ಬೆಳಗಾವಿ: ಕಳೆದ ಎರಡು ದಿನಗಳಿಂದ ಕುಂದಾನಗರಿ ವಾತಾವರಣವೇ ಬದಲಾಗಿದೆ. ಗಡಿಭಾಗಕ್ಕೆ ತಟ್ಟಿದ  ಒಖಿ ಚಂಡಮಾರುತದ ಪ್ರಭಾವದಿಂದಾಗಿ ವಿಪರೀತ ಚಳಿ ಮತ್ತು ತುಂತುರು ಮಳೆ ಸುರಿಯುತಿದ್ದು ಜನರು ವಿವಿಧ ಖಾಯಿಲೆಗಳಿಂದ ಬಳಲುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಒಖಿ ಚಂಡಮಾರುತದಿಂದಾಗಿ ವಾತಾವರಣದಲ್ಲಿ ದಿಡೀರ್ ಬದಲಾವಣೆ ಉಂಟಾಗಿದ್ದು, ತಣ್ಣನೆಯ ವಾತಾವರಣದಿಂದಾಗಿ ಕಾಯಿಲೆಗಳು ಶುರುವಾಗಿದೆ. ಬೆಳಗಾವಿಯಲ್ಲಿ ಕಡಿಮೆ ಉಷ್ಣಾಂಶ ದಾಖಲಾಗಿದೆ. ವಿಪರೀತ ಚಳಿಯಿಂದಾಗಿ ಜನರು ಹೊರ ಬರುವುದೇ ಕ್ಲಿಷ್ಟಕರ ಸಂಗತಿಯಾಗಿದೆ. 


ಶೀತ, ಜ್ವರ, ಕೆಮ್ಮಿನಿಂದಾಗಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ದಾಖಲಾತಿಯ ಸಂಖ್ಯೆ ಕಳೆದ ಒಂದು ವಾರದಲ್ಲಿ ಹೆಚ್ಚಾಗಿದೆ. ಇದೇ ಕಾರಣಕ್ಕಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.