ಕನ್ನಡಿಗರಿಗೆ ಒಂದು ಸಿಹಿ ಸುದ್ದಿ, ದೆಹಲಿಯಲ್ಲಿ ಸ್ಥಾಪನೆಯಾಗಲಿದೆ ಕನ್ನಡ ಭಾಷಾ ಅಕಾಡೆಮಿ!

ಕನ್ನಡಿಗರ ಮನವಿಗೆ ಸ್ಪಂಧಿಸಿದ ದೆಹಲಿ ಸಿಎಂ ಕೇಜ್ರಿವಾಲ್.

Yashaswini V Yashaswini V | Updated: Aug 10, 2018 , 07:56 AM IST
ಕನ್ನಡಿಗರಿಗೆ ಒಂದು ಸಿಹಿ ಸುದ್ದಿ, ದೆಹಲಿಯಲ್ಲಿ ಸ್ಥಾಪನೆಯಾಗಲಿದೆ ಕನ್ನಡ ಭಾಷಾ ಅಕಾಡೆಮಿ!

ನವದೆಹಲಿ: ರಾಷ್ಟ್ರ‌ ರಾಜಧಾನಿ ದೆಹಲಿಯಲ್ಲಿ ಕನ್ನಡ ಭಾಷಾ ಅಕಾಡೆಮಿ ಸ್ಥಾಪಿಸಲು ದೆಹಲಿ ಸರ್ಕಾರ ನಿರ್ಧರಿಸಿದ್ದು, ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ದೆಹಲಿಯಲ್ಲಿ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆಗೆ ಮುಂದಾಗಿದೆ.

ಗುರುವಾರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ದೆಹಲಿ ಸರ್ಕಾರದ ಸಂಪುಟ ಸಭೆಯಲ್ಲಿ ಕನ್ನಡ ಅಕಾಡೆಮಿ ಸ್ಥಾಪಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗಿದೆ. 

ಕನ್ನಡವೂ ಸೇರಿದಂತೆ 15 ಭಾಷೆಗಳ ಅಕಾಡಮಿ ಸ್ಥಾಪಿಸುವ ಸಂಪುಟ ನಿರ್ಣಯಕ್ಕೆ ದೆಹಲಿ ಲೆಫ್ಟಿನೆಂಟ್ ಗರ್ವನರ್ ಒಪ್ಪಿಗೆ ಬಾಕಿಯಿದ್ದು ಕೆಲವೇ ದಿನಗಳಲ್ಲಿ ಅಕಾಡೆಮಿಗಳು ಸ್ಥಾಪನೆಯಾಗಲಿವೆ. ದೆಹಲಿಯಲ್ಲಿ ಕನ್ನಡ ಅಕಾಡೆಮಿ ಸ್ಥಾಪನೆಗೆ  ಆಗಲೇಬೇಕು ಎಂದು ದೆಹಲಿ ಕರ್ನಾಟಕ ಸಂಘ ದೆಹಲಿ ಸರ್ಕಾರವನ್ನು ಒತ್ತಾಯಿಸಿತ್ತು. ದ್ರಾವೀಡ ಭಾಷೆಗಳ ವಿಚಾರ ಸಂಕಿರಣ ಮಾಡಿ ಒಕ್ಕೊರಲಿನ ಒತ್ತಾಯವನ್ನು ಕೇಂದ್ರ ಸರ್ಕಾರಕ್ಕೆ ದೆಹಲಿ ಕರ್ನಾಟಕ ಸಂಘ ಮಾಡಿತ್ತು. ಕರ್ನಾಟಕ ಸಂಘದ ಮನವಿಗೆ ದೆಹಲಿ ಸರ್ಕಾರ ಈಗ ಸ್ಪಂದಿಸಿದ್ದು ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆಯಾಗಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಕನ್ನಡ ಸಂಘದ ಅಧ್ಯಕ್ಷ ವಸಂತ್​ ಶೆಟ್ಟಿ ಅವರು, ದೆಹಲಿ ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹ ಎಂದಿದ್ದಾರೆ.