ಬೆಂಗಳೂರು: ಕೊಡಗು ಜಿಲ್ಲೆಯ ನಾಗರಹೊಳೆ ಅರಣ್ಯ ವಾಸಿಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಂದ, ಅರಣ್ಯ ನಿವಾಸಿಗಳಿಗೆ,  ಆಗುತ್ತಿರುವ ಕಿರುಕುಳ ತಪ್ಪಿಸುವಂತೆ, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಅವರು, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯವರಿಗೆ ನಿರ್ದೇಶನ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ತಮ್ಮನ್ನು ಭೇಟಿ ಮಾಡಿ, ಅರಣ್ಯಾಧಿಕಾರಿಗಳಿಂದ ಆಗುತ್ತಿರುವ ಕಿರುಕುಳದ ಬಗ್ಗೆ  ಜೇನು ಕುರುಬ ಸಮುದಾಯದ ಶ್ರೀಮತಿ ಸುಶೀಲಾ ಮತ್ತು ಶಿವು ಅವರು, ಸಚಿವರ ಗಮನ ಸೆಳೆದಿದ್ದರು.


ಇದನ್ನೂ ಓದಿ: One Nation One Registration : ಈಗ ಭೂಮಿಗೂ ಬರಲಿದೆ ‘ಆಧಾರ್ ಸಂಖ್ಯೆ' : ಸರ್ಕಾರ ಆರಂಭಿಸುತ್ತಿದೆ ಹೊಸ ಯೋಜನೆ!


ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸಚಿವರು, ಯಾರ ರಕ್ಷಣೆಯೂ ಇರದ, ಅತ್ಯಂತ ದಯನೀಯ ಪರಿಸ್ಥಿತಿಯಲ್ಲಿ, ಬದುಕನ್ನು ಕಟ್ಟಿಕೊಂಡಿರುವ, ಅರಣ್ಯ ವಾಸಿಗಳಿಗೆ, ಎಲ್ಲ ರೀತಿಯ ರಕ್ಷಣೆ ಒದಗಿಸುವಂತೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯವರಿಗೆ, ನಿರ್ದೇಶನ ನೀಡಿದರು.


ಇದನ್ನೂ ಓದಿ: Gas Cylinder Booking : ಈಗ ನೀವು LPG ಸಿಲಿಂಡರ್ ಅನ್ನು ಉಚಿತವಾಗಿ ಪಡೆಯಬಹುದು! ಅದಕ್ಕೆ ತಕ್ಷಣ ಈ ಕೆಲಸ ಮಾಡಿ


ನಾಗರ ಹೊಳೆ ಪ್ರದೇಶಕ್ಕೆ ಭೇಟಿ ನೀಡಿ, ಅರಣ್ಯ ವಾಸಿಗಳನ್ನುಭೇಟಿ ಮಾಡಿ, ಅವರ ಅಹವಾಲು ಗಳನ್ನು ಸ್ವತಃ ಸ್ವೀಕರಿಸುತ್ತೇನೆ, ಎಂದೂ ಭರವಸೆ ನೀಡಿದರು.ವಿಧಾನ ಪರಿಷತ್ ಸದಸ್ಯ ಶ್ರೀ ಶಾಂತ ರಾಮ್  ಸಿದ್ಧಿ ಅವರೂ ಉಪಸ್ಥಿತರಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.