ಬೆಂಗಳೂರು : ಕಬ್ಬಿನ ಬಾಕಿ ಮೊತ್ತ ಬಿಡುಗಡೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಬ್ಬು ಬೆಳೆಗಾರ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ ಕಬ್ಬು ಬೆಳೆಗಾರರಿಗಾಗಿ  ₹204.47 ಕೋಟಿ ಹಣ ಬಿಡುಗಡೆ ಮಾಡಲು ತೀರ್ಮಾನಿಸಿದೆ. 


COMMERCIAL BREAK
SCROLL TO CONTINUE READING

ವಿಕಾಸಸೌಧದಲ್ಲಿ ಇಂದು ಕಬ್ಬು ಬೆಳೆಗಾರರ ಹಾಗೂ ರೈತ ಹೋರಾಟಗಾರ ಕುರುಬೂರು ಶಾಂತಕುಮಾರ್, ಸಿದ್ದಗೌಡ ಮೋದಗಿ ಮತ್ತಿತರರ ಜೊತೆ ಸಭೆ ನಡೆಸಿದ ಸಚಿವ ಶಂಕರ್ ಪಾಟೀಲ್‌ ಮುನೇನಕೊಪ್ಪ, ಕಬ್ಬು ಬೆಳೆಗಾರರಿಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡರು.


ಇದನ್ನೂ ಓದಿ- ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಬಳಸಿ ಸೋಲಾರ್ ಸೈಕಲ್ ತಯಾರಿಸಿದ ಐಟಿಐ ವಿದ್ಯಾರ್ಥಿಗಳು


ಎಫ್ಆರ್ಪಿ ದರದ ಪಾವತಿ ಬಳಿಕ ಹೆಚ್ಚುವರಿಯಾಗಿ ಪ್ರತಿ ಟನ್ ಗೆ 50 ರೂಪಾಯಿಯಂತೆ ಕಬ್ಬು ಬೆಳೆಗಾರರಿಗೆ ಒಟ್ಟು 204.47 ಕೋಟಿ ರೂ. ನೀಡಲು ಸರ್ಕಾರ ಒಪ್ಪಿಗೆ ನೀಡಲಾಯಿತು.


ಇದನ್ನೂ ಓದಿ- ವಿವಿಧ ಬೇಡಿಕೆಗಳಿಗೆ ಒತ್ತಾಯ: ಡಿ.17ಕ್ಕೆ ರಾಜ್ಯಾದ್ಯಂತ ಕಾಲೇಜುಗಳು ಬಂದ್


ಮೊದಲ ಹಂತದಲ್ಲಿ ಕಬ್ಬಿನ  ಉಪ ಉತ್ಪನ್ನ ಎಥೆನಾಲ್ ಮೇಲಿನ ಲಾಭ ನೀಡಲು ಮುಂದಾದ ರಾಜ್ಯ ಸರ್ಕಾರ, ಹಾಗೂ ಈ ತೀರ್ಮಾನವನ್ನು ಇಂದೇ ಆದೇಶ ಹೊರಡಿಸಲು ಆಯುಕ್ತರಿಗೆ ಸಚಿವ ಮುನೇನಕೊಪ್ಪ ಸೂಚನೆ ನೀಡಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.