ಬೆಂಗಳೂರು: ಬೆಂಗಳೂರಿನಲ್ಲಿ ರಾತ್ರಿ ಕರ್ಫ್ಯೂ ಸೇರಿದಂತೆ ಕೋವಿಡ್ -19 ನಿರ್ಬಂಧಗಳನ್ನು ಇನ್ನೂ ಹದಿನೈದು ದಿನಗಳ ಕಾಲ ವಿಸ್ತರಿಸಲಾಗಿದೆ. 


COMMERCIAL BREAK
SCROLL TO CONTINUE READING

ಈ ನಿರ್ಬಂಧಗಳು ಅಕ್ಟೋಬರ್ 11 ರವರೆಗೆ ಮುಂದುವರಿಯಲಿವೆ.ಮುಂದಿನ ಆದೇಶದವರೆಗೆ ರಾತ್ರಿ ಕರ್ಫ್ಯೂ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಜಾರಿಯಲ್ಲಿರುತ್ತದೆ ಎನ್ನಲಾಗಿದೆ."ಬೆಂಗಳೂರು ನಗರ ಪೊಲೀಸ್ ಆಯುಕ್ತರು ಅಕ್ಟೋಬರ್ 11 ರವರೆಗೆ ರಾತ್ರಿ ಕರ್ಫ್ಯೂ (ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ) ಸೇರಿದಂತೆ ಕೋವಿಡ್-ಪ್ರೇರಿತ ನಿರ್ಬಂಧಗಳನ್ನು ವಿಸ್ತರಿಸಿದ್ದಾರೆ" ಎಂದು ಎಎನ್ಐ ವರದಿ ಮಾಡಿದೆ.


ಇದನ್ನೂ ಓದಿ-Covid-19 Vaccine: Covishield Vaccineನ ಎರಡು ಪ್ರಮಾಣಗಳ ನಡುವಿನ ಅಂತರ ಕೇಂದ್ರ ಸರ್ಕಾರ 8 ವಾರಕ್ಕೆ ಹೆಚ್ಚಿಸಿದ್ಯಾಕೆ ಗೊತ್ತಾ?


ನಗರದಲ್ಲಿ ಭಾನುವಾರದಂದು 255 ಹೊಸ ಕೋವಿಡ್ (COVID-19) ಪ್ರಕರಣಗಳು ಮತ್ತು ಮೂರು ಸಾವುಗಳು ದಾಖಲಾಗಿವೆ.ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ 775 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 29.73 ಲಕ್ಷಕ್ಕೆ ಮತ್ತು ಸಾವಿನ ಸಂಖ್ಯೆ 37,726 ಕ್ಕೆ ತಲುಪಿದೆ.


ಇದನ್ನೂ ಓದಿ: ಲಂಚದ ಆರೋಪದ ಮೇಲೆ ಏಮ್ಸ್ ಅಧಿಕಾರಿ ಬಂಧಿಸಿದ ಸಿಬಿಐ, ಕೋಟ್ಯಂತರ ರೂ.ಮೌಲ್ಯದ ಆಸ್ತಿ ವಶಕ್ಕೆ


ಕಳೆದ ವಾರ ಕರ್ನಾಟಕ ಸರ್ಕಾರವು ಕೋವಿಡ್ -19 ನಿರ್ಬಂಧಗಳಲ್ಲಿ ಸಡಿಲಿಕೆಗಳನ್ನು ನೀಡಿತು ಮತ್ತು ಅಕ್ಟೋಬರ್ 1 ರಿಂದ ಪೂರ್ಣ ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳು, ಸಭಾಂಗಣಗಳನ್ನು ಮತ್ತೆ ತೆರೆಯಲು ಅನುಮತಿ ನೀಡಿತು.


ಇತರ ಸಡಿಲಿಕೆಗಳ ನಡುವೆ, ಪಬ್‌ಗಳು ಅಕ್ಟೋಬರ್ 3 ರಿಂದ ಕಾರ್ಯಾಚರಣೆಯನ್ನು ಪುನರಾರಂಭಿಸಬಹುದು, ಆದರೆ 6 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು ಶೇಕಡಾ 1 ಕ್ಕಿಂತ ಕಡಿಮೆ ಧನಾತ್ಮಕ ದರ ಹೊಂದಿರುವ ಜಿಲ್ಲೆಗಳಲ್ಲಿ ಸಂಪೂರ್ಣ ಶಕ್ತಿಯೊಂದಿಗೆ ತರಗತಿಗಳಿಗೆ ಹಾಜರಾಗಬಹುದು ಎನ್ನಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.