ಬೆಂಗಳೂರು: ನೀವು ಗೂಗಲ್ ನಲ್ಲಿ ಭಾರತದಲ್ಲಿ ugliest language ಯಾವುದು ಎನ್ನುವುದನ್ನು ಹುಡುಕುತ್ತಾ ಹೊರಟಾಗ ಕನ್ನಡ ಎನ್ನುವ ಉತ್ತರವನ್ನು ಗೂಗಲ್ ಮೊದಲಿಗೆ ತೋರಿಸುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Anushka Shetty: ಹೆತ್ತವರಿಗೆ ಕನ್ನಡದಲ್ಲೇ ವಿಶ್ ಮಾಡಿದ ಅನುಷ್ಕಾಗೆ ನೆಟ್ಟಿಗರು ಹೇಳಿದ್ದೇನು ಗೊತ್ತಾ


ಈಗ ಇದರ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಕನ್ನಡಿಗರು ಗೂಗಲ್ ವಿರುದ್ಧ ಸಿಡಿದೆದ್ದಿದಾರೆ. ಇನ್ನೊಂದೆಡೆಗೆ ಈಗ ಕರ್ನಾಟಕ ಸರ್ಕಾರ ಕೂಡ ಗೂಗಲ್ (Google) ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದೆ.ಈ ಕುರಿತಾಗಿ ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ್ ಲಿಂಬಾವಳಿ ಅವರು ಗೂಗಲ್ ಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.


Kannada) ಭಾಷೆಯು ತನ್ನದೇ ಆದ ಇತಿಹಾಸವನ್ನು ಹೊಂದಿದೆ, ಇದು 2,500 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದೆ.ಕನ್ನಡವನ್ನು ಈಗ ಭಾರತದಲ್ಲಿ ಕೊಳಕು ಭಾಷೆ ಎಂದು ಕರೆದಿದ್ದರೆ, ಇದು ಕೇವಲ ಕನ್ನಡಿಗರ ಹೆಮ್ಮೆಯನ್ನು ಅವಮಾನಿಸುವ ಗೂಗಲ್‌ನ ಪ್ರಯತ್ನವಾಗಿದೆ ”ಎಂದು ಲಿಂಬಾವಳಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಲಿಂಬಾವಳಿ ಅವರು ಕನ್ನಡ ಮತ್ತು ಸಂಸ್ಕೃತಿ ಕಾರ್ಯದರ್ಶಿಗೆ ಕಾನೂನು ಇಲಾಖೆಯನ್ನು ಸಂಪರ್ಕಿಸಿ ಗೂಗಲ್‌ಗೆ ನೋಟಿಸ್ ನೀಡುವಂತೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ: ಕನ್ನಡಿಗರಿಗೆ ಒಂದು ಸಿಹಿ ಸುದ್ದಿ, ದೆಹಲಿಯಲ್ಲಿ ಸ್ಥಾಪನೆಯಾಗಲಿದೆ ಕನ್ನಡ ಭಾಷಾ ಅಕಾಡೆಮಿ!


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.