ಬೆಂಗಳೂರು: ನಶಿಸುತ್ತಿರುವ ತೊಗಲು ಬೊಂಬೆಯಾಟವನ್ನು ರಕ್ಷಿಸಿ ಬೆಳೆಸುವುದು ಇಂದಿನ ಅಗತ್ಯವಾಗಿದ್ದು, ಈ ಕಾರ್ಯಕ್ಕೆ ಯುವ ಸಮೂಹವನ್ನು ಸೆಳೆಯಬೇಕು ಎಂದು ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : LIC ಈ ಪಾಲಿಸಿಯಲ್ಲಿ ₹150 ಹೂಡಿಕೆ ಮಾಡಿ, ನಿಮ್ಮ ಮಗುವನ್ನು ಲಕ್ಷಾಧಿಪತಿ ಮಾಡಿ


ಎನ್.ಆರ್. ಕಾಲೋನಿಯ ಡಾ. ಸಿ. ಅಶ್ವತ್ಥ ಕಲಾ ಭವನದಲ್ಲಿ ರಾಜ್ಯದ ಏಕೈಕ ಮಹಿಳಾ ತಂಡ ರಂಗಪುತ್ಥಳ ಯಶೋಧ ಪಪೆಟ್ರಿ ಸಂಸ್ಥೆ ಆಯೋಜಿಸಿದ್ದ ಗೊಂಬೆಯಾಟ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತೊಗಲು ಗೊಂಬೆಯಾಟ ಕಲೆಯನ್ನು ಪೋಷಿಸಲು ಈ ಸಂಸ್ಥೆ ಮಹಿಳಾ ತಂಡ ಪೌರಾಣಿಕ ಕಥೆಗಳನ್ನು ನವೀನ ಕಲ್ಪನೆಗಳೊಂದಿಗೆ ಯುವ ಜನತೆಗೆ ಪರಿಚಯಿಸುವ ಪ್ರಯತ್ನದಲ್ಲಿ ಈ ತಂಡ ನಿತರವಾಗಿದೆ. ಪಾರಂಪರಿಕ ಗ್ರಾಮೀಣ ಕಲೆಯಾದ ತೊಗಲು ಗೊಂಬೆಯಾಟವನ್ನು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ನೂರಾರು ಯಶಸ್ವಿ ಪ್ರದರ್ಶನಗಳನ್ನು ನೀಡಿದೆ ಎಂದು ಹೇಳಿದರು.


ಇದನ್ನೂ ಓದಿ : PM Fasal Bima Yojana : ರೈತರಿಗೆ ಭರ್ಜರಿ ಸುದ್ದಿ ನೀಡಲಿದೆ ಸರ್ಕಾರ! ಬೆಳೆ ವಿಮೆಯಲ್ಲಿ ಭಾರಿ ಬದಲಾವಣೆ!


ರಂಗಪುತ್ಥಳಿ ಯಶೋದ ಪಪೆಟ್ರಿ ಸಂಸ್ಥೆಯ 13ನೇ ವರ್ಷಾಚರಣೆ ಅಂಗವಾಗಿ ತೊಗಲು ಬೊಂಬೆಯಾಟ ಆಯೋಜಿಸಲಾಗಿತ್ತು.ಇದೇ ಸಂದರ್ಭದಲ್ಲಿ ಡಾ. ರಾಧಾಕೃಷ್ಣ ಉರಾಳ ಅವರಿಂದ ಯಕ್ಷಗಾನ ಪ್ರಸ್ತುತಪಡಿಸಲಾಯಿತು.ಹಾಸ್ಯ ಬರಹಗಾರ ನರಸಿಂಹಮೂರ್ತಿ, ಗೊಂಬೆಯಾಟ ಕಲಾವಿದ ಆರ ಕಟ್ಟಿ ಭಾಗವಹಿಸಿದ್ದಾರೆ. ಹಿರಿಯ ಚಿತ್ರನಟ ಶರಣ್, ಸಂಸ್ಥೆಯ ಮುಖ್ಯಸ್ಥರಾದ ಯಶೋಧ ಶಶಿಧರ್ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.