ಕದ್ದುಮುಚ್ಚಿ ಥಿಯೇಟರ್‌ಗೆ ಬಂದು ‘ಕೆಜಿಎಫ್-2’ ನೋಡಿದ್ರಾ ನಟಿ ಸಾಯಿ ಪಲ್ಲವಿ..?

ನಟಿ ಸಾಯಿ ಪಲ್ಲವಿ ಕೂಡ ವೇಷ ಮರೆಸಿಕೊಂಡು ಥಿಯೇಟರ್‌ಗೆ ಹೋಗಿ ‘ಕೆಜಿಎಫ್-2‌’ ನೋಡಿ ಬಂದಿದ್ದಾರೆ ಎನ್ನಲಾಗಿದೆ.

Written by - Malathesha M | Edited by - Puttaraj K Alur | Last Updated : May 18, 2022, 07:13 PM IST
  • ಕದ್ದುಮುಚ್ಚಿ ಥಿಯೇಟರ್‍ಗೆ ಬಂದು ‘ಕೆಜಿಫ್-2’ ನೋಡಿದ್ರಾ ಸಾಯಿ ಪಲ್ಲವಿ?
  • ಮುಖಗವಸು ಹಾಕಿಕೊಂಡು ಮಾಲ್‌ ಒಂದರಲ್ಲಿ ಓಡಾಡುತ್ತಿರುವ ಫೋಟೋ ವೈರಲ್‌
  • ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್-2’ ಹೊಗಳಿದ್ದ ನಟಿ ಸಾಯಿ ಪಲ್ಲವಿ
ಕದ್ದುಮುಚ್ಚಿ ಥಿಯೇಟರ್‌ಗೆ ಬಂದು ‘ಕೆಜಿಎಫ್-2’ ನೋಡಿದ್ರಾ ನಟಿ ಸಾಯಿ ಪಲ್ಲವಿ..? title=
‘ಕೆಜಿಫ್-2’ ನೋಡಿದ್ರಾ ಸಾಯಿ ಪಲ್ಲವಿ?

ಬೆಂಗಳೂರು: ಕನ್ನಡದ ಸಿನಿಮಾ ‘ಕೆಜಿಎಫ್-2‌’ ಈಗಾಗಲೇ ಇತಿಹಾಸ ಬರೆದಾಗಿದೆ. ಸ್ವತಃ ದೊಡ್ಡ ದೊಡ್ಡ ಸೆಲೆಬ್ರಿಟಿಗಳೇ ‘ಕೆಜಿಎಫ್-2’ ನೋಡಿ ಅಬ್ಬಬ್ಬಾ..! ಅಂದಿದ್ದಾರೆ. ಹೀಗೆ ಕೆಜಿಎಫ್‌ ಎಲ್ಲೆಲ್ಲೂ ಸದ್ದು ಮಾಡುತ್ತಿರುವ ಹೊತ್ತಲ್ಲೇ ಸೌತ್‌ ಸಿನಿಮಾ ಇಂಡಸ್ಟ್ರಿಯ ಟಾಪ್‌ ನಟಿ, ಎಲ್ಲರ ನೆಚ್ಚಿನ ಸಾಯಿ ಪಲ್ಲವಿ ಅವರು ಕೂಡ ‘ಕೆಜಿಎಫ್-2‌’ ನೋಡಿದ್ದಾರೆ ಅನ್ನೋ ಮಾತು ದಟ್ಟವಾಗಿವೆ. ಆದರೆ ವಿಷಯ ಅದಲ್ಲ, ‘ಕೆಜಿಎಫ್-2‌’ ನೋಡಿದರೂ ಎಲ್ಲರ ಜೊತೆಗೇ ಕೂತು ಸಾಯಿ ಪಲ್ಲವಿ ಸಿನಿಮಾ ವೀಕ್ಷಿಸಿದ್ದಾರೆ ಅನ್ನೋದೆ ಸ್ಪೆಷಲ್.

ಹೌದು, ಸೆಲೆಬ್ರಿಟಿಗಳಿಗೆ ಸೆಕ್ಯೂರಿಟಿಯೇ ಒಂದು ದೊಡ್ಡ ಸಮಸ್ಯೆ. ಎಲ್ಲರಂತೆ ಆರಾಮವಾಗಿ ಸೆಲೆಬ್ರಿಟಿಗಳು ಹೊರಗೆ ಬರೋದಕ್ಕೆ ಆಗೋದೆ ಇಲ್ಲ. ಜನರ ಕಣ್ಣಿಗೆ ಬಿದ್ದರೆ ಸಾಕು, ಅಲ್ಲಿ ಜನಜಂಗುಳಿಯೇ ನೆರೆದುಬಿಡುತ್ತದೆ. ಹೀಗಾಗಿ ಸೆಲೆಬ್ರಿಟಿಗಳು ಹೊರಗೆ ಹೋಗುವಾಗ ವೇಷ ಮರೆಸಿಕೊಂಡು ಹೋಗೋದು ಮಾಮೂಲು. ಇದೇ ರೀತಿ ನಟಿ ಸಾಯಿ ಪಲ್ಲವಿ ಕೂಡ ವೇಷ ಮರೆಸಿಕೊಂಡು ಥಿಯೇಟರ್‌ಗೆ ಹೋಗಿ ‘ಕೆಜಿಎಫ್-2‌’ ನೋಡಿ ಬಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: KGF 2 ತಂಡದಿಂದ ಫ್ಯಾನ್ಸ್‌ಗೆ ಸಿಕ್ತು ಮತ್ತೊಂದು ಸಿಹಿ ಸುದ್ದಿ..

ಥಿಯೇಟರ್‌ಗೆ ರಾಕಿಂಗ್‌ ಎಂಟ್ರಿ!

ಇನ್ನು ನಟಿ ಸಾಯಿ ಪಲ್ಲವಿ ಥಿಯೇಟರ್‌ಗೆ ಹೋಗಿ ಸಿನಿಮಾ ವೀಕ್ಷಿಸುತ್ತಿರುವ ಫೋಟೋ ವೈರಲ್‌ ಆಗುತ್ತಿದೆ. ಈ ರೀತಿ ಸೆಲೆಬ್ರಿಟಿಗಳು ಕದ್ದುಮುಚ್ಚಿ ಹೋಗಿ ಸಿನಿಮಾ ನೋಡೋದು ಮಾಮೂಲಿ. ಹಿಂದೆ ಕೂಡ ಹಲವು ಬಾರಿ ಇಂತಹ ಘಟನೆಗಳು ನಡೆದಿವೆ. ಜನರ ಜೊತೆಗೆ ಸೆಲೆಬ್ರಿಟಿಗಳು ಬೆರೆಯಲು ತುಂಬಾ ಇಷ್ಟಪಡುತ್ತಾರೆ. ಆದರೆ ಜನರ ಮಧ್ಯೆ ಸಿಲುಕಿಕೊಂಡು ಪೇಚಾಟ ಪಡೋದು ಬೇಡ ಎಂಬ ಕಾರಣಕ್ಕೆ ವೇಷ ಮರೆಸಿಕೊಂಡು ಹೋಗುತ್ತಾರೆ. ಇದೇ ರೀತಿ ನಟಿ ಸಾಯಿ ಪಲ್ಲವಿ ಕೂಡ ಮುಖಗವಸು ಹಾಕಿಕೊಂಡು ಮಾಲ್‌ ಒಂದರಲ್ಲಿ ಓಡಾಡುತ್ತಿರುವ ಫೋಟೋ ವೈರಲ್‌ ಆಗಿದೆ.

ಒಟ್ಟಾರೆ ಹೇಳುವುದಾದರೆ ಕನ್ನಡ ಸಿನಿಮಾ ‘ಕೆಜಿಎಫ್-2‌’ ಕಹಳೆ ಎಲ್ಲೆಲ್ಲೂ ಮೊಳಗುತ್ತಿದ್ದು, ಜಗತ್ತಿನಾದ್ಯಂತ ಕನ್ನಡ ಸಿನಿಮಾದ ಹಬ್ಬ ಜೋರಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ‘ಕೆಜಿಎಫ್-2’ 50 ದಿನ ಕಂಪ್ಲೀಟ್‌ ಮಾಡಲಿದ್ದು, ಇದಕ್ಕಾಗಿ ರಾಕಿಂಗ್‌ ಸ್ಟಾರ್‌ ಯಶ್‌ ಅಭಿಮಾನಿಗಳು ಸಂಭ್ರಮದ ತಯಾರಿ ನಡೆಸಿದ್ದಾರೆ.

ಇದನ್ನೂ ಓದಿ: ನಟ ಶಿವರಾಜಕುಮಾರ್‌ ಮುಂದಿನ ಚಿತ್ರ, ನಿರ್ದೇಶಕರು ಯಾರು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News