಷಣೆಗೆ ಸೀಮಿತವಾಗಿದೆ. ಬರಿ ಸಿಹಿ ಸುದ್ದಿ, ಹುಳಿ ಸುದ್ದಿ ಅಂತಾರೆ.. ಕೇವಲ ಬರೀ ದೊಡ್ಡ ಘೋಷಣೆ ಮಾಡೋದು ಇವರ ಕೆಲಸ ಎಂದು ಗುಡುಗಿದ್ದಾರೆ.
ಇದನ್ನೂ ಓದಿ : ಕಬ್ಬು ಬೆಳೆ ವಿಮೆ ಜಾರಿಗೆ ಒತ್ತಾಯಿಸಿ ಕೃಷಿ ಆಯುಕ್ತರ ಕಚೇರಿ ಮುಂದೆ ರೈತರ ಪ್ರತಿಭಟನೆ
ಬೆಳಗಾವಿ ಗಡಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಇರಡು ರಾಜ್ಯದ ಬಿಜೆಪಿ ನಾಯಕರು ವಿಷಯ ಡೈವರ್ಟ್ ಮಾಡ್ತೀದಾರೆ. ಕರ್ನಾಟಕ ಬಿಜೆಪಿ, ಮಾಹಾರಾಷ್ಟ್ರ ಬಿಜೆಪಿ ನಾಯಕರು ವಿಷಯ ಡೈವರ್ಟ್ ಮಾಡುತ್ತಿದ್ದಾರೆ. ಗಡಿ ವಿವಾದ ಮುಗಿದು ಹೋದ ಅಧ್ಯಾಯ. ಬಿಜೆಪಿ ನಾಯಕರಿಗೆ ಅಭಿವೃದ್ದಿ ವಿಷಯ ಇಲ್ಲ, ಒಬ್ಬರು ಅತ್ತಹಾಗೆ ಮಾಡು, ಒಬ್ಬರು ಹೊಡದಂಗೆ ಮಾಡೋ ಹಾಗಿದೆ. ನಾವು ಈ ಬಾರಿ 123 ರಿಂದ 130 ಸೀಟ್ ಗೆಲ್ಲುತ್ತೇವೆ. ರಾಜ್ಯದ ಯಾವ ಪಕ್ಷದ ನಾಯಕರು ನನ್ನ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಬಸ್ ಯಾತ್ರೆ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಅವರು ಎಲ್ಲಿಂದಲೋ ಸ್ಟಾರ್ಟ್ ಮಾಡಲಿ. ಅದು ಅವರ ಅವರ ಪಕ್ಷದ ವಿಚಾರ, ನಾನು ಯಾಕೆ ಚರ್ಚೆ ಮಾಡಲಿ ಕೆಸಿಆರ್ ನಮಗೆ ಬೆಂಬಲ ಕೊಡುತ್ತಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಲು ಗಡಿ ಭಾಗದಲ್ಲಿ ನಮಗೆ ಸಪೋರ್ಟ್ ಮಾಡ್ತೀದಾರೆ. ಅವರ ಪಕ್ಷದ ಶಾಸಕರು ನಮಗೆ ಬೆಂಬಲ ಕೊಡ್ತೀನಿ ಎಂದಿದ್ದಾರೆ. ಜನಾರ್ಧನ ರೆಡ್ಡಿ ಮಾತು ಕತೆ ಆಗಿಲ್ಲ. ಯಾರ ಜೊತೆ ಹೊಂದಾಣಿಕೆ ಪ್ರಶ್ನೆ ಇಲ್ಲ. ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು ಅನ್ನೋ ಗುರಿ ಇದೆ. ಗುಜರಾತ್ ಮಾಡೆಲ್ ಇಲ್ಲಿ ವರ್ಕೌಟ್ ಆಗಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಅನಿವಾಸಿ ಕನ್ನಡಿಗರ ರಕ್ಷಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ-ಡಿಕೆಶಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.