Kalburgi connect website : ಅನೇಕರಿಗೆ ತಮ್ಮ ಏರಿಯಾಕ್ಕೆ ಸರಿಯಾಗಿ ನೀರು ಬರ್ತಿಲ್ಲಾ, ಬೀದಿ ದೀಪ ಹಾಳಾಗಿದೆ, ಯಾರೂ ಸರಿ ಮಾಡ್ತಿಲ್ಲಾ, ರಸ್ತೆ ಹಾಳಾಗಿದೆ ಅನ್ನೋದು ಸೇರಿದಂತೆ ಹತ್ತಾರು ದೂರುಗಳು  ಇರುತ್ತವೆ. ತಮ್ಮ ದೂರುಗಳನ್ನು ಹೇಳಲು, ತಮಗಾಗುತ್ತಿರುವ ತೊಂದರೆಯನ್ನು ತಿಳಿಸಲು ಸರ್ಕಾರಿ ಕಚೇರಿಯಿಂದ ಕಚೇರಿಗೆ ಅಲೆದು ಅಲೆದು ಅನೇಕರು ಸುಸ್ತಾಗುತ್ತಾರೆ. 


COMMERCIAL BREAK
SCROLL TO CONTINUE READING

ಸಚಿವರನ್ನು ಭೇಟಿಯಾಗಲು ಕೂಡಾ ಆಗದೇ ಇದ್ದಾಗ, ಮೇಲಾಧಿಕಾರಿಗಳು ಸಿಗದೇ ಇದ್ದಾಗ ಸಮಸ್ಯೆಗೆ ಪರಿಹಾರ ಹೇಗೆ ಅನ್ನೋದು ಗೊತ್ತಾಗದೇ ಕಂಗಾಲಾಗುತ್ತಾರೆ. ಆದ್ರೆ ರಾಜ್ಯದಲ್ಲಿ ಮೊದಲ ಬಾರಿಗೆ, ಕಲಬುರಗಿಯಲ್ಲಿ ‘ಕಲಬುರಗಿ ಕನೆಕ್ಟ್ ’ ಮೂಲಕ ಜನರು ತಾವಿದ್ದಲ್ಲಿಂದಲೇ ದೂರನ್ನು ನೀಡಬಹುದು, ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಬಹುದು. ಜೊತೆಗೆ ತಾವು ನೀಡಿದ ದೂರಿನ ಸ್ಥಿತಿಗತಿ ಬಗ್ಗೆ ಕೂಡಾ ಮನಯೆಲ್ಲಿಯೇ ಇದ್ದು ತಿಳಿದುಕೊಳ್ಳಬಹುದು.


ಹೌದು ಅನೇಕ ಜನರು, ತಮ್ಮ ದೂರುಗಳನ್ನು ಸಲ್ಲಿಸಲು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಾರೆ. ಸಚಿವರು ಜಿಲ್ಲೆಗೆ ಬಂದಾಗ, ಮುಂಜಾನೆಯಿಂದ ಸಂಜೆವರಗೆ ಕಾದು, ಸಚಿವರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ನೂರಾರು ಜನರಿಂದ ಅಹವಾಲು ಸ್ವೀಕರಿಸೋ ಸಚಿವರು ಕೂಡಾ, ಮನವಿ ಪಡೆದು ಸುಮ್ಮನಾಗುವ ಅನೇಕ ಘಟನೆಗಳೇ ಹೆಚ್ಚಾಗಿರುತ್ತವೆ. 


ಹೀಗಾಗಿ ಜನರ ದೂರುಗಳು ತಲುಪಬೇಕಾದ ಅಧಿಕಾರಿಗಳಿಗೆ ತಲುಪಿದವಾ, ಅವರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿತಾ ಅನ್ನೋದು ಹೆಚ್ಚಿನ ಸಮಯದಲ್ಲಿ ಗೊತ್ತಾಗೋದಿಲ್ಲಾ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅವರ ಆಪ್ತ ಕಾರ್ಯದರ್ಶಿ ಭೀಮಾಶಂಕರ್ ತೆಗ್ಗಳಿ, ವಿಶೇಷ ಪ್ರಯತ್ನವಹಿಸಿ, ಕಲಬುರಗಿ ಕನೆಕ್ಟ್ ಆರಂಭಿಸಿದ್ದಾರೆ. ಕಲಬುರಗಿ ಕನೆಕ್ಟ್‌ಗೆ ಈಗಾಗಲೇ ಚಾಲನೆ ಸಿಕ್ಕಿದೆ. 


ʻಕಲಬುರಗಿ ಕೆನಕ್ಟ್ʼ ಹೇಗೆ ಕೆಲಸ ಮಾಡುತ್ತೆ?
ಕಲಬುರಗಿ ಕೆನಕ್ಟ್‌ನಲ್ಲಿ ಎಲ್ಲಡೆ ಕ್ಯೂ ಆರ್ ಕೂಡ ಸಿಗುವಂತಹ ವ್ಯವಸ್ಥೆ ಮಾಡಿದ್ದು, ಆ ಕ್ಯೂ ಆರ್ ಕೋಡ್ ಅನ್ನು ಜನರು, ತಮ್ಮ ಮೊಬೈಲ್ ನಲ್ಲಿ ಸ್ಕ್ಯಾನ್ ಮಾಡಿದ್ರೆ ಸಾಕು, ಕಲಬುರಗಿ ಕನೆಕ್ಟ್ ಲಿಂಗ್ ಓಪನ್ ಆಗುತ್ತೆ. ಅಲ್ಲಿ ಸಾರ್ವನಿಜಕರು ತಮ್ಮ ಹೆಸರು, ಮೊಬೈಲ್ ನಂಬರ್ ಹಾಕಿ ರಿಜಿಸ್ಟರ್ ಮಾಡಿಕೊಂಡು, ತಮ್ಮ ಸಮಸ್ಯೆಗಳನ್ನು ಉಲ್ಲೇಖಿಸಿದ್ರೆ ಸಾಕು.


ಇದನ್ನೂ ಓದಿ-ಪ್ರತಿಭಟನೆ ನಡುವೆಯೇ ಛತ್ರಪತಿ ಶಿವಾಜಿ ಮೂರ್ತಿ ತೆರವುಗೊಳಿಸಿದ ಬಾಗಲಕೋಟೆ ನಗರಸಭೆ


ಕಲಬುರಗಿ ನಗರದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯ ಸಿಬ್ಬಂದಿ, ಜನರಿಂದ ಬಂದಿರುವ ದೂರುಗಳನ್ನು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಳುಹಿಸುತ್ತಾರೆ. ಮೇಲಾಧಿಕಾರಿಗಳು, ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರಿನ ಮಾಹಿತಿ ನೀಡಿ, ಅರ್ಜಿ ವಿಲೇವಾರಿ ಮಾಡಲು ಸೂಚನೆ ನೀಡ್ತಾರೆ. 


ಅರ್ಜಿ ವಿಲೇವಾರಿಯಾದ ನಂತರ ದೂರು ನೀಡಿದ ವ್ಯಕ್ತಿಗಳಿಗೆ ಅರ್ಜಿ ವಿಲೇವಾರಿಯಾಗಿದ್ದರ ಬಗ್ಗೆ ಮಾಹಿತಿ ಕೂಡಾ ಬರುತ್ತದೆ. ಜೊತೆಗೆ ಅರ್ಜಿದಾರರು ಕೂಡಾ ತಾವು ನೀಡಿರೋ ಅರ್ಜಿ, ದೂರಿನ ಸ್ಥಿತಿಗತಿಯನ್ನು ಕೂಡಾ ತಿಳಿದುಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ.


ಕಲಬುರಗಿ ಕನೆಕ್ಟ್ ವೆಬ್ ಸೈಟ್ ನ ಮೂಲಕ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಪರಿಹರಿಸಲು ಅಥವಾ ವಿಲೇವಾರಿ ಮಾಡಲು 70 ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಪ್ರಯತ್ನ ಪ್ರಾಮಾಣಿಕವಾಗಿದ್ದು ಸರ್ಕಾರದ‌ ಸೌಲಭ್ಯವನ್ನು ನಾಗರಿಕರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶ ಈ ವೆಬ್ ಸೈಟ್ ಮೂಲಕ ಹೊಂದಲಾಗಿದೆ.


ಸಾರ್ವಜನಿಕರಲ್ಲಿ ಕೆಲವರು ಅನಾವಶ್ಯಕ ಅರ್ಜಿ ಸಲ್ಲಿಸಿದರೂ ಕೂಡಾ ಈ ಬಗ್ಗೆ SMS ಮೂಲಕ‌ ಅರ್ಜಿಯ ವಸ್ತುಸ್ಥಿತಿಯ ಬಗ್ಗೆ ತಿಳಿಸಲಾಗುವುದು. ಜಿಲ್ಲಾಪಂಚಾಯತ್ ಸಿಇಓ ಹಾಗೂ ಜಿಲ್ಲಾಧಿಕಾರಿ ಅವರು ಸಾರ್ವಜನಿಕರು ವೆಬ್ ಸೈಟ್ ನಲ್ಲಿ ಸಲ್ಲಿಸಲಾದ ಎಲ್ಲ ಅರ್ಜಿಗಳನ್ನು ನೋಡಬಹುದಾಗಿದೆ. 


ಇದನ್ನೂ ಓದಿ-ತಮಿಳುನಾಡಿಗೆ ಕಾವೇರಿ ನೀರು: ರಾಜ್ಯ ಸರಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿ