Covid-19 Vaccine: Covishield Vaccineನ ಎರಡು ಪ್ರಮಾಣಗಳ ನಡುವಿನ ಅಂತರ ಕೇಂದ್ರ ಸರ್ಕಾರ 8 ವಾರಕ್ಕೆ ಹೆಚ್ಚಿಸಿದ್ಯಾಕೆ ಗೊತ್ತಾ?

Covid-19 Vaccine - ಕೊರೊನಾ ವಿರೋಧಿ ಲಸಿಕೆಯಾಗಿರುವ ಕೋವಿಶೀಲ್ಡ್ ನ ಎರಡು ಪ್ರಮಾಣಗಳ ನಡುವಿನ ಅಂತರವನ್ನು 8 ವಾರಗಳಿಗೆ ಏರಿಕೆ ಮಾಡಲಾಗಿದೆ. ಮೊದಲ ನಾಲ್ಕರಿಂದ ಆರು ವಾರಗಳ ನಡುವೆ ಕೋವಿಶೀಲ್ಡ್ ನ ಎರಡನೇ ಲಸಿಕೆಯನ್ನು ತೆಗೆದುಕೊಳ್ಳಲು ಸೂಚಿಸಲಾಗಿತ್ತು. ಆದರೆ, ಎರಡು ತಜ್ಞರ ಗುಂಪುಗಳ ಶಿವಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.

Written by - Nitin Tabib | Last Updated : Mar 23, 2021, 12:52 PM IST
  • ಕೊವಿಶಿಲ್ದ್ ಎರಡು ಪ್ರಮಾಣಗಳ ನಡುವಿನ ಅಂತರ 4-8 ವಾರಗಳಿಗೆ ಹೆಚ್ಚಳ.
  • ಮೊದಲು ಇದನ್ನು 4-6 ವಾರಗಳಿಗೆ ನಿಗದಿಪಡಿಸಲಾಗಿತ್ತು.
  • ಪ್ರಮಾಣಗಳ ಈ ತಿದ್ದುಪಡಿ ಕೇವಲ ಕೋವಿಶೀಲ್ಡ್ ಗೆ ಮಾತ್ರ ಅನ್ವಯಿಸಲಿದೆ.
Covid-19 Vaccine: Covishield Vaccineನ ಎರಡು ಪ್ರಮಾಣಗಳ ನಡುವಿನ ಅಂತರ ಕೇಂದ್ರ ಸರ್ಕಾರ 8 ವಾರಕ್ಕೆ ಹೆಚ್ಚಿಸಿದ್ಯಾಕೆ ಗೊತ್ತಾ? title=
Covid-19 Vaccine (File Photo - Covishield)

ನವದೆಹಲಿ: Covid-19 Vaccine - ಕೇಂದ್ರ ಸರ್ಕಾರ ಕೊವಿಡ್-19 ವಿರುದ್ಧ ನಡೆಸಲಾಗುತ್ತಿರುವ ಲಸಿಕಾಕರಣ ಅಭಿಯಾನದಲ್ಲಿ ಕೊರೊನಾ ವಿರೋಧಿ ವ್ಯಾಕ್ಸಿನ್ ಆಗಿರುವ ಕೋವಿಶೀಲ್ಡ್ ಲಸಿಕೆಯ ಮೊದಲ ಹಾಗೂ ಎರಡನೇ ಪ್ರಮಾಣಗಳ ಅಂತರವನ್ನು ಎಂಟು ವಾರಗಳಿಗೆ ಹೆಚ್ಚಿಸುವ ನಿರ್ಣಯ ಕೈಗೊಂಡಿದೆ. ಕೊವಿಶಿಲ್ದ್, ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ AZD1222  ವರ್ಶನ್ ಆಗಿದೆ. ಇದನ್ನು ಆಕ್ಸ್ಫರ್ಡ್  ವಿವಿ ಸಹಕಾರದಿಂದ ಅಷ್ಟ್ರಾಜೆನಿಕಾ ಅಭಿವೃದ್ದಿ ಪಡಿಸಿದೆ. 

AZD122ನ ಜಾಗತಿಕ ಟ್ರಯಲ್ ನ ಅಂಕಿ ಅಂಶಗಳ ಪ್ರಕಾರ ಈ ಲಸಿಕೆಯ ಪ್ರಮಾಣಗಳ ನಡುವಿನ ಅಂತರವನ್ನು 12 ವಾರಗಳವರೆಗೆ ಹೆಚ್ಚಿಸುವುದರಿಂದ ಇದು ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿದೆ. ಇನ್ನೊಂದೆಡೆ ಅಮೇರಿಕಾ, ಪೆರು ಹಾಗೂ ಚಿಲಿಯಲ್ಲಿ ವ್ಯಾಕ್ಸಿನ್ ಟ್ರಯಲ್ ತನ್ನ ಅಂತಿಮ ನಿಸ್ಕರ್ಶಕ್ಕೆ ತಲುಪಿದ್ದು, ಲಸಿಕೆಯ ಎರಡು ಡೋಸ್ ಗಳ ನಡುವಿನ ಅಂತರ 4 ವಾರ ನಿಗದಿಪಡಿಸಿದರೆ, ಲಸಿಕೆಯ ಪ್ರಭಾವ ಶೇ.79ರಷ್ಟು ಕಂಡುಬಂದಿದೆ.

ಎರಡು ಪ್ರತ್ಯೇಕ ತಜ್ಞರ ತಂಡಗಳ ವತಿಯಿಂದ ಅವಧಿ ಹೆಚ್ಚಳಕ್ಕೆ ಶಿಫಾರಸ್ಸು
ಈ ಕುರಿತು ಸೋಮವಾರ ಹೇಳಿಕೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ನೂತನ ವ್ಯಾಕ್ಸಿನೆಶನ್ ಮೇಲೆ ರಾಷ್ಟ್ರೀಯ ತಾಂತ್ರಿಕ ಸಲಹಾಗಾರ ಸಮಿತಿ (NTAGI) ಮೂಲಕ ಕೋವಿಶೀಲ್ಡ್ ಮೊದಲ ಹಾಗೂ ಎರಡನೇ ಪ್ರಮಾಣಗಳ ನಡುವಿನ ಅಂತರದ ಸಮೀಕ್ಷೆ ನಡೆಸಿದೆ ಎನ್ನಲಾಗಿದೆ. ಇನ್ನೊಂದೆಡೆ ಲಸಿಕಾಕರಣ ಆಡಳಿತ ರಾಷ್ಟ್ರೀಯ ತಜ್ಞರ ಗುಂಪು (NEGVAC) ಕೂಡ ತನ್ನ 20ನೇ ಸಭೆಯಲ್ಲಿ ಈ ಕುರಿತು ಚರ್ಚೆಗಳನ್ನು ನಡೆಸಿದೆ. ಇದಾದ ಬಳಿಕ ಕೋವಿಶೀಲ್ಡ್ ನ ಮೊದಲ ಹಾಗೂ ಎರಡನೇ ಪ್ರಮಾಣದ ನಡುವಿನ ಅಂತರವನ್ನು ಪ್ರಸ್ತುತ 4-6 ವಾರಗಗಳ ಬದಲಾಗಿ 4-8 ವಾರಗಳವರೆಗೆ ವಿಸ್ತರಿಸಬೇಕು ಎಂದು ಶಿಫಾರಸ್ಸು ಮಾಡಿದೆ.

ಇದನ್ನೂ ಓದಿ-Corona Vaccine ಮೊದಲ ಡೋಸ್ ಪಡೆದ ಪ್ರಧಾನಿ ಮೋದಿ

ತಜ್ಞರ ತಂಡಗಳ ಶಿಫಾರಸ್ಸುಗಿಗೆ ಮನ್ನಣೆ
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ಸರ್ಕಾರ ಎರಡೂ ತಜ್ಞರ ಸಮೂಹಗಳು ಮಾಡಿರುವ ಶಿಫಾರಸ್ಸುಗಳ ಕುರಿತು ಚಿಂತನೆ ನಡೆಸಿ ಒಪ್ಪಿಗೆ ಸೂಚಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸಚಿವಾಲಯ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಸಚಿವರಿಗೆ ಪತ್ರ ಬರೆದು, ಕೋವಿಶೀಲ್ಡ್ ನ ಎರಡು ಪ್ರಮಾಣಗಳ ನಡುವಿನ ಅಂತರವನ್ನು 6-8 ವಾರಗಳವರೆಗೆ ಸುನಿಶ್ಚಿತಗೊಳಿಸುವಂತೆ ಸೂಚಿಸಿದೆ.

ಇದನ್ನೂ ಓದಿ- Corona Vaccination : ಲಸಿಕೆ ಹಾಕಿಸಿಕೊಳ್ಳಲು ನಿಮ್ಮ ನಂಬರ್ ಬಂದಿದೆ, ಉಪಯುಕ್ತ ಮಾಹಿತಿ ಇಲ್ಲಿದೆ.

ಸುರಕ್ಷತೆ ಹೆಚ್ಚಾಗಲಿದೆ
ರಾಜೇಶ್ ಭೂಷಣ್ ನೀಡಿರುವ ಮಾಹಿತಿ ಪ್ರಕಾರ, ಪ್ರಸ್ತುತ ಈ ವ್ಯಾಕ್ಸಿನ್ ನ ಕುರಿತು ವಿಜ್ಞಾನಿಗಳು ನಡೆಸಿರುವ ಸಮೀಕ್ಷೆಯ ಅಂಶಗಳು ಮುಂದೆ ಬಂದಿದ್ದು, ಈ ವ್ಯಾಕ್ಸಿನ್ ನ ಎರಡು ಪ್ರಮಾಣಗಳ ನಡುವಿನ ಅಂತರವನ್ನು 6-8 ವಾರಗಳವರೆಗೆ ನಿಗದಿಪಡಿಸಿದರೆ, ಸುರಕ್ಷತೆ ಮತ್ತಷ್ಟು ಹೆಚ್ಚಾಗಲಿದೆ. ಆದರೆ, ಎರಡು ಪ್ರಮಾಣಗಳ ನಡುವಿನ ಅಂತರ 8 ವಾರಗಳನ್ನು ದಾಟಬಾರದು ಎಂದು ಅವರು ಇದೆ ವೇಳೆ ಎಚ್ಚರಿಸಿದ್ದಾರೆ. ಎರಡು ಪ್ರಮಾಣಗಳ ನಡುವಿನ ಅಂತರ ತಿದ್ದುಪಡಿ ಕೇವಲ ಕೋವಿಶೀಲ್ಡ್ ಗೆ ಮಾತ್ರ ಅನ್ವಯಿಸಲಿದೆ ಮತ್ತು  ಬೇರೆ ಸ್ವದೇಶಿ ವ್ಯಾಕ್ಸಿನ್ ಗಳಿಗೆ ಇದು ಅನ್ವಯಿಸುವುದಿಲ್ಲ ಎಂದೂ ಕೂಡ ಸಚಿವಾಲಯ ಸ್ಪಷ್ಟಪಡಿಸಿದೆ.

ಇದನ್ನೂ ಓದಿ-ಎರಡನೇ ಹಂತದಲ್ಲಿ Corona Vaccine ಪಡೆಯಲಿರುವ ಪ್ರಧಾನಿ ಮೋದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News