ಸಿಖ್ ವಿದ್ಯಾರ್ಥಿನಿಗೆ ಟರ್ಬನ್ ತೆಗೆಯಲು ಹೇಳಿದ ಮೌಂಟ್ ಕಾರ್ಮೆಲ್ ಕಾಲೇಜಿನ ಆಡಳಿತ ಮಂಡಳಿ...!
ವಿದ್ಯಾರ್ಥಿನಿಯರ ಹಿಜಾಬ್ ಪ್ರಶ್ನೆ ಬಳಿಕ ಟರ್ಬನ್ ಧರಿಸುತ್ತಿದ್ದ ಕಾಲೇಜು ಯೂನಿಯನ್ ಅಧ್ಯಕ್ಷೆಯನ್ನು ಕರೆದು ಟರ್ಬನ್ ತೆಗೆಯಲು ಒತ್ತಾಯಿಸಿದ ಘಟನೆ ನಗರದ ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಡೆದಿದೆ.
ಬೆಂಗಳೂರು: ವಿದ್ಯಾರ್ಥಿನಿಯರ ಹಿಜಾಬ್ ಪ್ರಶ್ನೆ ಬಳಿಕ ಟರ್ಬನ್ ಧರಿಸುತ್ತಿದ್ದ ಕಾಲೇಜು ಯೂನಿಯನ್ ಅಧ್ಯಕ್ಷೆಯನ್ನು ಕರೆದು ಟರ್ಬನ್ ತೆಗೆಯಲು ಒತ್ತಾಯಿಸಿದ ಘಟನೆ ನಗರದ ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಡೆದಿದೆ.
ಇದನ್ನೂ ಓದಿ: ಸಂಕಟ ಬಂದಾಗ ಅವಧೂತರ ಮೊರೆ ಹೋದ ಈಶ್ವರಪ್ಪ.. ವಿನಯ್ ಗುರೂಜಿ ಭೇಟಿಯಾದ ಸಚಿವರು
ಹಿಜಾಬ್ಗೆ ಅವಕಾಶ ಇಲ್ಲ ಎಂದರೆ ಟರ್ಬನ್ ಯಾಕೆ? ಎಂದು ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಆಡಳಿತ ಮಂಡಳಿಗೆ ವಿದ್ಯಾರ್ಥಿನಿಯರು ಗುರುವಾರ ಪ್ರಶ್ನೆ ಮಾಡಿದ್ದಾರೆ.ಕೋರ್ಟ್ ಸೂಚನೆಯಂತೆ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ.ಮೊದಲಿನಿಂದಲೂ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಹಿಜಾಬ್ ಧರಿಸಲು ತರಗತಿಯಲ್ಲಿ ಅವಕಾಶ ಇಲ್ಲ, ಆದರೆ ಕೋರ್ಟ್ ಆದೇಶದ ಬೆನ್ನಲೆ ಪ್ರಶ್ನೆ ಮಾಡಿದ ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು, ಕೋರ್ಟ್ ಆದೇಶದಲ್ಲಿ ಧರ್ಮಸೂಚಕ ವಸ್ತ್ರಕ್ಕೆ ಅವಕಾಶ ಇಲ್ಲ ಎನ್ನುವ ನಿಯಮವಿದೆ. ನಮ್ಮ ಕಾಲೇಜು ವಿದ್ಯಾರ್ಥಿನಿಯ ಸಂಘದ ಅಧ್ಯಕ್ಷೆ ಟರ್ಬನ್ ಧರಿಸುತ್ತಾರೆ.ಹಾಗಾಗಿ ಅವರಿಗೆ ಟರ್ಬನ್ ಹಾಕಲು ಅವಕಾಶ ಏಕೆ ನೀಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಕಾಲೇಜು ಪ್ರಾರಂಭವಾದ ಬಳಿಕ ಟರ್ಬನ್ ತೆಗೆಯಲಿಕ್ಕೆ ಆಗುತ್ತಾ?ಎಂದು ಕಾಲೇಜು ಆಡಳಿತ ಮಂಡಳಿ ಪ್ರಶ್ನಿಸಿದೆ, ಆದರೆ ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ ನಮ್ಮಲ್ಲಿ ಟರ್ಬನ್ ಕಡ್ಡಾಯ ಎಂದು ಹೇಳಿದರು. ಇನ್ನೊಂದೆಡೆಗೆ ವಿದ್ಯಾರ್ಥಿನಿಯ ಪೋಷಕರು ಸಹ ಆಡಳಿತ ಮಂಡಳಿಗೆ ಇದೆ ಉತ್ತರವನ್ನು ನೀಡಿದ್ದಾರೆ.
ಡಿಡಿಪಿಐ ಶ್ರೀರಾಮ್ ಭೇಟಿ:
ಬಳಿಕ ಹಿಜಾಬ್ ಧರಿಸುತ್ತಿದ್ದ ವಿದ್ಯಾರ್ಥಿನಿಯರ ಪೋಷಕರು ಸಹ ಕಾಲೇಜು ಆಡಳಿತ ಮಂಡಳಿಗೆ ಪ್ರಶ್ನೆ ಮಾಡಿದ್ದಾರೆ. ಡಿಡಿಪಿಐ ಶ್ರೀರಾಮ್ ಕಾಲೇಜು ಭೇಟಿ ನೀಡಿ ಮಕ್ಕಳ ಜೊತೆ ಚರ್ಚೆ ಮಾಡಿದ್ದಾರೆ. ಸದ್ಯ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ಬರುತ್ತಿದ್ದಾರೆ, ಇದರಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ ಎಂದು ಮೌಂಟ್ ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಿನ್ಸಿಪಾಲ್ ರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: Sourav Ganguly: ಬಿಸಿಸಿಐ ಮುಖ್ಯಸ್ಥ ಗಂಗೂಲಿ ಕುರ್ಚಿಯೂ ಹೋಗುತ್ತಾ? ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಸ್ಪರ್ಧಿಗಳು!
ಮೌಂಟ್ ಕಾರ್ಮೆಲ್ ಕಾಲೇಜ್ ಪ್ರಿನ್ಸಿಪಾಲ್ ಪ್ರತಿಕ್ರಿಯೆ:
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಮೌಂಟ್ ಕಾರ್ಮೆಲ್ ಕಾಲೇಜಿನ ಪ್ರಿನ್ಸಿಪಾಲ್ ಭಬಿತಾ ಹೈಕೋರ್ಟ್ ಆದೇಶವನ್ನು ಪಾಲಿಸುತ್ತೇವೆ. ಹೈಕೋರ್ಟ್ ಆದೇಶದಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳೆಲ್ಲರೂ ಹಿಜಾಬ್ ತೆಗೆದು ಒಳಗಡೆ ಬರುತ್ತಿದ್ದರು.ಈ ವೇಳೆ ಸಿಖ್ ಸಮುದಾಯದ ವಿದ್ಯಾರ್ಥಿನಿ ಟರ್ಬಲ್ ಹಾಕಿದ್ದಳು. ನಮ್ಮ ಹಿಜಾಬ್ ತೆಗೆಸಿದಂತೆ ಟರ್ಬಲ್ ನ್ನು ಕೂಡ ತೆಗೆಸಬೇಕು ಎಂದು ಇತರ ವಿದ್ಯಾರ್ಥಿಗಳು ಮನವಿ ಮಾಡಿದ್ದರು ಎಂದು ವಿವಾದದ ಕುರಿತು ಮಾಹಿತಿ ನೀಡಿದ್ದಾರೆ.
ಟರ್ಬನ್ ಹಾಕಿದ್ದ ವಿದ್ಯಾರ್ಥಿನಿ ನಮ್ಮ ಕಾಲೇಜಿನ ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷೆಯಾಗಿದ್ದು, ಅವರ ಟರ್ಬನ್ ಕೂಡ ತೆಗೆಸಬೇಕು ಎಂದು ವಿದ್ಯಾರ್ಥಿಗಳು ಹೇಳಿದ್ದರು, ನಿಮಗೆ ಟರ್ಬನ್ ತೆಗೆಯಲಿಕ್ಕೆ ಆಗುತ್ತಾ ಎಂದು ಆ ವಿದ್ಯಾರ್ಥಿನಿಯನ್ನು ಕೇಳಿದ್ದೆವು, ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಅವರು ಟರ್ಬನ್ ತೆಗೆಲಿಕ್ಕೆ ಆಗಲ್ಲ, ಇದು ನಮ್ಮ ಸಿಖ್ ಧರ್ಮದ ಸಂಕೇತ ಎಂದು ಅವರು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: 'ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದಾಗಿ ಪ್ರತಿ ಟೆಸ್ಟ್ ಸರಣಿಯು ಅತ್ಯಂತ ಮಹತ್ವದ್ದಾಗಿದೆ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.