ಸರ್ಕಾರ ಎಚ್ಚೆತ್ತುಕೊಂಡು ಪರಿಷ್ಕೃತ ಪಠ್ಯಗಳನ್ನು ವಾಪಸ್ ಪಡೆಯುವವರೆಗೆ ಹೋರಾಟ ನಿಲ್ಲುವುದಿಲ್ಲ`
ಸರ್ಕಾರದ ಪಠ್ಯಪುಸ್ತಕದಲ್ಲಿ ಆಗಿರುವ ಲೋಪದೋಷಗಳಿಂದಾಗಿ ನಾಡಿನ ಅಸ್ಮತೆಗೆ ಧಕ್ಕೆಯಾಗಿದೆ.ಈ ಕ್ರಮದ ವಿರುದ್ದ ಹಿರಿಯರು,ಚಿಂತಕರು, ವಿವಿಧ ಸಂಘಟನೆಗಳ ಮುಖಂಡರು ಪಕ್ಷಾತೀತವಾಗಿ ಧರಣಿಗೆ ಬೆಂಬಲ ಸೂಚಿಸಿದ್ದಾರೆ. ಸರ್ಕಾರ ಎಚ್ಚೆತ್ತುಕೊಂಡು ಪರಿಷ್ಕೃತ ಪಠ್ಯಗಳನ್ನು ವಾಪಸ್ ಪಡೆಯುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರು: ಸರ್ಕಾರದ ಪಠ್ಯಪುಸ್ತಕದಲ್ಲಿ ಆಗಿರುವ ಲೋಪದೋಷಗಳಿಂದಾಗಿ ನಾಡಿನ ಅಸ್ಮತೆಗೆ ಧಕ್ಕೆಯಾಗಿದೆ.ಈ ಕ್ರಮದ ವಿರುದ್ದ ಹಿರಿಯರು,ಚಿಂತಕರು, ವಿವಿಧ ಸಂಘಟನೆಗಳ ಮುಖಂಡರು ಪಕ್ಷಾತೀತವಾಗಿ ಧರಣಿಗೆ ಬೆಂಬಲ ಸೂಚಿಸಿದ್ದಾರೆ. ಸರ್ಕಾರ ಎಚ್ಚೆತ್ತುಕೊಂಡು ಪರಿಷ್ಕೃತ ಪಠ್ಯಗಳನ್ನು ವಾಪಸ್ ಪಡೆಯುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮನುವಾದಿ ಸಿದ್ದಾಂತವನ್ನು ಸರ್ಕಾರ ಪಠ್ಯದಲ್ಲಿ ತಂದು ಮಕ್ಕಳ ಬದುಕಿಗೆ ಮಾರಕವಾಗುವ ಕೆಲಸ ಮಾಡುತ್ತಿದೆ.ಹೆಡಗೆವಾರ್ ಅವರ ಭಾಷಣವನ್ನು ತಿರುಚಿ ಪಠ್ಯದಲ್ಲಿ ಸೇರಿಸಲಾಗಿದೆ. ನಮ್ಮ ಅಭಿಮಾನ ರಾಷ್ಟ್ರಧ್ವಜಕ್ಕಿಂತ ಭಾಗವಾ ಧ್ವಜದ ಮೇಲಿರಬೇಕು ಎಂದಿದ್ದಾರೆ ಆದರೆ ಅದನ್ನು ಕೇವಲ ಧ್ವಜದ ಮೇಲಿರಬೇಕು ಎಂದು ಮಾತ್ರ ಪಠ್ಯದಲ್ಲಿ ಸೇರಿಸಲಾಗಿದೆ. ಇದು ಸಂವಿಧಾನ ವಿರೋಧಿ ಕೃತ್ಯ ಇದನ್ನು ನಾವು ಖಂಡಿಸುತ್ತೇವೆ.
ಆರ್ ಎಸ್ ಎಸ್ ಸಂಘಟನೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿಲ್ಲ, ದಂಡಿ ಸತ್ಯಾಗ್ರಹ ನಡೆದಾಗ ಇವರು ಎಲ್ಲಿದ್ದರು,? ಭಾರತ ಚೀನಾ ಯುದ್ದ ನಡೆದಾಗ ಎಲ್ಲಿದ್ದರು? ಆರ್ ಎಸ್ ಎಸ್ ದ ನಿಜವಾದ ಕಾರ್ಯಗಳ ಬಗ್ಗೆ ಪಠ್ಯ ಪುಸ್ತಕ ಪ್ರಕಟಿಸಲಿ ಅದನ್ನು ನಾನು ಸ್ವಾಗತಿಸುತ್ತೇನೆ.
ಇದನ್ನೂ ಓದಿ: ಕದ್ದುಮುಚ್ಚಿ ಥಿಯೇಟರ್‌ಗೆ ಬಂದು ‘ಕೆಜಿಎಫ್-2’ ನೋಡಿದ್ರಾ ನಟಿ ಸಾಯಿ ಪಲ್ಲವಿ..?
ನಾವು ಸಚಿವನಾಗಿದ್ದಾಗ ಬಡವರ ಮಕ್ಕಳಿಗಾಗಿ,ದೀನ ದಲಿತರಿಗಾಗಿ ಹಲವಾರು ಯೋಜನೆ ಜಾರಿಗೆ ತಂದಿದ್ದೇನೆ. ಈಗ ಆ ಎಲ್ಲಾ ಯೋಜನೆಗಳು ಏನಾಗಿವೆಯೋ ಗೊತ್ತಿಲ್ಲ. ಬಡವರನ್ನು ಬಿಜೆಪಿ ತಮ್ಮಕೆಲಸಕ್ಕೆ ಬಳಸಿಕೊಳ್ಳತ್ತದೆ. ಬಿಜೆಪಿಯ ಯಾವ ಶಾಸಕರ ಮಕ್ಕಳು ಹೆಗಲಿಗೆ ಕೇಸರಿ ಶಾಲ್ ಹಾಕಿಕೊಂಡು ಗೋ ರಕ್ಷಣೆ ಹಾಗೂ ಧರ್ಮ ರಕ್ಷಣೆ ಮಾಡುತ್ತಿದ್ದಾರೆ? ಆ ಕೆಲಸಕ್ಕಾಗಿ ಹಿಂದುಳಿದವರು ಮಾತ್ರ ಬಳಸಿಕೊಂಡು ತಮ್ಮ ಮಕ್ಕಳನ್ನು ವಿದೇಶಗಳಿಗೆ ಓದಿಸಲು ಕಳಿಸುತ್ತಿದ್ದಾರೆ.
ರಾಜ್ಯ ಸರ್ಕಾರ ಈ ಕೂಡಲೇ ಪರಿಷ್ಕೃತ ಪಾಠಗಳನ್ನು ರದ್ದುಗೊಳಿಸಬೇಕು ಹಾಗೂ ಬರಗೂರು ಸಮಿತಿಯ ಹಳೆ ಪಠ್ಯಗಳನ್ನೇ ಮತ್ತೆ ಜಾರಿಗೆ ತರಬೇಕು. ಈ ಹೋರಾಟ ಪ್ರತಿ ತಾಲೂಕು ಹಳ್ಳಿಗಳಿಗೆ ತಲುಪಬೇಕು. ಹಾಗೆ ಬೆಂಗಳೂರಿನ ಬಸವಣ್ಣನವರ ಪ್ರತಿಮೆ ಮುಂದೆ ಇದೇ ತರ ಧರಣಿ ಮಾಡುತ್ತೇವೆ. ನಮಗೆ ಕರ್ನಾಟದ ಅಸ್ಮಿತೆಯ ಪ್ರಶ್ನೆಯಾಗಿದೆ. ಹಾಗಾಗಿ,ಎಲ್ಲ ರೀತಿಯ ಹೋರಾಟಕ್ಕೆ ನಾವು ಸಜ್ಜಾಗಿದ್ದೇವೆ.
ಇದನ್ನೂ ಓದಿ-Weight Loss Tips: ಜಿಮ್‌ಗೆ ಹೋಗಬೇಕಾಗಿಲ್ಲ, ಈ ತರಕಾರಿ ಸೇವಿಸಿದರೂ ಕಡಿಮೆ ಆಗುತ್ತೆ ತೂಕ
ಈ ಸಂದರ್ಭದಲ್ಲಿ ಶಾಸಕರಾದ ಎಂ.ವೈ.ಪಾಟೀಲ, ಪ್ರಿಯಾಂಕ್ ಖರ್ಗೆ, ಶರಣಬಸಪ್ಪಗೌಡ ದರ್ಶನಾಪುರ, ಕನೀಜ್ ಫಾತೀಮಾ, ಜಗದೇವ ಗುತ್ತೇದಾರ, ಬಿ.ಆರ್.ಪಾಟೀಲ, ವೈಜನಾಥ ತಡಕಲ್, ಅಜಯಸಿಂಗ್, ಕೆ.ನೀಲಾ, ಸುಭಾಷ್ ರಾಠೋಡ, ಬಾಬುರಾವ್ ಚವ್ಹಾಣ್, ಆರ್.ಕೆ.ಹುಡಗಿ, ಅರುಣಕುಮಾರ ಪಾಟೀಲ, ವಿಜಯಕುಮಾರ, ಶಿವು ಹೊನಗುಂಟಿ, ಈರಣ್ಣ ಝಳಕಿ, ಭೀಮಣ್ಣ ಸಾಲಿ, ಶಿವಾನಂದ ಪಾಟೀಲ, ಮಲ್ಲಪ್ಪ ಹೊಸಮನಿ, ಸುನೀಲ ದೊಡ್ಡಮನಿ ಸೇರಿದಂತೆ ಉಪಸ್ಥಿತರಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.