ಕೆ.ಎಸ್. ಈಶ್ವರಪ್ಪ ವಿರುದ್ಧದ ಎಫ್ಐಆರ್ ಗೆ ಹೈಕೋರ್ಟ್ ತಡೆ
`ರಾಷ್ಟ್ರ ದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲುವಂತಹ ಕಾನೂನು ತನ್ನಿ` ಎಂದು ಸಂಸದ ಡಿ.ಕೆ.ಸುರೇಶ್, ವಿನಯ್ ಕುಲಕರ್ಣಿ ವಿರುದ್ಧ ಕೆ.ಎಸ್.ಈಶ್ವರಪ್ಪ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ ಐ ಆರ್ ರದ್ದುಕೋರಿದ ಅರ್ಜಿ ವಿಚಾರಣೆ ವೇಳೆ ಆಕ್ಷೇಪಾರ್ಹ ಹೇಳಿಕೆ ನೀಡುವ ರಾಜಕಾರಣಿಗಳಿಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಬೆಂಗಳೂರು: "ರಾಷ್ಟ್ರ ದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲುವಂತಹ ಕಾನೂನು ತನ್ನಿ" ಎಂದು ಸಂಸದ ಡಿ.ಕೆ.ಸುರೇಶ್, ವಿನಯ್ ಕುಲಕರ್ಣಿ ವಿರುದ್ಧ ಕೆ.ಎಸ್.ಈಶ್ವರಪ್ಪ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ ಐ ಆರ್ ರದ್ದುಕೋರಿದ ಅರ್ಜಿ ವಿಚಾರಣೆ ವೇಳೆ ಆಕ್ಷೇಪಾರ್ಹ ಹೇಳಿಕೆ ನೀಡುವ ರಾಜಕಾರಣಿಗಳಿಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಇದನ್ನೂ ಓದಿ: ಗೋ ಹತ್ಯೆ, ಜಾನುವಾರುಗಳ ರಕ್ಷಣೆಗೆ ಬಜೆಟ್‌ನಲ್ಲಿ ಯಾವುದೇ ಯೋಜನೆ ಇಲ್ಲ : ಶಾಸಕ ಪ್ರಭು ಚವ್ಹಾಣ್
"ನಮ್ಮ ಧುರೀಣರು ಒಳ್ಳೆಯ ಭಾಷೆ ಏಕೆ ಬಳಸುತ್ತಿಲ್ಲ? ಮಾತನಾಡುವಾಗ ಉತ್ತಮ ಸಂಸ್ಕೃತಿಯನ್ನೇಕೆ ಪ್ರತಿಬಿಂಬಿಸುವುದಿಲ್ಲ? ಈ ರೀತಿ ಮಾತನಾಡುವ ಮೂಲಕ ಭಾಷೆಯ ಮೇಲೆ ಏಕೆ ದೌರ್ಜನ್ಯ ಎಸಗುತ್ತಾರೆ? ಕರ್ನಾಟಕ ವಿವಿಧ ಸಿದ್ಧಾಂತದ ಜನರನ್ನು ಹೊಂದಿರುವ ರಾಜ್ಯ. ಭಾಷೆ ಬಳಕೆಯ ಬಗ್ಗೆ ರಾಜಕಾರಣಿಗಳು ಎಚ್ಚರ ವಹಿಸಬೇಕು. ಶಾಲಾ ಮಕ್ಕಳು ನಮ್ಮನ್ನು ಗಮನಿಸುತ್ತಿರುತ್ತಾರೆ ಎಂಬ ಅರಿವಿರಲಿ" ಎಂದು ವಿಶೇಷ ನ್ಯಾಯಪೀಠ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಬಜೆಟ್ ರಾಜ್ಯದ ವಿನಾಶಕ್ಕೆ ಬುನಾದಿ ಹಾಕಿದ್ದಾರೆ : ಹೆಚ್‌ಡಿಕೆ
ಸಂಸದ ಅನಂತ ಕುಮಾರ ಹೆಗಡೆ ವಿರುದ್ಧದ ಪ್ರಕರಣದಲ್ಲೂ ಇದೇ ವಿಶೇಷ ನ್ಯಾಯಪೀಠದಿಂದ ತೀವ್ರ ಅಸಮಾಧಾನ
"ಸಿಎಂ ಆಗಲಿ ಪಿಎಂ ಆಗಲಿ, ಯಾರ ಬಗ್ಗೆಯೂ ಹಗುರವಾದ ಭಾಷೆ ಬಳಸಬಾರದು. ನಿಮಗೆ ಇಷ್ಟವಿಲ್ಲ ಎಂದಾದರೆ ಅಂಥವರಿಗೆ ಮತ ಹಾಕ ಬೇಡಿ. ಸಿಎಂ ರಾಜ್ಯಕ್ಕೆ ಮಾತ್ರವಲ್ಲ ನ್ಯಾಯಾಧೀಶರಿಗೂ ಅವರು ಸಿಎಂ ಹಾಗಾಗಿ ಎಲ್ಲರೂ ಭಾಷೆ ಬಳಕೆಯಲ್ಲಿ ನಿಗಾವಹಿಸಬೇಕು. ಒಳ್ಳೆ ಭಾಷೆ ಪ್ರಯೋಗ ಮಾಡಬೇಕು. ಅರ್ಜಿದಾರರು ಉತ್ತಮ ವಾಗ್ಮಿ ಇರಬಹುದು ಆದ ಮಾತ್ರಕ್ಕೆ ಅಸಂಬದ್ಧ ಪದ ಪ್ರಯೋಗ ಸಲ್ಲದು. ಗೌರವಯುತವಾಗಿ ನಡೆದುಕೊಳ್ಳುವಂತೆ ನಿಮ್ಮ ಅರ್ಜಿದಾರರಿಗೆ ತಿಳುವಳಿಕೆ ಹೇಳಿ ನ್ಯಾ.ಕೃಷ್ಣ ಎಸ್ ದೀಕ್ಷಿತ್ ಎಂದು ಕಿವಿಮಾತು ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.