ಕಬ್ಬು ಬೆಳೆ ವಿಮೆ ಜಾರಿಗೆ ಒತ್ತಾಯಿಸಿ ಕೃಷಿ ಆಯುಕ್ತರ ಕಚೇರಿ ಮುಂದೆ ರೈತರ ಪ್ರತಿಭಟನೆ

ರಾಜ್ಯಾದ್ಯಂತ ನಿರಂತರ ಮಳೆ ಅತಿವೃಷ್ಟಿಯಿಂದ ಭತ್ತದ ಬೆಳೆಯಲ್ಲಿ ಇಳುವರಿ ಕುಂಠಿತವಾಗಿದ್ದು, ಭತ್ತ ಬೆಳೆದ ರೈತನ ಉತ್ಪಾದನೆ ವೆಚ್ಚ ಏರಿಕೆಯಾಗಿರುವ ಕಾರಣ ನಷ್ಟ ಅನುಭವಿಸುವಂತಾಗಿದೆ. ರಾಜ್ಯ ಸರ್ಕಾರ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲು ಕ್ರಮ ಕೈಗೊಂಡಿದೆ. ಕೇಂದ್ರ ಸರ್ಕಾರ ನಿಗದಿ ಮಾಡಿದ ಕನಿಷ್ಠ ಬೆಂಬಲ ಬೆಲೆಗೆ ಭತ್ತ ಖರೀದಿ ಮಾಡಿದರೆ ರೈತನಿಗೆ ಯಾವುದೇ ಲಾಭ ಸಿಗುವುದಿಲ್ಲ.

Written by - Prashobh Devanahalli | Edited by - Bhavishya Shetty | Last Updated : Dec 9, 2022, 06:18 PM IST
    • ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ 18ನೇ ದಿನಕ್ಕೆ ಕಾಲಿಟ್ಟಿದೆ
    • ಕಬ್ಬಿನ ಬೆಳೆಗೆ ವಿಮೆ ಜಾರಿ ಮಾಡುವಂತೆ ಒತ್ತಾಯ
    • ಕೃಷಿ ಆಯುಕ್ತರ ಕಚೇರಿ ಎದುರು ಭತ್ತ ಸುರಿದು ಪ್ರತಿಭಟನೆ
ಕಬ್ಬು ಬೆಳೆ ವಿಮೆ ಜಾರಿಗೆ ಒತ್ತಾಯಿಸಿ ಕೃಷಿ ಆಯುಕ್ತರ ಕಚೇರಿ ಮುಂದೆ ರೈತರ ಪ್ರತಿಭಟನೆ title=
Sugarcane Crop Insurance

ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ 18ನೇ ದಿನಕ್ಕೆ ಕಾಲಿಟ್ಟಿದ್ದು, ಭತ್ತ ಖರೀದಿ ಕನಿಷ್ಠ ಬೆಂಬಲ ಬೆಲೆಗೆ ಪ್ರೋತ್ಸಾಹ ಧನ ರೂ. 500 ನೀಡುವಂತೆ ಹಾಗೂ ಕಬ್ಬಿನ ಬೆಳೆಗೆ ವಿಮೆ ಜಾರಿ ಮಾಡುವಂತೆ ಒತ್ತಾಯಿಸಿ ಕೃಷಿ ಆಯುಕ್ತರ ಕಚೇರಿ ಎದುರು ಭತ್ತ ಸುರಿದು ಪ್ರತಿಭಟನೆ ಮಾಡಿದ್ದಾರೆ.

ರಾಜ್ಯಾದ್ಯಂತ ನಿರಂತರ ಮಳೆ ಅತಿವೃಷ್ಟಿಯಿಂದ ಭತ್ತದ ಬೆಳೆಯಲ್ಲಿ ಇಳುವರಿ ಕುಂಠಿತವಾಗಿದ್ದು, ಭತ್ತ ಬೆಳೆದ ರೈತನ ಉತ್ಪಾದನೆ ವೆಚ್ಚ ಏರಿಕೆಯಾಗಿರುವ ಕಾರಣ ನಷ್ಟ ಅನುಭವಿಸುವಂತಾಗಿದೆ. ರಾಜ್ಯ ಸರ್ಕಾರ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲು ಕ್ರಮ ಕೈಗೊಂಡಿದೆ. ಕೇಂದ್ರ ಸರ್ಕಾರ ನಿಗದಿ ಮಾಡಿದ ಕನಿಷ್ಠ ಬೆಂಬಲ ಬೆಲೆಗೆ ಭತ್ತ ಖರೀದಿ ಮಾಡಿದರೆ ರೈತನಿಗೆ ಯಾವುದೇ ಲಾಭ ಸಿಗುವುದಿಲ್ಲ. ಆದ ಕಾರಣ ಪ್ರತಿ ಕಿಂಟಾಲ್ ಭತ್ತಕ್ಕೆ ಎಂಎಸ್‌ಪಿಗೆ ಹೆಚ್ಚುವರಿ ಪ್ರೋತ್ಸಾಹ ಧನವಾಗಿ 500 ರೂ .ಳನ್ನು ನೀಡುವ ಮೂಲಕ ರೈತರನ್ನು ರಕ್ಷಣೆ ಮಾಡಬೇಕು. ರಾಜ್ಯ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಾಕಬಾರದು. ಇದು ರೈತರನ್ನು ಹೊಡೆದಾಳುವ ನೀತಿಯಾಗುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  Mandous Cyclone : ಮಾಂಡೋಸ್ ಸೈಕ್ಲೋನ್ ಅಬ್ಬರ : ರಾಜ್ಯದ ಹಲವೆಡೆ ಇಂದು - ನಾಳೆ ಮಳೆ

ಭತ್ತ ಖರೀದಿ ಕೇಂದ್ರಗಳ ಮೂಲಕ ಗರಿಷ್ಠ 40 ಕ್ಕಿಂಟಲ್ ಖರೀದಿಸಲು ಆದೇಶ ಹೊರಡಿಸಿದ್ದೀರಿ. ಈ ಆದೇಶವನ್ನು ಮರುಪರಿಶೀಲನೆ ಮಾಡಿ ಪ್ರತಿ ರೈತರಿಂದ ಖರೀದಿ ಗರಿಷ್ಠ 100 ಕ್ವಿಂಟಲ್ ಗೆ ಹೆಚ್ಚಿಸಬೇಕು. ಭತ್ತ ಖರೀದಿ ಕೇಂದ್ರಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರಂಭಿಸಬೇಕು. ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಜಾರಿಯಲ್ಲಿರುವಂತೆ ಕಬ್ಬು ಉತ್ಪಾದನೆಗೆ ಎಕರೆಗೆ ಕನಿಷ್ಠ ಲಕ್ಷ ರೂ ಖರ್ಚಾಗುತ್ತದೆ. ಅದರೆ ಕಬ್ಬಿನ ಬೆಳೆಗೆ ಬೆಂಕಿ ಬಿದ್ದಾಗ ಸರ್ಕಾರ ನೀಡುವ ನಷ್ಟ ಪರಿಹಾರ 4 ಸಾವಿರ ಇರುತ್ತದೆ. ನಷ್ಟ ಪರಿಹಾರ ನೀಡುವ ಮಾನದಂಡ ಏರಿಕೆ ಮಾಡಬೇಕು ಎಂದರು.

ಮಳೆ ಹಾನಿಯಿಂದ ಬೆಳೆ, ಬೆಂಕಿ ಆಕಸ್ಮಿಕದಿಂದ ಕಬ್ಬು ಬೆಳೆ ನಾಶವಾದರೆ ಪರಿಹಾರ ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ರೈತ ಸಾಲ ತೀರಿಸಲು ಕಷ್ಟವಾಗುತ್ತಿದೆ. ಆದಕಾರಣ ಕಬ್ಬು ಬೆಳೆ ವಿಮೆ ಜಾರಿಗೆ ತಂದು ನಷ್ಟ ತುಂಬಿ ಕೊಡುವಂತಹ  ಯೋಜನೆ ಜಾರಿಗೆ ತರಬೇಕು ಎಂದರು.

ಪ್ರಸಕ್ತ ಸಾಲಿನ ಕಬ್ಬು ಬೆಳೆ ಉತ್ಪಾದನಾ ವೆಚ್ಚ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನಿಗದಿ ಮಾಡಲು ವರದಿ ನೀಡಬೇಕು. ಮೇಲ್ಕಂಡ ಒತ್ತಾಯಗಳ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.ಎಂದು ಒತ್ತಾಯಿಸಿ ಕಚೇರಿಯ ಮುಂದೆ ಭತ್ತ ಸುರಿದು ಪ್ರತಿಭಟನೆ ನಡೆಸಲಾಯಿತು.

ಇದನ್ನೂ ಓದಿ: ಬುರ್ಖಾ ಧರಿಸಿ ಐಟಂ ಸಾಂಗ್ ಗೆ ಡ್ಯಾನ್ಸ್ , 4 ವಿದ್ಯಾರ್ಥಿಗಳು ಸಸ್ಪೆಂಡ್

ಪ್ರತಿಭಟನೆಯ ನೇತೃತ್ವವನ್ನ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ವಹಿಸಿದರು. ಪ್ರತಿಭಟನೆಯಲ್ಲಿ ಸುರೇಶ್ ಮಾ ಪಾಟೀಲ್, ಬಸವರಾಜ ಪಾಟೀಲ್, ಹತ್ತಳ್ಳಿ ದೇವರಾಜ್, ರಮೇಶ್ ಉಗಾರ್, ಜಗದೀಶ್, ಬರಡನಪುರ ನಾಗರಾಜ್, ಚೆನ್ನಪ್ಪ, ಮುಂತಾದವರಿದ್ದರು

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News